ಐಪಿಎಲ್‌ನಲ್ಲಿ ಈ ಮಹತ್ವದ ಬದಲಾವಣೆ ತಂದ ಮೊದಲ ತಂಡ ಆರ್‌ಸಿಬಿ!

ಬೆಂಗಳೂರು, ಅಕ್ಟೋಬರ್ 17: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಆಕರ್ಷಣೀಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹತ್ವದ ಬದಲಾವಣೆಯೊಂದಕ್ಕೆ ಕಾರಣವಾಗಿದೆ. ಮಹಿಳಾ ಬೆಂಬಲ ಸಿಬ್ಬಂದಿಯನ್ನು ನೇಮಿಸಿದ ಮೊದಲ ಐಪಿಎಲ್ ತಂಡವಾಗಿ ಆರ್‌ಸಿಬಿ ಗುರುತಿಸಿಕೊಂಡಿದೆ.
ಮುಂಬರಲಿರುವ 13ನೇ ಆವೃತ್ತಿಯ ಐಪಿಎಲ್‌ಗಾಗಿ ಆರ್‌ಸಿಬಿ, ಮಹಿಳಾ ಬೆಂಬಲ ಸಿಬ್ಬಂದಿಯೊಬ್ಬರನ್ನು ನೇಮಿಸಿದೆ. ನವನೀತ ಗೌತಮ್ ಇನ್ಮುಂದೆ ಆರ್‌ಸಿಬಿ ತಂಡದ ಸ್ಪೋರ್ಟ್ಸ್ ಮಸಾಜ್ ಥೆರಪಿಸ್ಟ್ ಆಗಿ ಇರಲಿದ್ದಾರೆ. ಐಪಿಎಲ್ ತಂಡವೊಂದು ಮಹಿಳಾ ಬೆಂಬಲ ಸಿಬ್ಬಂದಿಯನ್ನು ನೇಮಿಸಿದ್ದು ಇದೇ ಮೊದಲ ಬಾರಿ.
ನವನೀತ ಅವರು ಆರ್‌ಸಿಬಿ ತಂಡದ ಹೆಡ್ ಫಿಸಿಯೋಥೆರಪಿಸ್ಟ್ ಇವಾನ್ ಸ್ಪೀಚ್ಲಿ ಮತ್ತು ಕಂಡೀಷನಿಂಗ್ ಕೋಚ್ ಶಂಕರ್ ಬಸು ಜೊತೆಗಿದ್ದು, ತಂಡಕ್ಕೆ ತಕ್ಕಂತೆ, ಅಗತ್ಯ ಬೀಳುವ ಮೌಲ್ಯಮಾಪನ, ಮಾರ್ಗದರ್ಶನ ಮತ್ತು ಮಸಾಜ್ ಥೆರಪಿಯನ್ನು ನಡೆಸಿಕೊಡಲಿದ್ದಾರೆ.
ಮುಂಬರಲಿರುವ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮಾಜಿ ಸಹಾಯಕ ಕೋಚ್ ಸೈಮನ್ ಕಟಿಚ್, ಮುಖ್ಯ ಕೋಚ್ ಆಗಿ ಆರ್‌ಸಿಬಿ ಮುನ್ನಡೆಸಲಿದ್ದಾರೆ. ಹಿಂದಿನ ಸಾರಿ ಕಳಪೆ ಪ್ರದರ್ಶನ ನೀಡಿದ್ದ ಬೆಂಗಳೂರು ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ, ಕಪ್ ಗೆಲ್ಲುತ್ತಾ ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications