Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2026: ನಾಡಿನ್ ಡಿ ಕ್ಲರ್ಕ್ ಏಕಾಂಗಿ ಹೋರಾಟ: RCB ಶುಭಾರಂಭ

ನವಿ ಮುಂಬೈ: ಸ್ಟಾರ್ ಆಲ್‌ರೌಂಡರ್‌ ನಾಡಿನ್ ಡಿ ಕ್ಲರ್ಕ್ ಅವರ ಭರ್ಜರಿ ಆಲ್‌ರೌಂಡರ್ ಆಟದ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ 3 ವಿಕೆಟ್‌ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ನಾಲ್ಕನೇ ಆವೃತ್ತಿ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಮಣಿಸಿ ಶುಭಾರಂಭ ಮಾಡಿತು. ನಾಡಿನ್ ಡಿ ಕ್ಲರ್ಕ್ ಈ ಪಂದ್ಯದಲ್ಲಿ ಏಕಾಂಗಿ ಹೋರಾಟ ನೀಡಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.

ಭರವಸೆಯ ಆಲ್‌ರೌಂಡರ್‌ ನಾಡಿನ್ ಡಿ ಕ್ಲರ್ಕ್ ಆರ್‌ಸಿಬಿ ಗೆಲುವಿನಲ್ಲಿ ಮಿಂಚಿದರು. ಆರ್‌ಸಿಬಿಗೆ ಪಂದ್ಯವನ್ನು ಗೆಲ್ಲಲು ಕೊನೆಯ ಓವರ್‌ನಲ್ಲಿ 18 ರನ್ ಅವಶ್ಯಕತೆ ಇತ್ತು. ಆಗ ಮೊದಲ ಎರಡು ಎಸೆತಗಳಲ್ಲಿ ರನ್‌ ಕಲೆ ಹಾಕುವಲ್ಲಿ ನಾಡಿನ್ ಡಿ ಕ್ಲರ್ಕ್ ವಿಫಲರಾದಾಗ, ಪಂದ್ಯ ಕೈಯಿಂದ ಜಾರೀತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಕ್ಲರ್ಕ್‌ ಮಾತ್ರ ಧೃತಿ ಗೆಡದೆ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೊನೆಯ ಮೂರನೇ ಎಸೆತದಲ್ಲಿ 6, ನಾಲ್ಕನೇ ಎಸೆತದಲ್ಲಿ ಬೌಂಡರಿ, ಐದನೇ ಎಸೆತದಲ್ಲಿ ಬೌಂಡರಿ ಬಾರಿಸಿದ ನಾಡಿನ್ ಡಿ ಕ್ಲರ್ಕ್ ಗೆಲುವಿನ ಆಸ ಚಿಗುರಿಸಿದರು. ಕೊನೆಯ ಎಸೆತದಲ್ಲಿ 2 ರನ್ ಅವಶ್ಯಕತೆ ಇದ್ದಾಗ ಬೌಂಡರಿ ಬಾರಿಸಿ ನಾಡಿನ್ ಡಿ ಕ್ಲರ್ಕ್ ಆರ್‌ಸಿಬಿ ಪಾಳಯದಲ್ಲಿ ಭರವಸೆಯ ಆಶಾ ಕಿರಣ ಬೆಳಗಿಸಿದರು. ಇವರು 44 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್‌ ನೆರವಿನಿಂದ ಅಜೇಯ 66 ರನ್‌ ಸಿಡಿಸಿದರು.

RCB Beat MI by 3 Wickets in WPL Nadine de Klerk s All-Round Show Powers Thrilling Victory

155 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭ ಭರ್ಜರಿಯಾಗಿತ್ತು. ನಾಯಕಿ ಸ್ಮೃತಿ ಮಂಧಾನ ಅವರೊಂದಿಗೆ ಗ್ರೇಸ್ ಹ್ಯಾರಿಸ್ ಇನಿಂಗ್ಸ್‌ ಆರಂಭಿಸಿದರು. ಈ ಜೋಡಿ ಪವರ್‌ ಪ್ಲೇನಲ್ಲಿ ಉತ್ತಮ ಜೊತೆಯಾಟವನ್ನು ನೀಡಿತು. ಈ ಜೋಡಿ ಮೊದಲ ವಿಕೆಟ್‌ಗೆ 40 ರನ್‌ ಸಿಡಿಸಿತು. ಈ ಹಂತದಲ್ಲಿ ನಾಯಕಿ ಸ್ಮೃತಿ 18 ರನ್‌ ಸಿಡಿಸಿದ್ದಾಗ ಇಲ್ಲದ ಹೊಡೆತಕ್ಕೆ ಮುಂದಾಗಿ ಇಸ್ಮಾಯಿಲ್‌ಗೆ ವಿಕೆಟ್‌ ಒಪ್ಪಿಸಿದರು. ಗ್ರೇಸ್ ಹ್ಯಾರಿಸ್ 12 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 25 ರನ್‌ ಬಾರಿಸಿ ಪೆವಿಲಿಯನ್ ಸೇರಿದರು.

ಮಧ್ಯಮ ಕ್ರಮಾಂಕದಲ್ಲಿ ದಯಾಳನ್ ಹೇಮಲತಾ (6), ರಿಚಾ ಘೋಷ್ (6), ರಾಧಾ ಯಾದವ್ (1) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ರಾಧಾ ಯಾದವ್ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. 40 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡಿದ್ದ ಆರ್‌ಸಿಬಿ, ಇನ್ನು 25 ರನ್‌ ಸೇರಿಸುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡಿತು.

ಕಳಪೆ ಆರಂಭ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡದ ಆರಂಭ ಕಳಪೆಯಾಗಿತ್ತು. ಅಮೆಲಿಯಾ ಕೆರ್, ನ್ಯಾಟ್ ಸಿವರ್-ಬ್ರಂಟ್ ಬಿಗ್‌ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. 17 ವರ್ಷದ ಯುವ ಆಟಗಾರ್ತಿ ಜಿ ಕಮಲಿನಿ 28 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 32 ರನ್‌ ಸಿಡಿಸಿದರು. ನಾಯಕಿ ಹರ್ಮನ್ ಪ್ರೀತ್‌ ಕೌರ್ 1 ಬೌಂಡರಿ, 1 ಸಿಕ್ಸರ್ ಸಹಾಯದಿಂದ 20 ರನ್‌ ಬಾರಿಸಿ ಮಿಂಚಿದರು.

67 ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಿಕೋಲಾ ಕ್ಯಾರಿ, ಸಜೀವನ್ ಸಜನಾ ಆಧಾರವಾದರು. ಈ ಜೋಡಿ 49 ಎಸೆತಗಳಲ್ಲಿ 82 ರನ್‌ ಸಿಡಿಸಿದರು. ಸಜೀವನ್ ಸಜನಾ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 45 ರನ್ ಬಾರಿಸಿದರು. ನಿಕೋಲಾ ಕ್ಯಾರಿ 40 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 154 ರನ್‌ ಸೇರಿಸಿತು.

ನಾಡಿನ್ ಡಿ ಕ್ಲರ್ಕ್‌ಗೆ 4 ವಿಕೆಟ್‌

ಆರ್‌ಸಿಬಿ ತಂಡದ ವೇಗದ ಬೌಲರ್‌ ನಾಡಿನ್ ಡಿ ಕ್ಲರ್ಕ್ ಅಬ್ಬರಿಸಿದರು. ಇವರು 26 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು.

Story first published: Friday, January 9, 2026, 23:27 [IST]
Other articles published on Jan 9, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+