WPL 2025: RCB ಬಿಗುವಿನ ದಾಳಿಗೆ ಡೆಲ್ಲಿ ಬ್ಯಾಟರ್ಸ್ ಡುಬ್ಕಿ
ವಡೋಧರಾದಲ್ಲಿ ನಡೆಯುತ್ತಿರುವ ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನ 4ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್‌ಗಳು ಅಮೋಘ ಪ್ರದರ್ಶನ ನೀಡಿದರು. ಆರ್‌ಸಿಬಿ ಬೌಲರ್‌ಗಳು ಬಿಗುವಿನ ದಾಳಿ ನಡೆಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಆರ್‌ಸಿಬಿ ಡೆಲ್ಲಿ ತಂಡವನ್ನು 19.3 ಓವರ್‌ಗಳಲ್ಲಿ 141 ರನ್‌ಗಳಿಗೆ ಆಲೌಟ್ ಆಯಿತು.
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಆರ್‌ಸಿಬಿ ಮಾಡಿತು. ಸ್ಮೃತಿ ಮಂಧನಾ ಅವರ ನಿರ್ಧಾರವನ್ನು ಬೌಲರ್‌ಗಳು ಸಮರ್ಥಿಸಿಕೊಳ್ಳುವಲ್ಲಿ ಸಫಲರಾದರು. ಆರ್‌ಸಿಬಿ ಪರ ರೇಣುಕಾ ಸಿಂಗ್ ಇನಿಂಗ್ಸ್‌ನ ಎರಡನೇ ಎಸೆತದಲ್ಲಿ ಸ್ಫೋಟಕ ಬ್ಯಾಟರ್ ಶೆಫಾಲಿ ವರ್ಮಾ ಅವರಿಗೆ ಖೆಡ್ಡಾ ತೋಡಿದರು.

ಎರಡನೇ ವಿಕೆಟ್‌ಗೆ ಉತ್ತಮ ಜೊತೆಯಾಟ
ಎರಡನೇ ವಿಕೆಟ್‌ಗೆ ನಾಯಕಿ ಮೆಗ್ ಲ್ಯಾನಿಂಗ್ ಹಾಗೂ ಜಿಮಾಮ ರೋಡಿಗ್ರಸ್ ಜೋಡಿ ಅಮೋಘ ಜೊತೆಯಾಟದ ಪ್ರದರ್ಶನ ನೀಡಿತು. ಈ ಜೋಡಿ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿತು. ಅಲ್ಲದೆ ಪವರ್ ಪ್ಲೇನಲ್ಲಿ ವಿಕೆಟ್ ಬೀಳದಂತೆ ನೋಡಿಕೊಂಡಿತು. ಈ ಜೋಡಿ ಎರಡನೇ ವಿಕೆಟ್‌ಗೆ 39 ಎಸೆತಗಳಲ್ಲಿ 59 ರನ್ ಸೇರಿಸಿತು. ಈ ವೇಳೆ ಜಿಮಾಮ ರೋಡಿಗ್ರಸ್ 22 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 34 ರನ್ ಸಿಡಿಸಿ ಔಟ್ ಆದರು.
ಭರವಸೆಯ ಆಟಗಾರ್ತಿ ಮೆಗ್ ಲ್ಯಾನಿಂಗ್ 19 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 17 ರನ್ ಸಿಡಿಸಿ ಔಟ್ ಆದರು. ಉಳಿದಂತೆ ಅನ್ನಾಬೆಲ್ ಸದರ್ಲ್ಯಾಂಡ್ 19, ಮರಿಜನ್ನೆ ಕಪ್ಪ್ 12 ರನ್ ಸಿಡಿಸಿದರೂ, ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಡೆಲ್ಲಿ ತಂಡದ ಪರ ಯಾವೊಬ್ಬ ಆಟಗಾರ್ತಿ ನೆಲಕಚ್ಚಿ ನಿಂತು ಬ್ಯಾಟ್ ಮಾಡಲಿಲ್ಲ. ಅಲ್ಲದೆ ಆರ್‌ಸಿಬಿ ಬೌಲರ್‌ಗಳ ಕರಾರುವಕ್ ದಾಳಿಗೆ ಡೆಲ್ಲಿ ಬ್ಯಾಟರ್‌ಗಳು ಮಂಕಾದರು. ಮಧ್ಯಮ ಕ್ರಮಾಂಕದಲ್ಲಿ ಸಾರಾ ಬ್ರಿಕೆ (23) ಮಾತ್ರ ಕೊಂಚ ಎದುರಾಳಿಗಳನ್ನು ಕಾಡಿದರು.
ಆರ್‌ಸಿಬಿ ಪರ ಅಮೋಘ ದಾಳಿಯನ್ನು ಬೌಲರ್‌ಗಳು ಸಂಘಟಿಸಿದರು. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಯುವ ಆಟಗಾರ್ತಿ ವಿಜೆ ಜೋಶಿತಾ ಮಾತ್ರ ಕೊಂಚ ದುಬಾರಿ ಆದರು. ಉಳಿದಂತೆ ಜಾರ್ಜಿಯಾ ವೇರ್‌ಹ್ಯಾಮ್ 4 ಓವರ್ ಬೌಲ್ ಮಾಡಿ 25 ರನ್ 3 ವಿಕೆಟ್ ಕಬಳಿಸಿದರು. ಭಾರತದ ಭರವಸೆಯ ಆಟಗಾರ್ತಿ ರೇಣುಕಾ ಸಿಂಗ್ ಸಹ 23 ರನ್ ನೀಡಿ 3 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications