Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ಸಿಬಿ ತಂಡಕ್ಕೆ ನೂತನ ಕೋಚ್ ನೇಮಕ: ಎಬಿ ಡಿವಿಲಿಯರ್ಸ್‌ಗೂ ಮಹತ್ವದ ಹುದ್ದೆ?!

ಆರ್‌ಸಿಬಿ ತಂಡದ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸನ್ ಹಾಗೂ ಕೋಚ್ ಸಂಜಯ್ ಬಂಗಾರ್ ಅವರ ಕಾರ್ಯಾವಧಿ ಅಂತ್ಯವಾಗಿದ್ದು ಮುಂದಿನ ಆವೃತ್ತಿಗೆ ಹೊಸ ಮ್ಯಾನೇಜ್‌ಮೆಂಟ್‌ನೊಂದಿಗೆ ಆರ್‌ಸಿಬಿ ತಂಡ ಕಣಕ್ಕಿಳಿಯುವುದು ಖಚಿತ. ಈ ಸಂದರ್ಭದಲ್ಲಿ ಆರ್‌ಸಿಬಿ ತಂಡದ ಮುಂದಿನ ಕೋಚ್ ಯಾರಾಗಬಹುದು ಎಂಬ ಪ್ರಶ್ನೆ ತಂಡದ ಅಭಿಮಾನಿಗಳಲ್ಲಿ ಸಾಕಷ್ಟು ಕಾಡುತ್ತಿತ್ತು. ಈ ವಿಚಾರವಾಗಿ ಅಧಿಕೃತ ಮಾಹಿತಿಯನ್ನು ಈಗ ಸ್ವತಃ ಆರ್‌ಸಿಬಿ ಫ್ರಾಂಚೈಸಿ ನೀಡಿದ್ದು ಮುಖ್ಯ ಕೋಚ್ ಆಗಿ ನೇಮಕಗೊಳಿಸಲಾಗಿದೆ ಎಂದು ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದೆ.

ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ದಿಗ್ಗಜ ಕ್ರಿಕೆಟಿಗ ಹಾಗೂ ಕೋಚ್ ಆಗಿ ಸಾಕಷ್ಟು ಖ್ಯಾತಿ ಪಡೆದಿರುವ ಆಂಡಿ ಫ್ಲವರ್ ಆರ್‌ಸಿಬಿ ತಂಡದ ಮುಂದಿನ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲು ನೇಮಕವಾಗಿದ್ದಾರೆ. ಸ್ವತಃ ಆರ್‌ಸಿಬಿ ಫ್ರಾಂಚೈಸಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು ಸಾಕಷ್ಟು ಮಾತುಕತೆಗಳ ನಂತರ ಈ ನಿರ್ಧಾರವನ್ನು ಅಂತಿಮಗೊಳಿಸಲಾಗಿದೆ.

RCB announced Andy Flower as new head coach of the team for upcoming season

ಆಂಡಿ ಫ್ಲವರ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚ್ ಆಗಿ ಕಳೆದ ಎರಡು ವರ್ಷಗಳ ಕಾಲ ಕರ್ತವ್ಯನಿರ್ವಹಿಸಿದ್ದರು. ಎರಡು ವರ್ಷಗಳ ಒಪ್ಪಂದ ಅಂತ್ಯವಾದ ಕಾರಣ ಲಕ್ನೋ ಸೂಪರ್ ಜೈಂಟ್ಸ್ ಕೂಡ ನೂತನ ಕೋಚ್ ನೇಮಿಸಲು ಮುಂದಾಗಿದ್ದು ಜಸ್ಟಿನ್ ಲ್ಯಾಂಗರ್ ಅವರನ್ನು ಕೋಚ್ ಆಗಿ ಸೇರ್ಪಡೆಗೊಳಿಸುವ ಸಾಧ್ಯತೆಯಿದೆ. ಇತ್ತ ಆಂಡಿ ಫ್ಲವರ್ ಬೇರೆ ಫ್ರಾಂಚೈಸಿಗಳಿಗೆ ಕೋಚ್ ಆಗಿ ಕರ್ತವ್ಯ ನಿರ್ವಹಿಸಲು ಉತ್ಸಾಹ ತೋರಿದ್ದು ರಾಜಸ್ಥಾನ್ ರಾಯಲ್ಸ್ ಆರ್‌ಸಿಬಿ ಸೇರಿದಂತೆ ಇನ್ನೂ ಕೆಲ ಫ್ರಾಂಚೈಸಿಗಳು ಮಾತುಕತೆ ನಡೆಸಿದ್ದವು ಎಂದು ವರದಿಯಾಗಿತ್ತು. ಇದೀಗ ಆರ್‌ಸಿಬಿ ಈ ವಿಚಾರದಲ್ಲಿ ಬಹುತೇಕ ಮೇಲುಗೈ ಸಾಧಿಸಿದೆ.

ಎಬಿ ಡಿವಿಲಿಯರ್ಸ್‌ಗೆ ಮಹತ್ವದ ಹುದ್ದೆ
ಇನ್ನು ಇದೇ ಸಂದರ್ಭದಲ್ಲಿ ಆರ್‌ಸಿಬಿ ತಂಡದ ಮಾಜಿ ದಿಗ್ಗಜ ಆಟಗಾರ ಎಬಿ ಡಿಲಿಯರ್ಸ್ ಕೂಡ ಫ್ರಾಂಚೈಸಿ ಜೊತೆಗೆ ಎರಡನೇ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಗಳು ಕೂಡ ಇದೆ ಎನ್ನಲಾಗಿದೆ. ಆಟಗಾರನಾಗಿ ಬಹುತೇಕ ಒಂದು ದಶಕದ ಕಾಲ ತಂಡದ ಅವಿಭಾಜ್ಯವಾಗಿದ್ದ ಎಬಿಡಿ ಈ ಬಾರಿ ಮೆಂಟರ್ ಆಗಿ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಆದರೆ ಅಧಿಕೃತ ಮಾಹಿತಿಗಳು ಈವರೆಗೆ ಲಭ್ಯವಾಗಿಲ್ಲ.

ಇನ್ನು ಆಂಡಿ ಫ್ಲವರ್ ವಿಶ್ವಾದ್ಯಂತ ಸಾಕಷ್ಟು ಟಿ20 ತಂಡಗಳಿಗೆ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2020ರಲ್ಲಿ ಸೈಂಟ್ ಲೂಸಿಯಾ ಜೂಕ್ಸ್, 2021ರಲ್ಲಿ ಪಿಎಸ್‌ಎಲ್‌ನ ಮುಲ್ತಾನ್ ಸುಲ್ತಾನ್ಸ್ ತಂಡಕ್ಕೆ ಮತ್ತು 2023ರಲ್ಲಿ ಐಎಲ್‌ಟಿ20ಯಲ್ಲಿ ಗಲ್ಫ್ ಜೈಂಟ್ಸ್ ತಂಡಕ್ಕೆ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.

Story first published: Friday, August 4, 2023, 10:35 [IST]
Other articles published on Aug 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+