RCB ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸಲಿರುವ ಐವರು ಸೂಪರ್ ಸ್ಟಾರ್
17 ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಪ್ರತಿ ಬಾರಿ ಐಪಿಎಲ್ ಆರಂಭವಾದಗಲೂ ಆರ್‌ಸಿಬಿ ಅಭಿಮಾನಿಗಳು ಹೇಳುವುದು ಈ ಬಾರಿ ಕಪ್ ನಮ್ದೆ ಎಂದು. ಆದರೆ, ಅಂಗಳಕ್ಕೆ ಇಳಿದಾಗ ಮಾತ್ರ ಬರೀ ನಿರಾಸೆ. ಇದರಿಂದ ಕಂಗೆಟ್ಟ ಅಭಿಮಾನಿಗಳಿಗೆ ಫುಲ್ ಹಬ್ಬದೂಟವನ್ನು ಉಣ ಬಡಿಸಲು ಆರ್‌ಸಿಬಿ ಮ್ಯನೇಜ್ಮೆಂಟ್ ಐಪಿಎಲ್ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗರರಿಗೆ ಉತ್ತಮ ಹಣವನ್ನು ನೀಡಿ ತಂಡಕ್ಕೆ ಬರಮಾಡಿಕೊಂಡಿದೆ. ಈ ಹೊಸ ಮುಖಗಳ ಸಹಾಯದಿಂದ ಈ ಬಾರಿ ಆರ್‌ಸಿಬಿ ಕಪ್ ಗೆಲುವಿನ ಕನಸು ಕಾಣುತ್ತಿದೆ.
ಸೌದಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಅಂದುಕೊಂಡ ಸ್ಟಾರ್ ಪ್ಲೇಯರ್‌ಗಳನ್ನು ಖರೀದಿಸದೇ ಇರುವುದು ನಿಜಕ್ಕೂ ಅಭಿಮಾನಿಗಳಲ್ಲಿ ಬೇಸರಿವಿದೆ. ಆದರೆ ಮ್ಯಾನೇಜ್ಮೆಂಟ್ ತಾನು ಹಾಕಿಕೊಂಡಿರುವ ಲೆಕ್ಕಾಚಾರದಂತೆ ಆಟಗರರನ್ನು ಖರೀದಿ ಮಾಡಿದೆ. ಆರ್‌ಸಿಬಿ ಮ್ಯಾನೇಜ್ಮೆಂಟ್‌ಗೆ ತಮ್ಮ ತಂಡಕ್ಕೆ ಎಂತಹ ಪ್ಲೇಯರ್‌ಗಳು ಬೇಕು ಎನ್ನುವುದು ಪಕ್ಕಾ ಕಂಡಹಾಗಿದೆ. ಹೀಗಾಗಿ ತಾವು ಹಾಕಿಕೊಂಡ ಯೋಜನೆಯಂತೆ ಮೆಗಾ ಹಾರಜಿನಲ್ಲಿ ಸ್ಟಾರ್ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಈ ಐವರು ಸೂಪರ್ ಸ್ಟಾರ್ ಆಟಗಾರರು ಈ ಬಾರಿ ಆರ್‌ಸಿಬಿಗೆ ಮುಕುಟ ತೊಡಿಸುವಲ್ಲಿ ಶ್ರಮಿಸಬೇಕಿದೆ.

ಇಬ್ಬರು ವೇಗುಗಳು
ಆರ್‌ಸಿಬಿ ಇಷ್ಟು ದಿನ ಸ್ಟಾರ್ ವೇಗಿಗಳು ಇಲ್ಲದೇ ಪರದಾಡಿತ್ತು. ಅಲ್ಲದೆ ಒಬ್ಬರ ಮೇಲೆ ಹೊಣೆಯನ್ನು ಹೊರಿಸಿ ಹೆಣಗಾಡಿತ್ತು. ಆದರೆ ಈ ಬಾರಿ ಬೌಲಿಂಗ್ ವಿಭಾಗವನ್ನು ಮನಸ್ಸಿನಲ್ಲಿಟ್ಟುಕೊಂಡು ಉತ್ತಮ ತಂಡವನ್ನು ಕಟ್ಟಿದೆ. ಈ ತಂಡದ ಮುಂದಾಳತ್ವವನ್ನು ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ ವಹಿಸಿಕೊಳ್ಳಲಿದ್ದಾರೆ. ಇವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 12.50 ಕೋಟಿ ರೂ.ಗೆ ಖರೀದಿಸಿದೆ. ಭಾರತದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮತ್ತೊಮ್ಮೆ ಹೊಸ ತಂಡವನ್ನು ಸೇರಿಕೊಂಡಿದ್ದು, ಆರ್‌ಸಿಬಿ ಇವರಿಗೆ 10.75 ಕೋಟಿಗೆ ನೀಡಿದೆ. ಹೋಮ್ ಕಂಡೀಷನ್‌ನಲ್ಲಿ ಭುವಿ ಮಾರಕ.
ಅಬ್ಬರಿಸಿಬೇಕಿದೆ ಬ್ಯಾಟರ್ಸ್
ಇಂಗ್ಲೆಂಡ್‌ನ ಸ್ಫೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರು ಕಳೆದ ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅಲ್ಲದೆ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೀಡುತ್ತಿದ್ದಾರೆ. ಇವರಿಗೆ ಆರ್‌ಸಿಬಿ 11.50 ಕೋಟಿ ನೀಡಿ ಖರೀದಿಸಿದೆ. ಇವರ ಆಗಮನ ನಿಶ್ಚಿತವಾಗಿ ಆರ್‌ಸಿಬಿ ಬ್ಯಾಟಿಂಗ್ ವಿಭಾಗಕ್ಕೆ ಆನೆ ಬಲ ತುಂಬಿದಂತಿದೆ.
ಆರ್‌ಸಿಬಿ ಈ ಬಾರಿ ದಿನೇಶ್ ಕಾರ್ತಿಕ್ ಅವರ ಬದಲಿಗೆ ಜಿತೇಶ್ ಶರ್ಮಾ ಅವರಿಗೆ ಮಣೆ ಹಾಕಿದೆ. ಇವರು ನೀರು ಕುಡಿದಷ್ಟೇ ಸಲೀಸಾಗಿ ಸಿಕ್ಸರ್ ಬಾರಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಒಮ್ಮೆ ನೆಲಕಚ್ಚಿ ನಿಂತಲ್ಲಿ ಬಿಗ್ ಇನಿಂಗ್ಸ್ ಆಡುವಲ್ಲಿ ಇವರು ನಿಪುಣರು. ಇವರಿಗೆ ಆರ್‌ಸಿಬಿ 11 ಕೋಟಿ ನೀಡಿದೆ. ಇವರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದರೆ ಸಾಕು.'

ಇಂಗ್ಲೆಂಡ್ ಆಲ್‌ರೌಂಡರ್ ಗ್ರ್ಯಾಂಡ್ ಎಂಟ್ರಿ
ಇಂಗ್ಲೆಂಡ್‌ನ ಸೂಪರ್ ಸ್ಟಾರ್ ಆಲ್‌ರೌಂಡರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ಬಾರಿ ಬಿಗ್ ಇನಿಂಗ್ಸ್ ಕಟ್ಟುವ ಮೂಲಕ ಹೆಸರು ಮಾಡಿದ್ದಾರೆ. ಮಿಡ್ಲ್ ಆರ್ಡರ್‌ನಲ್ಲಿ ವೇಗದ ಇನಿಂಗ್ಸ್ ಕಟ್ಟುವುದು ಇವರ ಸ್ಟ್ರೆಂತ್. ಐಪಿಎಲ್‌ನಲ್ಲೂ ಇವರ ಹಲವು ಸ್ಮರಣೀಯ ಇನಿಂಗ್ಸ್ ಆಡಿದ್ದು, ಇವರಿಗೆ ಆರ್‌ಸಿಬಿ 8.75 ಕೋಟಿ ರೂ. ನೀಡಿ ತಂಡಕ್ಕೆ ಬರ ಮಾಡಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications