For Quick Alerts
ALLOW NOTIFICATIONS  
For Daily Alerts
 

RCB ಫೈನಲ್‌ ಪ್ರವೇಶಿಸಲು ಕಾರಣರಾದ ಪಂಚತಾರೆಯರು

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದೆ. ತಂಡದ ಸಂಘಟಿತ ಆಟ ಅಭಿಮಾನಿಗಳನ್ನು ರಂಜಿಸಿದೆ. ಸಿಕ್ಕ ಅವಕಾಶವನ್ನು ಬಳಸಿಕೊಂಡಿರುವ ಆಟಗಾರ್ತಿಯರು ಆರ್‌ಸಿಬಿ ಗೆಲುವಿನಲ್ಲಿ ಮಿಂಚಿದ್ದಾರೆ. ಆರ್‌ಸಿಬಿ ಈ ಬಾರಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ತಂಡದ ಅನುಭವಿ ಆಟಗಾರ್ತಿಯರು ತಮ್ಮದೇ ಕಾಣಿಕೆ ನೀಡಿದ್ದಾರೆ. ಆರ್‌ಸಿಬಿ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಕಾರಣರಾದ ಆರ್‌ಸಿಬಿ ತಂಡದ ಸ್ಟಾರ್‌ ಆಟಗಾರ್ತಿಯರ ಬಗ್ಗೆ ಮಾಹಿತಿ ಇಲ್ಲಿದೆ.

ಈ ಬಾರಿಯ ಲೀಗ್‌ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಎಲ್ಲಿಸಾ ಪೆರ್ರಿ ಅವರು ಅನಿವಾರ್ಯ ಕಾರಣಗಳಿಂದ ಟೂರ್ನಿಯಿಂದ ಹೊರ ನಡೆದರು. ಇವರ ಸ್ಥಾನವನ್ನು ತುಂಬುವುದು ಯಾರು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ವಿದೇಶಿ ಆಟಗಾರ್ತಿಯರು ತಮ್ಮ ಆಲ್‌ರೌಂಡರ್ ಆಟದ ಬಲದಿಂದ ತಂಡಕ್ಕೆ ಹಂತ ಹಂತವಾಗಿ ನೆರವಾಗಿದ್ದಾರೆ.

RCB

ಆರ್‌ಸಿಬಿ ಲೀಗ್‌ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 6 ಜಯ, 2 ಸೋಲು ಕಂಡಿದ್ದು, 8 ಅಂಕಗಳೊಂದಿಗೆ 12 ಅಂಕವನ್ನು ಕಲೆ ಹಾಕಿದ್ದು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಅಲ್ಲದೆ ನೇರವಾಗಿ ಮಹಿಳಾ ಪ್ರೀಮಿಯರ್ ಲೀಗ್‌ ಫೈನಲ್‌ಗೆ ಅರ್ಹತೆ ಪಡೆದಿದೆ.

ಸ್ಮೃತಿ ಮಂಧಾನ

ಆರ್‌ಸಿಬಿ ತಂಡವನ್ನು ಈ ಲೀಗ್‌ನಲ್ಲಿ ಮುನ್ನಡೆಸುತ್ತಿರುವ ಸ್ಮೃತಿ ಮಂಧಾನ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 8 ಪಂದ್ಯಗಳಲ್ಲಿ 48ರ ಸರಾಸರಿಯಲ್ಲಿ 290 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 2 ಅರ್ಧಶತಕಗಳು ಸೇರಿವೆ. ಇವರು ತಂಡಕ್ಕೆ ಟಾಪ್‌ ಆರ್ಡರ್‌ನಲ್ಲಿ ಬಲ ತುಂಬಿದ್ದಾರೆ.

ನಾಡಿನ್‌ ಡಿ ಕ್ಲರ್ಕ್‌

ದಕ್ಷಿಣ ಆಫ್ರಿಕಾದ ಸೂಪರ್ ಸ್ಟಾರ್ ಆಟಗಾರ್ತಿ ನಾಡಿನ್‌ ಡಿ ಕ್ಲರ್ಕ್ ತಮ್ಮಲ್ಲಿರುವ ಸಾಮರ್ಥ್ಯವನ್ನು ಲೀಗ್‌ನ ಮೊದಲ ಪಂದ್ಯದಲ್ಲಿ ಸಾಬೀತು ಪಡಿಸಿದ್ದರು. ಮುಂಬೈ ಇಂಡಿಯನ್ಸ್‌ ವಿರುದ್ಧ ಇವರು ಏಕಾಂಗಿ ಹೋರಾಟ ನೀಡಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದ್ದರು. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಆಧಾರವಾಗುವ ಆಟಗಾರ್ತಿ. ಕ್ಲಕ್‌ 42ರ ಸರಾಸರಿಯಲ್ಲಿ 126 ರನ್‌ ಸಿಡಿಸಿದ್ದರೆ, ಬೌಲಿಂಗ್‌ನಲ್ಲಿ 15 ವಿಕೆಟ್‌ ಕಬಳಿಸಿದ್ದಾರೆ.

RCB

ರಿಚಾ ಘೋಷ್‌

ಆರ್‌ಸಿಬಿ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಆಧಾರವಾಗಿರುವ ಆಟಗಾರ್ತಿ ರಿಚಾ ಘೋಷ್‌. ಇವರು ತಮ್ಮ ಬಿರುಸಿನ ಹೊಡೆತಗಳಿಂದ ತಂಡದ ಮೊತ್ತವನ್ನು ಹೆಚ್ಚಿಸಬಲ್ಲ ಕ್ಷಮತೆ ಹೊಂದಿದ್ದಾರೆ. ಇವರು ಮುಂಬೈ ಇಂಡಿಯನ್ಸ್‌ ವಿರುದ್ಧ ಸ್ಫೋಟಕ 90 ರನ್ ಬಾರಿಸಿ ಅಬ್ಬರಿಸಿದ್ದರು. ಅಲ್ಲದೆ ಸೋಲಿನಲ್ಲಿ ಮಿಂಚಿದ್ದರು. ಇವರು ಆಡಿದ 8 ಪಂದ್ಯಗಳಲ್ಲಿ 183 ರನ್‌ ಕಲೆ ಹಾಕಿದ್ದಾರೆ.

ಗ್ರೇಸ್ ಹ್ಯಾರಿಸ್‌

ಆರ್‌ಸಿಬಿ ತಂಡದ ಆರಂಭಿಕ ಆಟಗಾರ್ತಿ ಸ್ಫೋಟಕ ಆಟಕ್ಕೆ ಹೆಸರುವಾಸಿ. ಇವರು ತಮ್ಮ ಬಿಗ್‌ ಹಿಟ್ಟಿಂಗ್‌ನಿಂದ ರನ್‌ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಕ್ಷಮತೆ ಹೊಂದಿದ್ದಾರೆ. ಗ್ರೇಸ್ ಹ್ಯಾರಿಸ್‌ ಬೌಲಿಂಗ್‌ ಸಹ ಮಾಡಿ ವಿಕೆಟ್‌ ಕಬಳಿಸಬಲ್ಲರು. ಆಡಿದ 8 ಪಂದ್ಯಗಳಲ್ಲಿ 29ರ ಸರಾಸರಿಯಲ್ಲಿ 228 ರನ್‌ ಸಿಡಿಸಿದ್ದಾರೆ. ಇದರಲ್ಲಿ 36 ಬೌಂಡರಿ, 8 ಸಿಕ್ಸರ್‌ಗಳು ಸೇರಿವೆ.

ಲಾರೆನ್‌ ಬೆಲ್

ಇಂಗ್ಲೆಂಡ್‌ ತಂಡದ ವೇಗದ ಬೌಲರ್‌ ಲಾರೆನ್‌ ಬೆಲ್‌ ಸಹ ಆರ್‌ಸಿಬಿ ತಂಡದ ಗೆಲುವಿನಲ್ಲಿ ಮಿಂಚಿದ್ದಾರೆ. ಇವರು ಪವರ್‌ ಪ್ಲೇನಲ್ಲಿ ಡಾಟ್‌ ಬೌಲ್‌ಗಳನ್ನು ಎಸೆದು ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದ್ದಾರೆ. ಇವರು ಕ್ಲಾಸಿಕ್ ಬೌಲಿಂಗ್ ನಡೆಸಿ 12 ವಿಕೆಟ್‌ ಕಬಳಿಸಿದ್ದಾರೆ. ಈ ವೇಳೆ ಇವರ ಎಕನಾಮಿ 5.62 ಆಗಿದೆ.

Story first published: Monday, February 2, 2026, 8:06 [IST]
Other articles published on Feb 2, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+