RCB ತಂಡದಲ್ಲಿ ರೇಣುಕಾ ಸಿಂಗ್ ಸ್ಥಾನವನ್ನು ತುಂಬಿದ ವೇಗದ ಬೌಲರ್ ಯಾರು?
ಇಂಗ್ಲೆಂಡ್ ತಂಡದ ಭರವಸೆಯ ವೇಗದ ಬೌಲರ್ ಲಾರೆನ್ ಬೆಲ್ ಅವರನ್ನು ಕೊಂಡುಕೊಳ್ಳುವಲ್ಲಿ ಆರ್‌ಸಿಬಿ ಸಫಲವಾಗಿದೆ. ಇವರು ರೇಣುಕಾ ಸಿಂಗ್ ಠಾಕೂರ್ ಅವರಿಂದ ತೆರವಾದ ವೇಗದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಇವರು ಈಗಾಗಲೇ ಇಂಗ್ಲೆಂಡ್ ತಂಡದ ಪರ ವೇಗದ ಬೌಲಿಂಗ್ ಮೂಲಕ ಬಲ ತುಂಬಿದ ಆಟಗಾರ್ತಿ. ಇವರು ತಮ್ಮ ಬಿಗುವಿನ ದಾಳಿಯಿಂದ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲ ಆಟಗಾರ್ತಿ. ಇವರು ಆರ್‌ಸಿಬಿ ತಂಡದ ವೇಗದ ಬೌಲಿಂಗ್ ನೊಗವನ್ನು ಹೊರಲಿದ್ದಾರೆ.
24 ವರ್ಷದ ಇಂಗ್ಲೆಂಡ್ ತಂಡದ ವೇಗದ ಬೌಲರ್ ಲಾರೆನ್ ಬೆಲ್ (Lauren Bell) ಈಗಾಗಲೇ ಟೆಸ್ಟ್, ಏಕದಿನ, ಟಿ20 ಫಾರ್ಮೆಟ್‌ನಲ್ಲಿ ತಂಡದ ಪರ ಆಡಿದ್ದಾರೆ. ಇವರು ಆಡಿರುವ 36 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 50 ವಿಕೆಟ್ ಕಬಳಿಸಿದ್ದಾರೆ. ಇವರು 2022ರಲ್ಲಿ ಭಾರತದ ವಿರುದ್ಧ ಟಿ20 ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿದ್ದರು. ಇವರು ಏಕದಿನ ಕ್ರಿಕೆಟ್‌ನಲ್ಲೂ 31 ಪಂದ್ಯಗಳನ್ನು ಆಡಿದ್ದು, 44 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ 5 ಟೆಸ್ಟ್ ಪಂದ್ಯಗಳನ್ನು ಆಡಿದ್ದು 18 ವಿಕೆಟ್ ಪಡೆದಿದ್ದಾರೆ.

ಆರ್‌ಸಿಬಿ ತಂಡದ ಈ ಹಿಂದಿನ ಆವೃತ್ತಿಗಳಲ್ಲಿ ವೇಗದ ಬೌಲಿಂಗ್ ನೊಗವನ್ನು ಹೊತ್ತುಕೊಂಡಿದ್ದ ರೇಣುಕಾ ಸಿಂಗ್ ಠಾಕೂರ್ ಅವರು ಈ ಬಾರಿ ಡಬ್ಲ್ಯೂಪಿಎಲ್‌ನಲ್ಲಿ ಗುಜರಾತ್ ಜೈಂಟ್ಸ್ ಪರ ಆಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications