For Quick Alerts
ALLOW NOTIFICATIONS  
For Daily Alerts
 

ಡೀಪ್‌ ಮಿಡ್‌ ವಿಕೆಟ್‌ನಲ್ಲಿ ಫಿಲ್‌ ಸಾಲ್ಟ್‌ ಅಮೋಘ ಪ್ರಯತ್ನ: ಇಲ್ಲಿದೆ ನೋಡಿ ಜೊತೆಯಾಟದ ಕ್ಯಾಚ್‌

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮುಂಬೈ ತಂಡವನ್ನು 12 ರನ್‌ಗಳಿಂದ ಮಣಿಸಿ ಅಬ್ಬರಿಸಿದೆ. ಈ ವೇಳೆ ಆರ್‌ಸಿಬಿ ತಂಡದ ಸಂಘಟಿತ ಆಟ ಎಲ್ಲರ ಮನ ಗೆದ್ದಿದೆ. ಎಲ್ಲ ಆಟಗಾರರು ತಮ್ಮ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿದ ಪರಿಣಾಮ ಆರ್‌ಸಿಬಿ ಜಯ ದಾಖಲಿಸಿದೆ. ಈ ವೇಳೆ ಹಲವು ಆಟಗಾರರು ಮಿಂಚಿದ್ದಾರೆ. ಆದರೆ ಮುಂಬೈ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಆರ್‌ಸಿಬಿ ಆಟಗಾರರು ಹಿಡಿದ ಜೊತೆಯಾಟದ ಕ್ಯಾಚ್‌ ಸಖತ್‌ ವೈರಲ್ ಆಗುತ್ತಿದೆ.

ಆರ್‌ಸಿಬಿ ನೀಡಿದ್ದ 226 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಮುಂಬೈ ಆರಂಭ ಕಳಪೆಯಾಗಿತ್ತು. ಆರಂಭಿಕರು ಬೇಗನೆ ಪೆವಿಲಿಯನ್ ಸೇರಿದರು. 99 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಮುಂಬೈ ಸಂಕಷ್ಟದಲ್ಲಿತ್ತು. ಆಗ ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್‌ ವರ್ಮಾ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 34 ಎಸೆತಗಳಲ್ಲಿ 89 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಭುವಿ ಸಫಲರಾದರು.

RCB Beats Mumbai by 12 Runs as Phil Salt and David Pull Off Sensational Boundary Catch

19ನೇ ಓವರ್‌ನ ಮೊದಲ ಎಸೆತದಲ್ಲಿ ಹಾರ್ದಿಕ್ ಪಾಂಡ್ಯಗೆ ಜೋಶ್‌ ಹ್ಯಾಜಲ್‌ವುಡ್ ಖೆಡ್ಡಾ ತೋಡಿದರು. ಈ ವೇಳೆ ಮುಂಬೈ ಗೆಲುವಿನ 11 ಎಸೆತಗಳಲ್ಲಿ 28 ರನ್‌ ಅವಶ್ಯಕತೆ ಇತ್ತು. 19ನೇ ಓವರ್‌ನಲ್ಲಿ ಜೋಶ್‌ 9ರನ್ ನೀಡಿ 1 ವಿಕೆಟ್‌ ಪಡೆದರು. ಆರ್‌ಸಿಬಿ ತಂಡದ ಎಲ್ಲ ಬೌಲರ್‌ಗಳ ಕೋಟಾ ಮುಗಿದಿದ್ದರಿಂದ ಕೃನಾಲ್‌ ಪಾಂಡ್ಯ 20ನೇ ಓವರ್ ಬೌಲ್‌ ಮಾಡಿದರು.

ಅದ್ಭುತ್ ಕ್ಯಾಚ್

ಕೃನಾಲ್‌ ಪಾಂಡ್ಯ ತಮ್ಮ ಕೊನೆಯ ಓವರ್‌ನಲ್ಲಿ 19 ರನ್‌ ಡಿಫೆಂಡ್ ಮಾಡಿಕೊಳ್ಳಬೇಕಿತ್ತು. ಈ ವೇಳೆ ಮಿಚೆಲ್ ಸ್ಯಾಂಟ್ನರ್‌ ಬಿಗ್‌ ಹಿಟ್‌ಗೆ ಮುಂದಾಗಿ ಲಾಂಗ್‌ ಆಫ್‌ ನಲ್ಲಿದ್ದ ಟೀಮ್ ಡೇವಿಡ್‌ಗೆ ಕ್ಯಾಚ್‌ ನೀಡಿದರು. ಇವರು ಔಟ್ ಆಗುತ್ತಿದ್ದಂತೆ ಬ್ಯಾಟ್‌ ಮಾಡಲು ಬಂದ ದೀಪಕ್ ಚಾಹರ್ ಬರುತ್ತಿದ್ದಂತೆ ಸಿಕ್ಸರ್ ಬಾರಿಸಲು ಮುಂದಾದರು. ಕೃನಾಲ್‌ ಅವರ ಎರಡನೇ ಎಸೆತವನ್ನು ಡೀಪ್ ಮಿಡ್ ವಿಕೆಟ್‌ ಮೇಲಿನಿಂದ ಸಿಕ್ಸರ್ ಬಾರಿಸಲು ಮುಂದಾದರು. ಈ ವೇಳೆ ಅಲ್ಲಿ ನಿಂತಿದ್ದ ಆಟಗಾರರು ಅದ್ಭುತ್ ಕ್ಯಾಚ್ ಪಡೆದರು.

ಕ್ಯಾಚ್‌ ತಮ್ಮ ಬಳಿಗೆ ಬರುತ್ತಿರುವುದನ್ನು ಗಮನಿಸಿದ ಫಿಲ್‌ ಸಾಲ್ಟ್ ತಮ್ಮ ಎಡಗಡೆಗೆ ಓಡುತ್ತಾ ಬಂದು ಗಾಳಿಯಲ್ಲಿ ನೆಗೆದು ಚೆಂಡನ್ನು ಹಿಡಿದರು. ಬೌಂಡರಿ ಲೈನ್‌ ಪಕ್ಕದಲ್ಲೇ ಇದ್ದಿದ್ದರಿಂದ ಸಾಲ್ಟ್‌ ಚೆಂಡನ್ನು ಮತ್ತೆ ಗಾಳಿಯಲ್ಲಿ ತೂರಿದರು. ಆಗ ಅಲ್ಲಿಗೆ ಓಡಿ ಬಂದಿದ್ದ ಟೀಮ್ ಡೇವಿಡ್‌ ಸಿಂಪಲ್‌ ಕ್ಯಾಚ್ ಹಿಡಿದರು. ಈ ಕ್ಯಾಚ್‌ ನೋಡಿದ ಅಭಿಮಾನಿಗಳು ಫುಲ್ ಖುಷ್ ಆದ್ರು.

ಅಸಲಿಗೆ ಪ್ರಯತ್ನ ಎಲ್ಲವೂ ಫಿಲ್‌ ಸಾಲ್ಟ್ ಅವರದ್ದಾಗಿತ್ತು. ಆದರೆ ಸ್ಕೋರ್ ಬೋರ್ಡ್‌ನಲ್ಲಿ ಮಾತ್ರ ಟೀಮ್ ಡೇವಿಡ್‌ ಹೆಸರು ಬಂದಿತು. ಕಾರಣ ಕ್ಯಾಚ್ ಕಂಪ್ಲೀಟ್‌ ಮಾಡಿದ್ದು ಅವರು. ಹೀಗೆ ಆರ್‌ಸಿಬಿ ಬ್ಯಾಟಿಂಗ್, ಬೌಲಿಂಗ್ ಅಷ್ಟೇ ಅಲ್ಲ ಫೀಲ್ಡಿಂಗ್‌ನಲ್ಲೂ ಸಂಘಟಿತ ಪ್ರದರ್ಶನ ನೀಡಿತು.

Story first published: Tuesday, April 8, 2025, 6:01 [IST]
Other articles published on Apr 8, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+