For Quick Alerts
ALLOW NOTIFICATIONS  
For Daily Alerts
 

ಕನ್ನಡತಿಯ ಅದ್ಭುತ ಚಿತ್ರಕ್ಕೆ ಪ್ರತಿಕ್ರಿಯಿಸಿದ ಎಬಿ ಡಿ ವಿಲಿಯರ್ಸ್

RCB batsman AB de Villiers replies to Shivamogga girls sketch

ಶಿವಮೊಗ್ಗ: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್‌, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪ್ರಮುಖ ಆಟಗಾರ ಎಬಿ ಡಿ ವಿಲಿಯರ್ಸ್, ಕನ್ನಡತಿಯ ಅದ್ಭುತ ಚಿತ್ರಕ್ಕೆ ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ. ಹುಡುಗಿ ಬಿಡಿಸಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಶಿವಮೊಗ್ಗ ಮೂಲದ ಸುಮನಾ ಸೊಗಸಾಗಿ ಚಿತ್ರ ಬರೀತಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 22ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬೆಂಗಳೂರು ರೋಚಕ 1 ರನ್‌ನಿಂದ ಗೆದ್ದಾಗ ಸುಮನಾ ಒಂದು ಚಿತ್ರ ಬರೆದು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದರು.

RCB batsman AB de Villiers replies to Shivamogga girls sketch

ಆರ್‌ಸಿಬಿ ಅಭಿಮಾನಿಯಾಗಿರುವ ಸುಮನಾ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯ ಗೆಲುವಿನ ಹೀರೋ ಎನಿಸಿದ್ದ ಎಬಿ ಡಿ ವಿಲಿಯರ್ಸ್ ಚಿತ್ರ ಬರೆದು ಇನ್‌ಸ್ಟಾದಲ್ಲಿ ಹಾಕಿಕೊಂಡಿದ್ದರು. ಕಾರಣ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಎಬಿಡಿ 42 ಎಸೆತಗಳಲ್ಲಿ 75 ರನ್ ಕೊಡುಗೆ ನೀಡಿದ್ದರು. ಸುಮನಾ ಬಿಡಿಸಿದ್ದ ಎಬಿಡಿಯ ಪೆನ್ಸಿಲ್ ಸ್ಕೆಚ್ ಮೆಚ್ಚಿ ಸ್ವತಃ ಎಬಿಡಿಯೇ ಪ್ರತಿಕ್ರಿಯಿಸಿದ್ದಾರೆ.

ತನ್ನ ಚಿತ್ರವಿದ್ದ ಪೋಸ್ಟ್‌ಗೆ ಕಾಮೆಂಟ್ ಹಾಕಿರುವ ಡಿ ವಿಲಿಯರ್ಸ್, 'ತುಂಬಾ ವಿಶೇಷವಾಗಿದೆ. ಧನ್ಯವಾದಗಳು' ಎಂದು ಇಂಗ್ಲೀಷಿನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಸುಮನಾಗೂ ತುಂಬಾ ಖುಷಿಯಾಗಿದೆ. ಎಬಿಡಿ ಪ್ರತಿಕ್ರಿಯೆಯನ್ನು ಇನ್ನೊಂದು ಪೋಸ್ಟ್‌ ಜೊತೆ ಹಂಚಿಕೊಂಡಿರುವ ಸುಮನಾ ಈ ‍ಖುಷಿ ತೋರಿಕೊಂಡಿದ್ದಾರೆ.

Story first published: Monday, May 3, 2021, 23:17 [IST]
Other articles published on May 3, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+