ಆರ್‌ಸಿಬಿ Vs ರಾಜಸ್ಥಾನ: ಕೊಹ್ಲಿ, ಸ್ಮಿತ್ ಪಡೆಗೆ ಎರಡು ಕಠಿಣ ಸವಾಲುಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಇಂದು (ಅ 3) ಅಬುಧಾಬಿಯಲ್ಲಿ ಮುಖಾಮುಖಿಯಾಗಲಿವೆ. ಬೆಂಗಳೂರು ತಂಡ ಮೂರು ಪಂದ್ಯದಲ್ಲಿ ಎರಡು ಪಂದ್ಯವನ್ನು ಗೆದ್ದು ನಾಲ್ಕು ಪಾಯಿಂಟ್ ಗಳಿಸಿದೆ.
ಇನ್ನು, ರಾಜಸ್ಥಾನ ತಂಡ ಕೂಡಾ ಎರಡು ಪಂದ್ಯವನ್ನು ಗೆದ್ದಿದ್ದು, ನೆಟ್ ರನ್ ರೇಟ್ ಆರ್‌ಸಿಬಿಗಿಂತ ಉತ್ತಮವಾಗಿರುವುದರಿಂದ ಪಾಯಿಂಟ್ ಪಟ್ಟಿಯಲ್ಲಿ ಬೆಂಗಳೂರಿಗಿಂತ ಮುಂದಿದೆ. ಅಬುಧಾಬಿಯ ಶೇಖ್ ಜಯೇದ್ ಮೈದಾನದಲ್ಲಿ ಇಂದಿನ ಪಂದ್ಯ ನಡೆಯಲಿದೆ.
ಇದುವರೆಗೆ ಐಪಿಎಲ್ ಇತಿಹಾಸದಲ್ಲಿ ಇತ್ತಂಡಗಳು ಇಪ್ಪತ್ತು ಬಾರಿ ಮುಖಾಮುಖಿಯಾಗಿದ್ದು, ಬೆಂಗಳೂರು ತಂಡ ಎಂಟರಲ್ಲಿ ಮತ್ತು ರಾಜಸ್ಥಾನ ತಂಡ ಹತ್ತು ಪಂದ್ಯ ಗೆದ್ದಿದ್ದರೆ, ಎರಡು ಪಂದ್ಯಗಳು ರದ್ದಾಗಿವೆ.
ಮುಂಬೈ ವಿರುದ್ದ ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ಗೆಲ್ಲುವ ಮೂಲಕ, ಆತ್ಮವಿಶ್ವಾಸ ವೃದ್ದಿಸಿಕೊಂಡಿರುವ ವಿರಾಟ್ ಕೊಹ್ಲಿ ಪಡೆ, ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವನ್ನು ಹೇಗೆ ಎದುರಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಕೊಹ್ಲಿ, ಸ್ಮಿತ್ ಪಡೆಗೆ ಎರಡು ಕಠಿಣ ಸವಾಲುಗಳು:

ಅಬುಧಾಬಿಯ ಶೇಖ್ ಜಯೇದ್ ಮೈದಾ
ಅಬುಧಾಬಿಯ ಶೇಖ್ ಜಯೇದ್ ಮೈದಾನದಲ್ಲಿ ನಡೆಯುತ್ತಿರುವ ಐದನೇ ಪಂದ್ಯ ಇದಾಗಿದೆ. ಆರ್‌ಸಿಬಿ ಮತ್ತು ರಾಜಸ್ಥಾನ ತಂಡಗಳು ಈ ಮೈದಾನದಲ್ಲಿ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ರಾಜಸ್ಥಾನ ತಂಡ ಶಾರ್ಜಾದಲ್ಲಿ ಒಂದು ಪಂದ್ಯವನ್ನು ಆಡಿದ್ದರೆ, ಆರ್‌ಸಿಬಿ ತಂಡ ದುಬೈನಿಂದ ಹೊರಗೆ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ.

ಆರ್‌ಸಿಬಿ Vs ರಾಜಸ್ಥಾನ
ಅಬುಧಾಬಿಯಲ್ಲಿ ಎರಡೂ ತಂಡಗಳು ಮೊದಲ ಬಾರಿ ಮುಖಾಮುಖಿಯಾಗುತ್ತಿರುವುದರಿಂದ, ಪಿಚ್ ಕಂಡಿಷನ್ ಬಗ್ಗೆ ಎರಡೂ ತಂಡಗಳಿಗೆ ಹೆಚ್ಚಿನ ಮಾಹಿತಿಯಿಲ್ಲ. ಹಾಗಾಗಿ, ತಂಡಗಳಿಗೆ, ಟೀಂ ಆಯ್ಕೆ ಮಾಡುವಲ್ಲಿ, ಟಾಸ್ ವಿನ್ ಆದರೆ ಏನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಸವಾಲಾಗಲಿದೆ. ಈ ಸೀಸನ್ ನಲ್ಲಿ ಇದುವರೆಗೆ ಈ ಪಿಚ್ ನಲ್ಲಿ ದಾಖಲಾದ ಅತಿಹೆಚ್ಚಿನ ಸ್ಕೋರ್ ಎಂದರೆ 191.

ಈ ಸಾಲಿನ ಮೊದಲ ಡಬಲ್ ಹೆಡರ್ ಪಂದ್ಯ
ಇನ್ನೊಂದು ಈ ಸಾಲಿನ ಮೊದಲ ಡಬಲ್ ಹೆಡರ್ ಪಂದ್ಯ ಇದಾಗಲಿದೆ. ಅಕ್ಟೋಬರ್ ಮೂರರ ಮಧ್ಯಾಹ್ನ 3.30ಕ್ಕೆ ಈ ಪಂದ್ಯ ಆರಂಭವಾಗಲಿದೆ. ಅಂದರೆ ಅಲ್ಲಿನ ಸ್ಥಳೀಯ ಕಾಲಮಾನ ಮಧ್ಯಾಹ್ನ ಎರಡು ಗಂಟೆಗೆ ಪಂದ್ಯ ಆರಂಭವಾಗಲಿದೆ. ಅರಬ್ ರಾಷ್ಟ್ರದ ಸುಡುಬಿಸಿಲಿನಲ್ಲಿ ತಂಡಗಳು ಆಡಬೇಕಾಗಿರುವುದು ಸ್ಮಿತ್ ಮತ್ತು ಕೊಹ್ಲಿ ಪಡೆಗಳಿಗೆ ಎದುರಾಗುವ ಇನ್ನೊಂದು ಸವಾಲು ಇದಾಗಿದೆ. ಸ್ಥಳೀಯ ಟೆಂಪರೇಚರ್ 32 ಡಿಗ್ರಿ ತನಕಯಿದೆ.

ಕೊಹ್ಲಿ, ಸ್ಮಿತ್ ಪಡೆಗೆ ಎರಡು ಕಠಿಣ ಸವಾಲುಗಳು
ಆರ್‌ಸಿಬಿ ತಂಡದಲ್ಲಿ ದೇವದತ್ ಪಡಿಕಲ್, ಎಬಿಡಿ, ಫಿಂಚ್, ನವದೀಪ್ ಶೈನಿ, ಚಾಹಲ್ ಉತ್ತಮ ಫಾರಂನಲ್ಲಿದ್ದರೆ, ರಾಜಸ್ಥಾನ ತಂಡದಲ್ಲಿ ತಿವಾಟಿಯಾ, ಸ್ಮಿತ್ ಚೆನ್ನಾಗಿ ಬ್ಯಾಟ್ ಬೀಸುತ್ತಿದ್ದರೆ, ಸಂಜು ಸ್ಯಾಮ್ಸನ್ ಮಾತ್ರ ಭಯಾನಕ ಫಾರಂನಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications