RCB ಗರ್ಲ್ ಟ್ರೆಂಡಿಂಗ್, ಎಲ್ಲಾ ಮ್ಯಾಚಿಗೂ ಕರೆಸಿ ಎಂದು ಕೊಹ್ಲಿಗೆ ಮನವಿ

ಈ ಬಾರಿಯ ಐಪಿಎಲ್ ಸೀಸನ್ ನಲ್ಲಿ ಅಬ್ಬರದ ಬ್ಯಾಟಿಂಗ್, ಉತ್ತಮ ಬೌಲಿಂಗ್, ಫೀಲ್ಡಿಂಗ್ ಗೇನೂ ಟ್ರೆಂಡಿಂಗ್ ಆಗಿಲ್ಲ ನಿಜ. ಆದರೆ, ಫ್ಯಾನ್ಸ್ ವಿಷಯಕ್ಕೆ ಬಂದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ.
ಗೆಲ್ಲುವ ಕುದುರೆ ಬಾಲ ಹಿಡಿಯುವವರೇ ಅಧಿಕವಾಗಿರುವ ಕಾಲದಲ್ಲಿ ವರ್ಷದಿಂದ ವರ್ಷಕ್ಕೆ ಕಪ್ ಗೆಲ್ಲುವ ಆಸೆ ಹುಟ್ಟಿಸಿ, ಸೋಲು ಕಾಣುತ್ತಿದ್ದರೂ ತಂಡದ ಪರ ನಿಷ್ಠೆ ತೋರುವ ಆರ್ ಸಿಬಿ ಫ್ಯಾನ್ಸ್ ಗಳ ಅಭಿಮಾನಕ್ಕೆ ಕ್ರಿಕೆಟ್ ಪಂಡಿತರೆ ತಲೆದೂಗುತ್ತಾರೆ.
ಮಳೆ ಇರಲಿ, ಕೊನೆ ಲೀಗ್ ಪಂದ್ಯವಾಗಲಿ, ಚಿನ್ನಸ್ವಾಮಿ ಕ್ರೀಡಾಂಗಣ ಸದಾ ಕಾಲ ಅಭಿಮಾನಿಗಳಿಂದ ತುಂಬಿ ತುಳುಕುವುದನ್ನು ಕಂಡಿರಬಹುದು. ಐಪಿಎಲ್ 12ರ ಕೊನೆ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿದ ಖುಷಿ ಒಂದು ಕಡೆಯಾದರೆ, ಮತ್ತೊಂದು ಕಡೆ ಕೆಂಪು ದಿರಿಸಿನ ಫ್ಯಾನ್ ಗರ್ಲ್ ನೋಡುವುದೇ ಆನಂದವಾಗಿತ್ತು.
ಶಿಮ್ರೋನ್ ಹೆಟ್ಮೆರ್ (75) ಹಾಗೂ ಗುರ್ ಕೀರತ್ ಮಾನ್ (ಅಜೇಯ 65) ಜೊತೆಯಾಟ, ಕೊನೆಯಲ್ಲಿ ಉಮೇಶ್ ಯಾದವ್ ಬೌಂಡರಿ ಸಿಡಿಸಿದ್ದು ಸಕತ್ ಥ್ರಿಲ್ ನೀಡಿತು. 176ರನ್ ಚೇಸ್ ಒಂದು ಕಡೆಯಾದರೆ, ಆರ್ ಸಿಬಿ ಫ್ಯಾನ್ ಗರ್ಲ್ ಕಡೆ ಪದೇ ಪದೇ ಕ್ಯಾಮೆರಾ ಫೋಕಸ್ ಮಾಡಿದ್ದು, ಇನ್ನೂ ಥ್ರಿಲ್ ಆಗಿತ್ತು.

ಹೊಸ ನ್ಯಾಷನಲ್ ಕ್ರಶ್ ಎನಿಸಿಕೊಂಡ ದೀಪಿಕಾ
ಹೊಸ ನ್ಯಾಷನಲ್ ಕ್ರಶ್ ಎನಿಸಿಕೊಂಡಿದ್ದ ಒರು ಅಡಾರ್ ಲವ್ ಸ್ಟೋರಿ ಖ್ಯಾತಿಯ ಕಣ್ಮುಟುಕು ಸುಂದರಿ ಪ್ರಿಯಾ ವಾರಿಯರ್ ಅವರ ಸ್ಥಾನವನ್ನು ಈಗ ಆರ್ ಸಿಬಿ ಫ್ಯಾನ್ ಗರ್ಲ್ ದೀಪಿಕಾ ತುಂಬಿದ್ದಾರೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಘೋಷಿಸಲಾಗಿದೆ.

ಕ್ರಶ್ ಎನಿಸಿಕೊಂಡವಳ ಹುಡುಕಾಟ
ಕ್ರಶ್ ಎನಿಸಿಕೊಂಡವಳು ಯಾರಿವಳು ಎಂದು ಹುಡುಕಾಟ ನಡೆಸಿ, ಅವರ ಇನ್ಸ್ಟ್ರಾಗ್ರಾಂ ಖಾತೆ ಹುಡುಕಿ ಫಾಲೋ ಮಾಡಿದವರ ಸಂಖ್ಯೆ ಮೇ 05 ಸಮಯ 4.07ಕ್ಕೆ 145K ನಷ್ಟಿದೆ. ಆಕೆ 519 ಖಾತೆಗಳನ್ನು ಫಾಲೋ ಮಾಡುತ್ತಿದ್ದು, ನಿನ್ನೆ ಮ್ಯಾಚಿನಲ್ಲಿ ಆರ್ ಸಿಬಿ ಬಾವುಟ ಹಿಡಿದು ಸೆಲೆಬ್ರೇಟ್ ಮಾಡುವ ವಿಡಿಯೋ ಕೂಡಾ ಇದೆ. ಈ ನಡುವೆ ಆಕೆ ಹೆಸರಿನಲ್ಲಿ ನಾಯಿಕೊಡೆಯಂತೆ ಖಾತೆಗಳು ಹುಟ್ಟುಕೊಳ್ಳುತ್ತಿದ್ದು, ಈ ಪೈಕಿ ಅಸಲಿ ಯಾವುದು ಎಂಬುದು ತಿಳಿದು ಬರುತ್ತಿಲ್ಲ. ಈ ಗೊಂದಲಕ್ಕೆ ತೆರೆ ಎಳೆದಿರುವ ದೀಪಿಕಾ deeghose ಹೆಸರಿನ ಖಾತೆ ಮಾತ್ರ ಹೊಂದಿದ್ದೇನೆ ಎಂದಿದ್ದಾರೆ.

ನಂಗೆ ಹೆಣ್ಣು ನೋಡುತ್ತಾ ಇದ್ದರು
ನಂಗೆ ಹೆಣ್ಣು ನೋಡುತ್ತಾ ಇದ್ದರು, ನನಗೆ ಹೆಣ್ಣಿನ ಜೊತೆಗೆ ಅತ್ತೆ ಮಾವನನ್ನು ತೋರಿಸಿದ ಕ್ಯಾಮೆರಾಮ್ಯಾನ್ ಗೆ ಧನ್ಯವಾದ ಎಂದ ಟ್ರಾಲ್ ಪೇಜ್.

ವಿವೋ ಪರ್ಫೆಕ್ಟ್ ಕ್ಯಾಚ್
ಆರ್ ಸಿಬಿ ವಿರುದ್ಧ ಹೈದ್ರಾಬಾದ್ ಪಂದ್ಯದಲ್ಲಿ ವಿವೋ ಪರ್ಫೆಕ್ಟ್ ಕ್ಯಾಚ್ ಪ್ರಶಸ್ತಿಯನ್ನು ಈಕೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದ ಕ್ಯಾಮೆರಾಮನ್ ಗೆ ಕೊಡಬೇಕು.

ಫಾಗ್ ಜಾಹೀರಾತನ್ನು ಬಳಸಿ ಟ್ರಾಲ್
ಫಾಗ್ ಜಾಹೀರಾತನ್ನು ಬಳಸಿ ಟ್ರಾಲ್ ಮಾಡಲಾಗಿದೆ. ಗಡಿಭಾಗದ ಸೈನಿಕರು ಭಾರತದಲ್ಲಿ ಯಾವುದರ ಹವಾ ಹೆಚ್ಚಾಗಿದೆ ಎಂದು ಕೇಳಿದಾಗ ಹಿಂದೂಸ್ತಾನ್ ದಲ್ಲಿ ದೀಪಿಕಾ ಹೆಸರು ಚಲ್ ರಹಾ ಹೇ ಎಂದು ಟ್ರಾಲ್.

ಪಂದ್ಯ ಹಾಗೂ ಹೃದಯ ಗೆದ್ದ ಆರ್ ಸಿಬಿ
ಈ ಬಾರಿ ಪಂದ್ಯದ ಜೊತೆಗೆ ಹೃದಯವನ್ನು ಗೆದ್ದ ಆರ್ ಸಿಬಿ ಎಂದು ದೀಪಿಕಾ ಚಿತ್ರವನ್ನು ಹಾಕಲಾಗಿದೆ.

ವಿಲನ್ ಚಿತ್ರದ ಹಾಡು ಬಳಸಿ ಟ್ರಾಲ್
ವಿಲನ್ ಚಿತ್ರದ ಹಾಡು ಬಳಸಿ ಟ್ರಾಲ್ ಮಾಡಲಾಗಿದ್ದು, ಇವಳು ಯಾವೂರಾ ಚೆಲುವೇ ಶಿವಾ ಎಂದು ಸುದೀಪ್ ಚಿತ್ರ ಹಾಕಿ ಕೇಳಲಾಗಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications