For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ ಕಪ್‌ ಗೆಲ್ಲದಿದ್ರೂ, ಸೋಷಿಯಲ್ ಮಿಡಿಯಾದಲ್ಲಿ RCB ಕಿಂಗ್

ಆರ್‌ಸಿಬಿ.. ಇದು ಬರೀ ಒಂದು ತಂಡ ಅಲ್ಲ. ಇದು ಕನ್ನಡಿಗರ ಭಾವನೆ. ಇಲ್ಲಿನ ಕ್ರಿಕೆಟ್‌ ಅಭಿಮಾನಿಗಳ ಶಕ್ತಿ. ಆರ್‌ಸಿಬಿ ಈಗ ಒಂದು ಐಪಿಎಲ್‌ ತಂಡವಾಗಿ ಉಳಿದಿಲ್ಲ. ಈಗ ಅದು ಬ್ರ್ಯಾಂಡ್ ಆಗಿದೆ. ಮಾರುಕಟ್ಟೆಯಲ್ಲಿ ದಿನವೂ ಆರ್‌ಸಿಬಿ ವ್ಯಾಲ್ಯೂ ಬೆಳೆಯುತ್ತಲೆ ಸಾಗುತ್ತಿದೆ. ಹಾಗೆ ಈ ತಂಡದ ಹಿಂಬಾಲಕರ ಸಂಖ್ಯೆ ದಿನವೂ ಹೆಚ್ಚುತಲೇ ಇದೆ. ಆರ್‌ಸಿಬಿ ವಿಶ್ವದಲ್ಲೇ ಅತ್ಯಂತ ಹೆಚ್ಚು ಜನಪ್ರೀಯ ಕ್ರಿಕೆಟ್ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆರ್‌ಸಿಬಿ 17 ಆವೃತ್ತಿಗಳಲ್ಲಿ ಮೈದಾನ ಪ್ರವೇಶಿಸಿದರೂ, ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಆದರೂ ಈ ತಂಡದ ಮೇಲೆ ಜನರ ಪ್ರೀತಿ ಏನು ಕಮ್ಮಿ ಆಗಿಲ್ಲ. ಆರ್‌ಸಿಬಿ ಮ್ಯಾನೇಜ್ಮೆಂಟ್ ಸಹ ಫ್ಯಾನ್ಸ್‌ ಜೊತೆಗೆ ಆಗಾಗ್ಗೆ ಸಾಮಾಜಿಕ ತಾಣದಲ್ಲಿ ಎಂಗೇಜ್ ಆಗಿರುತ್ತದೆ. ಸಾಮಾಜಿಕ ತಾಣಗಳಾದ ಇನ್‌ಸ್ಟಾಗ್ರಾಮ್‌, ಟ್ವೀಟರ್, ಯುಟ್ಯೂಬ್, ಫೇಸ್‌ಬುಕ್‌ಗಳಲ್ಲಿ ಒಟ್ಟು 2 ಬಿಲಿಯನ್‌ ಎಂಗೇಜ್ಮೆಂಟ್‌ನಿಂದ ಎಲ್ಲರ ಚಿತ್ತ ಕದ್ದಿದೆ. ಹೀಗಾಗಿ ಈ ತಂಡ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಜನಪ್ರೀಯ ತಂಡಗಳಲ್ಲಿ ಒಂದಾಗಿದೆ.

RCB Becomes Most Popular IPL Team on Social Media for Fifth Consecutive Year

ಆರ್‌ಸಿಬಿ ಪ್ರಾಬಲ್ಯ

ಸಾಮಾಜಿಕ ಜಾಲ ತಾಣಗಳಲ್ಲಿ ಆರ್‌ಸಿಬಿ ಈ ಎಂಗೇಜ್ಮೆಂಟ್‌, ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ತಂಡ ಬೆಳೆಯುತ್ತಿರುವ ರೀತಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ತಂಡದ ಸಾಮಾಜಿಕ ವೇದಿಕಗಳಲ್ಲಿ 5 ಮಿಲಿಯನ್ ಫಾಲೋಅರ್ಸ್ ಮಾರ್ಕ್‌ ಪಾರು ಮಾಡಿದೆ. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇದು ಅತ್ಯಂತ ವೇಗವಾಗಿ ಬೆಳೆಯುತ್ತಿರವ ತಂಡ ಎಂಬ ಹಣೆ ಪಟ್ಟಿಯನ್ನು ಹೊಂದಿದೆ. ಇದರ ಪರಿಣಾಮವೇ ಆರ್‌ಸಿಬಿ ಸಾಮಾಜಿಕ ತಾಣದಲ್ಲಿ ತನ್ನ ಬಿಗಿ ಹಿಡಿತವನ್ನು ಸತತ ಐದನೇ ವರ್ಷವೂ ಮುಂದುವರೆಸಿದೆ.

ಆರ್‌ಸಿಬಿ ಹವಾ ಬರೀ ಭಾರತದಲ್ಲಿ ಅಷ್ಟೇ ಅಲ್ಲಾ ವಿದೇಶದಲ್ಲೂ ಅಭಿಮಾನಿಗಳನ್ನು ಹೊಂದಿದೆ. ಹೀಗಾಗಿ ಸಾಗರೋತ್ತರ ದೇಶಗಳಲ್ಲೂ ಆರ್‌ಸಿಬಿ ಕ್ರೇಜ್ ಹೆಚ್ಚಾಗಿದೆ. ವಿಶ್ವ ಮಟ್ಟದ ಆರ್‌ಸಿಬಿ ತಂಡ ತನ್ನ ಸ್ಥಾನವನ್ನು ಬಲ ಪಡಿಸಿಕೊಂಡಿದೆ. ಈ ತಂಡ ವಿಶ್ವದ ಟಾಪ್‌ 5 ಜನಪ್ರೀಯ ತಂಡಗಳಲ್ಲಿ ಸ್ಥಾನ ಪಡೆದಿದೆ. ಮ್ಯಾಂಚೆಸ್ಟರ್ ಯುನೈಟೆಡ್, ಲಿವರ್‌ಪೂಲ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಹಲವು ತಂಡಗಳ ಜನಪ್ರೀಯತೆಗಿಂತ, ಆರ್‌ಸಿಬಿ ಜನಪ್ರೀಯತೆ ಹೆಚ್ಚು.

RCB Becomes Most Popular IPL Team on Social Media for Fifth Consecutive Year

ಇನ್ನು ಆರ್‌ಸಿಬಿ ಸಾಮಾಜಿಕ ತಾಣದಲ್ಲಿ ಮಾತ್ರ ಆರ್‌ಸಿಬಿ ಹವಾ ಕ್ರಿಯೇಟ್ ಮಾಡಿಲ್ಲ. ಬದಲಿಗೆ ತನ್ನ ವಾಟ್ಸಾಪ್ ಪ್ರಸಾರ ಚಾನೆಲ್‌ನಲ್ಲಿ ಅಭೂತಪೂರ್ವ 7.5 ಮಿಲಿಯನ್ ಫಾಲೋಅರ್ಸ್‌ ಹೊಂದಿದೆ. ಈ ಮೂಲಕ ವಾಟ್ಸ್‌ಅಪ್‌ನಲ್ಲಿ ಅತಿ ಹೆಚ್ಚು ಹಿಂಬಾಲಿಸುವ ಐಪಿಎಲ್ ತಂಡವಾಗಿದೆ.

ಈ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ರಾಜೇಶ್ ಮೆನನ್ ಸಂತಸ ವ್ಯಕ್ತಪಡಿಸಿದ್ದಾರೆ. ಇದೆಲ್ಲ ಶ್ರೇಯವೂ ನಮ್ಮ 12 ನೇ ಮ್ಯಾನ್ ಆರ್ಮಿಗೆ ಸೇರುತ್ತದೆ. ಅಭಿಮಾನಿಗಳ ಪ್ರೀತಿ ಹಾಗೂ ವಿಶ್ವಾಸ ಪ್ರತಿಯೊಂದು ಪಂದ್ಯದಲ್ಲೂ ಎದ್ದು ಕಾಣುತ್ತದೆ. ಮುಂದಿನ ದಿನಗಳಲ್ಲೂ ನಾವು ನಮ್ಮ ಉತ್ತಮವಾದನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ.

Story first published: Thursday, January 16, 2025, 16:26 [IST]
Other articles published on Jan 16, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+