For Quick Alerts
ALLOW NOTIFICATIONS  
For Daily Alerts
 

IPL 2025 Auction: ಈ ಆಲ್‌ರೌಂಡರ್‌ಗಳ ಮೇಲೆ ಆರ್‌ಸಿಬಿ ಕಣ್ಣು

ಭಾರತದಲ್ಲಿ ದಿನದಿಂದ ದಿನಕ್ಕೆ ಐಪಿಎಲ್ ಕ್ರೇಜ್ ಹೆಚ್ಚಾಗುತ್ತಿದೆ. ಏಕೆಂದರೆ ಐಪಿಎಲ್ 2025ರ ಟೂರ್ನಿಗೂ ಮೊದಲು ಮೆಗಾ ಹರಾಜು ನಡೆಯಲಿದೆ. ರೋಹಿತ್ ಶರ್ಮಾ, ಸೂರ್ಯಕುಮಾರ್, ಕೆಎಲ್‌ ರಾಹುಲ್ ಮತ್ತು ರಿಷಬ್ ಪಂತ್ ಸೇರಿದಂತೆ ಹಲವು ಸ್ಟಾರ್ ಆಟಗಾರರ ಬಗ್ಗೆ ವಿವಿಧ ರೀತಿಯ ಸುದ್ದಿಗಳು ಹರಿದಾಡುತ್ತಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕಾರ್ಯತಂತ್ರ ರಹಸ್ಯವಾಗಿ ನಡೆಯುತ್ತಿದೆ. ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಯಾರನ್ನು ಬಿಡುಗಡೆ ಮಾಡಬೇಕು ಎಂಬುದನ್ನು ಬಹಿರಂಗಪಡಿಸಿಲ್ಲ. ಅಲ್ಲದೆ, ಆರ್‌ಸಿಬಿ ತಂಡದಲ್ಲಿ ಯಾವುದೇ ಅಸಮಾಧನಗಳಿಲ್ಲ. ಎಲ್ಲ ಆಟಗಾರರು ಸ್ನೇಹ ಬಾಂದವ್ಯದಿಂದ ಇದ್ದಾರೆ.

RCB bid on these all-rounders in IPL Mega Auction 2025

ಮುಂಬರುವ 2025ರ ಐಪಿಎಲ್‌ ಹರಾಜಿನಲ್ಲಿ ಆರ್‌ಸಿಬಿ ತಂಡಕ್ಕೆ ಉಪಯುಕ್ತವಾಗುವ ಆಲ್‌ರೌಂಡರ್‌ಗಳನ್ನು ಕರೆತರಲು ಯೋಜನೆ ರೂಪಿಸುತ್ತಿದೆ. ಯಾವ ಮೂವರು ಆಲ್‌ರೌಂಡರ್‌ಗಳು ಆರ್‌ಸಿಬಿ ಸೇರಿದರೆ ತಂಡದ ಬಲ ಹೆಚ್ಚಾಗಲಿದೆ ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಗ್ಲೆನ್ ಫಿಲಿಪ್ಸ್

ನ್ಯೂಜಿಲೆಂಡ್ ತಂಡದ ಗ್ಲೆನ್ ಫಿಲಿಪ್ಸ್ ಸ್ಪೋಟಕ ಬ್ಯಾಟಿಂಗ್ ಮತ್ತು ಬೆಂಕಿ ಫೀಲ್ಡಿಂಗ್‌ಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅವರು ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಆದರೆ ಐಪಿಎಲ್‌ನಲ್ಲಿ ಇನ್ನೂ ತಮ್ಮ ಶೈಲಿಯನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಲಿಲ್ಲ.

ಆರ್‌ಸಿಬಿ ಗ್ಲೆನ್ ಫಿಲಿಪ್ಸ್ ಅವರನ್ನು ಬಿಡ್ ಮಾಡುವುದಕ್ಕೆ ರೆಡಿಯಾಗಿದೆ. ಒಂದು ವೇಳೆ ಅವರು ಆರ್‌ಸಿಬಿ ಸೇರಿಕೊಂಡರೆ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಇನಷ್ಟು ವಿಭಿನ್ನವಾಗಿರಲಿದೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ಹೊರತುಪಡಿಸಿ ಅಗ್ರ ಕ್ರಮಾಂಕದಲ್ಲಿ ಯಾವುದೇ ಬ್ಯಾಟರ್ ಇಲ್ಲ. ಹೀಗಾಗಿ ಅವರು ಒಬ್ಬ ಆಗ್ರ ಕ್ರಮಾಂಕದ ಬ್ಯಾಟರ್ ಆಗಿ ತಂಡಕ್ಕೆ ನೆರವಾಗಬಹುದು. ಫಿಲಿಪ್ಸ್ ಟಿ20ಯಲ್ಲಿ 2 ಶತಕಗಳನ್ನು ಬಾರಿಸಿದ್ದಾರೆ.

ಅಶುತೋಷ್ ಶರ್ಮಾ

ಐಪಿಎಲ್ 2024 ರಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಪಂಜಾಬ್‌ ಪರ ಅಬ್ಬರಿಸಿದ ಅಶುತೋಷ್ ಶರ್ಮಾ ಈಗ ಸ್ಟಾರ್ ಆಗಿದ್ದಾರೆ. ಅಶುತೋಷ್ ಅವರ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಈಗಾಗಲೇ ಎಲ್ಲ ತಂಡಗಳಿಗೆ ತಿಳಿದಿದೆ. ಆರ್‌ಸಿಬಿ ಈ ಆಟಗಾರನನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಬೀಸುವುದರ ಜೊತೆಗೆ ಬೌಲಿಂಗ್ ಕೂಡ ಮಾಡಬಲ್ಲರು. ಹೀಗಾಗಿ ಈ ಆಟಗಾರನನ್ನು ಖರೀದಿ ಮಾಡಬಹುದು.

ಲಿಯಾಮ್ ಲಿವಿಂಗ್ಸ್ಟೋನ್

ಇಂಗ್ಲೆಂಡ್‌ನ ಅಪಾಯಕಾರಿ ಆಲ್‌ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ ಐಪಿಎಲ್‌ನಲ್ಲಿ ಅಬ್ಬರಿಸಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದ್ದಾರೆ. ಸೋಲುವ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಅವರಲ್ಲಿದೆ. ಪಂಜಾಬ್ ಕಿಂಗ್ಸ್ ಅವರನ್ನು ಉಳಿಸಿಕೊಳ್ಳದಿದ್ದರೆ, ಆರ್‌ಸಿಬಿ ಲಿವಿಂಗ್ಸ್ಟೋನ್ ಅವರನ್ನು ತಂಡಕ್ಕೆ ಕರೆತರುವ ಸಿದ್ಧತೆ ನಡೆಸಿದೆ.

Story first published: Monday, August 26, 2024, 15:19 [IST]
Other articles published on Aug 26, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+