2020ರ ಬೆಸ್ಟ್ ಐಪಿಎಲ್ ತಂಡ ಹೆಸರಿಸಿದ ಎಬಿ ಡಿ ವಿಲಿಯರ್ಸ್

ದುಬೈ: 2020ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚಾಂಪಿಯನ್ಸ್ ಪಟ್ಟ ಅಲಂಕರಿಸುವ ಮೂಲಕ ಐದನೇ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿರುವ ಮುಂಬೈ ಇಂಡಿಯನ್ಸ್‌ಗೆ ವಿಶ್ವದಗಲ ಕ್ರಿಕೆಟ್ ಪರಿಣಿತರು, ಕ್ರಿಕೆಟ್ ಪ್ರೇಮಿಗಳು ಮೆಚ್ಚುಗೆಯ ಮಾತುಗಳನ್ನಾಡುತ್ತದ್ದಾರೆ. ಎಂಐ ವಿಶ್ವದಲ್ಲೇ ಬೆಸ್ಟ್ ತಂಡ ಎಂದು ಹೊಗಳುತ್ತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬ್ಯಾಟ್ಸ್‌ಮನ್, ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿ ಡಿ ವಿಲಿಯರ್ಸ್ ಕೂಡ ಮುಂಬೈ ಇಂಡಿಯನ್ಸ್ ಅನ್ನು 2020ರ ಆವೃತ್ತಿಯ ಬೆಸ್ಟ್ ಟೀಮ್ ಎಂದಿದ್ದಾರೆ. ಮುಂಬೈ ಇಂಡಿಯನ್ಸ್ ಬೆಸ್ಟ್ ತಂಡ ಅನ್ನೋದರಲ್ಲಿ ಅನುಮಾನವೇ ಇಲ್ಲ ಎಂದು ಎಬಿಡಿ ಹೇಳಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದ ಎಂಐ ಮೆಚ್ಚಿ ಟ್ವೀಟ್ ಮಾಡಿರುವ ಎಬಿಡಿ, 'ಚೆನ್ನಾಗಿ ಆಡಿದ್ದೀರಿ ಮುಂಬೈ ಇಂಡಿಯನ್ಸ್. ಈ ವರ್ಷದ ಬೆಸ್ಟ್ ತಂಡ ಮುಂಬೈ ಇಂಡಿಯನ್ಸ್ ಅನ್ನೋದರಲ್ಲಿ ಅನುಮಾನವೇ ಇಲ್ಲ,' ಎಂದು ಬರೆದುಕೊಂಡಿದ್ದಾರೆ.
ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದಿದ್ದ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ಮುಂಬೈ ಡೆಲ್ಲಿ ಎದುರು 5 ವಿಕೆಟ್‌ಗಳ ಸುಲಭ ಗೆಲುವನ್ನಾಚರಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications