RCB vs PBKS IPL 2025: ತವರಿನಾಚೆ ಅಬ್ಬರ ಮುಂದುವರೆಸಿದ ಆರ್‌ಸಿಬಿ: ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ
ಶುಕ್ರವಾರ ಬೆಂಗಳೂರಿನಲ್ಲಿ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ , ಪಂಜಾಬ್ ವಿರುದ್ಧ 5 ವಿಕೆಟ್ ಸೋಲು ಕಂಡಿತ್ತು. ಆದರೆ ಈ ಸೋಲಿನ ಕಹಿಯನ್ನು ಮರೆಯಲು ಆರ್‌ಸಿಬಿ, ಪಂಜಾಬ್ ಕಿಂಗ್ಸ್ ವಿರುದ್ಧವೇ ಅವರದ್ದೇ ತವರಿನಲ್ಲಿ 7 ವಿಕೆಟ್‌ಗಳಿಂದ ಮಣಿಸಿ ಅಬ್ಬರಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳ ಭರ್ಜರಿ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಬಿಗುವಿನ ದಾಳಿಗೆ ಈ ಜಯ ಸಂದಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆರ್‌ಸಿಬಿ 18.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಸೇರಿಸಿ ಜಯ ಸಾಧಿಸಿದೆ. ಈ ಮೂಲಕ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಪಂಜಾಬ್ ಹಾಗೂ ಆರ್‌ಸಿಬಿ ತಲಾ 10 ಅಂಕಗಳನ್ನು ಕಲೆ ಹಾಕಿದ್ದು ಆರ್‌ಸಿಬಿ ರನ್ ರೇಟ್ (0.472) ಪಂಜಾಬ್‌ಗಿಂತ ಉತ್ತಮವಾಗಿದ್ದರಿಂದ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಪಿಬಿಕೆಎಸ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

158 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಫಿಲ್ ಸಾಲ್ಟ್, ಅರ್ಷದೀಪ್ ಸಿಂಗ್ ಎಸೆದಿದ್ದ ಶಾಟ್ ಬೌಲ್‌ನ್ನು ಪುಲ್ ಮಾಡಲು ಹೋಗಿ ಜೋಶ್ ಇಂಗ್ಲೀಷ್‌ಗೆ ಕ್ಯಾಚ್ ನೀಡಿದರು. ಆಗ ಆರ್‌ಸಿಬಿ ಸ್ಕೋರ್ 6 ರನ್ ಆಗಿತ್ತು. ಇಲ್ಲಿಂದ ತಂಡವನ್ನು ಮೇಲೆತ್ತು ಜವಾಬ್ದಾರಿ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್ ಮೇಲೆ ಇತ್ತು.
ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟ
ಎರಡನೇ ವಿಕೆಟ್‌ಗೆ ಈ ಜೋಡಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿತು. ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿದ ಜೋಡಿ ಸರಿಯಾದ ಸಮಯದಲ್ಲಿ ಸ್ಟ್ರೈಕ್ ರೋಟೆಟ್ ಸಹ ಮಾಡುತ್ತಿತ್ತು. ಈ ಜೋಡಿಯನ್ನು ಕಟ್ಟಿಹಾಕುವು ಪಂಜಾಬ್‌ಕಿಂಗ್ಸ್‌ಗೆ ಸವಾಲಾಗಿತ್ತು. ಈ ಜೋಡಿ 11 ಓವರ್‌ಗೂ ಹೆಚ್ಚು ಬ್ಯಾಟಿಂಗ್ ನಡೆಸಿ ವಿಕೆಟ್ ಬೀಳದಂತೆ ಕಾಯ್ದುಕೊಂಡಿತು. ಈ ಜೋಡಿ ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಸರೆಯಾಯಿತು. ಈ ಜೋಡಿ ಶತಕದ ಜೊತೆಯಾಟವನ್ನು ನೀಡಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿತು.

ವಿರಾಟ್, ದೇವದತ್ ಅರ್ಧಶತಕ
ದೇವದತ್ ಪಡಿಕ್ಕಲ್ ಅವರ ಅಮೋಘ ಇನಿಂಗ್ಸ್ 61 ರನ್‌ಗಳಿಗೆ ಕೊನೆಯಾಯಿತು. ಇವರು ಎದುರಿಸಿದ 35 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಿಡಿಸಿದರು. ಇವರ ವಿಕೆಟ್ ಬೀಳುತ್ತಿದ್ದಂತೆ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳದ ವಿರಾಟ್ ತಮ್ಮ ನೈಜ್ಯ ಆಟವನ್ನು ಆಡಿದರು. ಇವರು 54 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 73 ರನ್ ಸಿಡಿಸಿದರು. ಜಿತೇಶ್ ಶರ್ಮಾ ಅಜೇಯ 11 ರನ್ ಸಿಡಿಸಿದರು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡದ ಆರಂಭ ಭರ್ಜರಿಯಾಗಿತ್ತು. ಆದರೆ ಐದನೇ ಓವರ್‌ನ ಎರಡನೇ ಎಸೆತದಲ್ಲಿ ಪ್ರಿಯಾಂಶ್ (22 ರನ್) ಔಟ್ ಆಗುತ್ತಿದ್ದಂತೆ ಇವರ ವಿಕೆಟ್ ಪತನ ಶುರುವಾಯಿತು. ಫ್ರಭಸಿಮ್ರನ್ ಸಿಂಗ್ (33 ರನ್), ಶ್ರೇಯಸ್ ಅಯ್ಯರ್ (6 ರನ್), ನೇಹಾಲ್ ವಧೇರಾ (5 ರನ್), ಜೋಶ್ ಇಂಗ್ಲಿಷ್ (29 ರನ್) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಶಶಾಂಕ್ ಸಿಂಗ್ ಬಾರಿಸಿದ 31 ರನ್ ಹಾಗೂ ಮಾರ್ಕೊ ಜಾನ್ಸನ್ ಬಾರಿಸಿದ 25 ರನ್ ಸಹಾಯದಿಂದ ಪಂಜಾಬ್ ಸ್ಪರ್ದಾತ್ಮಕ ಮೊತ್ತ ಕಲೆ ಹಾಕಿತು.
ಆರ್‌ಸಿಬಿ ಪರ ಸುಯೇಶ್ ಶರ್ಮಾ ಹಾಗೂ ಕೃಣಾಲ್ ಪಾಂಡ್ಯ ತಲಾ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications