ಡಿ ವಿಲಿಯರ್ಸ್, ಕೊಹ್ಲಿ ಜೊತೆ ಆಡುವ ಮೊದಲು ಅಂಜಿಕೊಂಡಿದ್ದೆ: ರಜತ್

ನವದೆಹಲಿ: 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಯುವ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ ಹೊಸ ಸೇರ್ಪಡೆಯಾಗಿದ್ದರು. ಟೂರ್ನಿಯಲ್ಲಿ ಮೊದಲ ಬಾರಿಗೆ ದಂತಕತೆ ಎಬಿ ಡಿ ವಿಲಿಯರ್ಸ್ ಮತ್ತು ನಾಯಕ ವಿರಾಟ್ ಕೊಹ್ಲಿ ಜೊತೆ ಆಡುವಾಗ ರಜತ್ ಅಂಜಿಕೊಂಡಿದ್ದರಂತೆ. ಇದನ್ನು ರಜತ್ ಹೇಳಿಕೊಂಡಿದ್ದಾರೆ.
ಇಂದೋರ್‌ನವರಾದ ರಜತ್ ಪಾಟಿದಾರ್, ರಾಯಲ್ ಚಾಲೆಂಜರ್ಸ್ ಬೆಂಗಳೂರುನಿಂದ ಹೆಚ್ಚಿನ ಸಾರಿ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಂಡಿದ್ದರು. ಆರ್‌ಸಿಬಿ ಆಡಿರುವ 7 ಪಂದ್ಯಗಳಲ್ಲಿ 4ರಲ್ಲಿ ಪಾಟಿದಾರ್ ಪ್ಲೇಯಿಂಗ್ XIನಲ್ಲಿ ಕಾಣಸಿಕೊಂಡು ಗಮನ ಸೆಳೆದಿದ್ದರು.
ಈಗ ಐಪಿಎಲ್ ಅಮಾನತಾಗಿದೆ ನಿಜ. ಆದರೆ ಟೂರ್ನಿ ನಡೆಯುತ್ತಿದ್ದಾಗಿನ ವೇಳೆಯ ಅನುಭವಗಳನ್ನು ರಜತ್ ಹೇಳಿಕೊಂಡಿದ್ದಾರೆ. ಆರ್‌ಸಿಬಿ ಪರ ಆಡುವಾಗ ಎಬಿ ಡಿ ವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿಗೆ ಜೊತೆಯಾಗಿ ಆಡಬೇಕಾದ ಸಂದರ್ಭ ಎದುರಾದಾಗ ಅವರಿಗೆ ಅಂಜಿಕೆಯಾಗಿತ್ತಂತೆ.
'ಎಬಿ ಡಿ ವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಇದ್ದಿದ್ದರಿಂದ ಆರ್‌ಸಿಬಿ ಯಾವತ್ತಿಗೂ ನನ್ನ ನೆಚ್ಚಿನ ತಂಡವಾಗಿತ್ತು. ಅದೃಷ್ಟವಶಾತ್ ನನಗೆ ಆರ್‌ಸಿಬಿ ಪರ ಆಡುವ ಅವಕಾಶ ಸಿಕ್ಕಿತು. ಕೊಹ್ಲಿ, ಎಬಿಡಿಯನ್ನು ಮೊದಲು ಭೇಟಿಯಾದಾಗ ಅಂಜಿಕೆಯಾಗಿತ್ತು. ಆದರೆ ಇಲ್ಲಿ ಬಂದು ಆಡುವಾಗ ಅಷ್ಟೇ ಖುಷಿಯಾಗಿತ್ತು,' ಎಂದು ಸಂದರ್ಶನವೊಂದರ ವೇಳೆ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications