Reece Topley: ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಫೋಟೊ ಹಂಚಿಕೊಂಡ ಆರ್‌ಸಿಬಿ ವೇಗಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಡಗೈ ವೇಗದ ಬೌಲರ್ ರೀಸ್ ಟೋಪ್ಲಿ ಇಂಗ್ಲೆಂಡ್‌ನಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ಅವರು ಆಡಿದ ಮೊದಲ ಪಂದ್ಯದಲ್ಲೇ ಫೀಲ್ಡಿಂಗ್ ವೇಳೆ ಭುಜದ ಗಾಯಕ್ಕೆ ಒಳಗಾಗಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ ಎರಡು ಓವರ್ ಬೌಲಿಂಗ್ ಮಾಡಿದ್ದ ಅವರು ಕ್ಯಾಮೆರಾನ್ ಗ್ರೀನ್ ಅವರ ವಿಕೆಟ್ ಪಡೆದುಕೊಂಡಿದ್ದರು.
ಮೊದಲ ಪಂದ್ಯದಲ್ಲಿ ಭುಜಕ್ಕೆ ಗಾಯ ಮಾಡಿಕೊಂಡ ಬಳಿಕ ಅವರು ಎರಡನೇ ಪಂದ್ಯಕ್ಕಾಗಿ ಆರ್ ಸಿಬಿ ಜೊತೆ ಕೆಕೆಆರ್ ವಿರುದ್ಧದ ಪಂದ್ಯಕ್ಕಾಗಿ ಕೋಲ್ಕತ್ತಾಗೆ ತೆರಳಿದ್ದರು. ಆದರೆ, ಗಾಯದ ಬಗ್ಗೆ ವರದಿ ಬಂದ ಬಳಿಕ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲು ಅಲ್ಲಿಂದ ಇಂಗ್ಲೆಂಡ್‌ಗೆ ತೆರಳಿದ್ದರು. ಐಪಿಎಲ್ ಮಿನಿ ಹರಾಜಿನಲ್ಲಿ ಆರ್ ಸಿಬಿ ಇಂಗ್ಲೆಂಡ್ ಎಡಗೈ ವೇಗಿಯನ್ನು 1.90 ಕೋಟಿ ರೂಪಾಯಿಗೆ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು.

ರೀಸ್ ಟೋಪ್ಲಿ ಪದೇ ಪದೇ ಗಾಯಕ್ಕೆ ತುತ್ತಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. 2022ರ ಟಿ20 ವಿಶ್ವಕಪ್ ಸಂದರ್ಭದಲ್ಲಿ ಕಾಲಿಗೆ ಗಾಯಮಾಡಿಕೊಂಡಿದ್ದರಿಂದ ಇಡೀ ಟೂರ್ನಿಯನ್ನೇ ಕಳೆದುಕೊಂಡರು. ಅಂದಿನಿಂದ ವಿಶ್ರಾಂತಿಯಲ್ಲಿದ್ದ ಅವರು ನಂತರ ಐಪಿಎಲ್ ವೇಳೆಗೆ ಸಂಪೂರ್ಣವಾಗಿ ಫಿಟ್ ಆಗಿದ್ದರು. ದುರಾದೃಷ್ಟ ಎಂದರೆ ಅವರು ಐಪಿಎಲ್‌ನ ಪದಾರ್ಪಣಾ ಪಂದ್ಯದಲ್ಲೇ ಗಾಯಗೊಂಡು ವಾಪಸ್ ತೆರಳಬೇಕಾಯಿತು.
ತಮ್ಮ ಗಾಯದ ಬಗ್ಗೆ ತಾವೇ ಹಾಸ್ಯ ಮಾಡಿದ ಟೋಪ್ಲಿ
ರೀಸ್ ಟೋಪ್ಲಿ ಇಂಗ್ಲೆಂಡ್‌ನಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಆಸ್ಪತ್ರೆಯಲ್ಲಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಜೊತೆಗೆ "ಪದೇ ಪದೇ ಇಲ್ಲಿಗೆ ಬರುವಂತಾಗಿದೆ" ಎನ್ನುವ ಅರ್ಥದಲ್ಲಿ ಹಾಸ್ಯವಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಅವರು ಕನಿಷ್ಠ ಎಂಟು ವಾರಗಳ ಕಾಲ ಕ್ರಿಕೆಟ್‌ನಿಂದ ದೂರವುಳಿಯಲಿದ್ದಾರೆ.
ರೀಸ್ ಟೋಪ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಎಡಗೈ ವೇಗಿಯಾಗಿರುವ ಅವರು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಈಗಾಗಲೇ ಭರವಸೆ ಮೂಡಿಸಿದ್ದಾರೆ. ಇನ್ನು ಎರಡು ತಿಂಗಳಿನಲ್ಲಿ ಅವರು ಸಂಪೂರ್ಣವಾಗಿ ಫಿಟ್ ಆಗುವ ವಿಶ್ವಾಸದಲ್ಲಿದ್ದಾರೆ. ಇದುವರೆಗೂ 140 ಟಿ20 ಪಂದ್ಯಗಳನ್ನಾಡಿರುವ ಅವರು ಒಟ್ಟು 179 ವಿಕೆಟ್ ಪಡೆದುಕೊಂಡಿದ್ದಾರೆ, 22 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ್ದು 33 ವಿಕೆಟ್ ಪಡೆದಿದ್ದಾರೆ.
ರೀಸ್ ಟೋಪ್ಲಿ ಐಪಿಎಲ್‌ನಿಂದ ಹೊರಗುಳಿದ ಬಳಿಕ ಅವರ ಬದಲಾಗಿ ದಕ್ಷಿಣ ಆಫ್ರಿಕಾದ ಎಡಗೈ ವೇಗಿ ವೇಯ್ನ್ ಪಾರ್ನೆಲ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ವೇಯ್ನ್ ಪಾರ್ನೆಲ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲೇ ಮೂರು ವಿಕೆಟ್ ಪಡೆದುಕೊಳ್ಳುವ ಮೂಲಕ ಭರವಸೆ ಮೂಡಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅನುಜ್ ರಾವತ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಕರಣ್ ಶರ್ಮಾ, ಸುಯಾಶ್ ಪ್ರಭುದೇಸಾಯಿ, ಆಕಾಶ್ ದೀಪ್, ಮಿಚಾಲ್ ಭೂಸ್ ಸೋನು ಯಾದವ್, ಫಿನ್ ಅಲೆನ್, ಸಿದ್ದಾರ್ಥ್ ಕೌಲ್, ರಾಜನ್ ಕುಮಾರ್, ಅವಿನಾಶ್ ಸಿಂಗ್, ಹಿಮಾಂಶು ಶರ್ಮಾ, ಮನೋಜ್ ಭಾಂಡಗೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications