Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯಾರಾಗಲಿದ್ದಾರೆ RCB ಕೋಚ್?: ಉತ್ತಮ ಆಯ್ಕೆಯಾಗಬಲ್ಲರು ಟ್ರೋಫಿ ಗೆದ್ದ ಈ 3 ಐಪಿಎಲ್ ಮಾಜಿ ಕೋಚ್‌ಗಳು!

ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಟ್ರೋಫಿ ಗೆಲ್ಲುವ ಕನಸು ಈವರೆಗೂ ನನಸಾಗಿಲ್ಲ. 2008ರಲ್ಲಿ ಟೂರ್ನಿ ಆರಂಭವಾದಾಗಿನಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅನೇಜ ಸ್ಟಾರ್ ಆಟಗಾರರು, ಕೋಚಿಂಗ್ ಸಿಬ್ಬಂದಿಗಳನ್ನು ಹೊಂದಿದ್ದರೂ ಟ್ರೋಫಿ ಗೆಲ್ಲವ ಕನಸು ಈಡೀರಿಸಿಕೊಳ್ಳಲು ಸಾಧ್ಯವಾಗಿಲ್ಲ. 16 ಆವೃತ್ತಿಗಳಲ್ಲಿಯೂ ಆರ್‌ಸಿಬಿ ಆಡಿದ್ದರು ಕೂಡ ಈ ಕನಸು ನನಸಾಗದ ಬಗ್ಗೆ ಅಭಿಮಾನಿಗಳು ಬೇಸರ ಗೊಂಡಿರುವುದು ಕೂಡ ನಿಜ. ಹಾಗಿದ್ದರೂ ಆರ್‌ಸಿಬಿ ತಂಡಕ್ಕೆ ಅಭಿಮಾನಿಗಳ ಬೆಂಬಲ ಕಡಿಮೆಯಾಗಿಲ್ಲ.

ಆರ್‌ಸಿಬಿ ತಂಡ ಈ ಅವಧಿಯಲ್ಲಿ ವಿಶ್ವಕ್ರಿಕೆಟ್‌ನ ಅದ್ಭುತ ಪ್ರತಿಭೆಗಳನ್ನು ಪ್ರತಿಷ್ಠಿತ ಕೋಚ್‌ಗಳನ್ನು ಹೊಂದಿದ್ದರು ಕೂಡ ಐಪಿಎಲ್ ಟ್ರೋಫಿ ಗೆಲ್ಲಲು ಪ್ರತಿ ಬಾರಿಯೂ ವಿಫಲವಾಗುತ್ತಿದೆ. ಈ ಸಂದರ್ಭದಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಐಪಿಎಲ್‌ನಲ್ಲಿ ಈಗಾಗಲೇ ಟ್ರೋಫಿ ಗೆದ್ದಿರುವ ಕೋಚ್‌ಗಳನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಬಗ್ಗೆಯೂ ಚಿಂತಿಸುವ ಸಾಧ್ಯತೆಯಿದೆ.

RCB can hire These 3 former IPL winning coaches to win the trophy in 2024

2023ರ ಐಪಿಎಲ್ ಟೂರ್ನಿಯ ಬಳಿಕ ಆರ್‌ಸಿಬಿ ಮ್ಯಾನೇಜ್‌ಮೆಂಟ್ ತಂಡದ ನಿರ್ದೇಶಕ ಮೈಕ್ ಹಸನ್ ಹಾಗೂ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರನ್ನು ಕೈಬಿಡಲಿದ್ದಾರೆ ಎಂದು ವರದಿಯಾಗಿದ್ದು ಹೊಸ ಕೋಚ್‌ಗಳನ್ನು ನೇಮಿಸಲಿದ್ದಾರೆ. ಈ ಸಂದರ್ಭದಲ್ಲಿ ಆರ್‌ಸಿಬಿ ನೇಮಿಸಿಕೊಳ್ಳಬಹುದಾದ ಐಪಿಎಲ್ ಗೆದ್ದ ಮೂವರು ಮಾಜಿ ಕೋಚ್‌ಗಳ ಮಾಹಿತಿ ಇಲ್ಲಿದೆ.

ಆರ್‌ಸಿಬಿ ಟ್ರೋಫಿ ಗೆಲ್ಲಲು ಸಹಾಯಮಾಡಬಹುದು ಡ್ಯಾರನ್ ಲೆಹ್ಮನ್
ಆಸ್ಟ್ರೇಲಿಯಾದ ಮಾಜಿ ಕರಿಕೆಟಿಗ ಡ್ಯಾರನ್ ಲೆಹ್ಮನ್ ಐಪಿಎಲ್ ಟ್ರೋಫಿ ಗೆದ್ದ ಯಶಸ್ವಿ ಕೋಚ್‌ಗಳ ಪೈಕಿ ಒಬ್ಬರು. 2008ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ್ದ ತಂಡದ ಸದಸ್ಯರಾಗಿದ್ದರು. ಮುಂದಿನ ವರ್ಷ ಅಂದರೆ 2009ರಲ್ಲಿ ಅವರು ಡೆಕ್ಕನ್ ಚಾರ್ಚರ್ಸ್ ತಂಡದ ಕೋಚ್ ಆಗಿ ಸೇರ್ಪಡೆಯಾದರು. 2008ರಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಡೆಕ್ಕನ್ ಚಾರ್ಜರ್ಸ್ ತಂಡ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮುಂದಿನ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಗೆದ್ದು ಬೀಗಿತ್ತು. ಡ್ಯಾರನ್ ಲೆಹ್ಮನ್ ಅವರ ಅನುಭವ ಆರ್‌ಸಿಬಿ ತಂಡಕ್ಕೆ ಸಹಕಾರಿಯಾಗಬಹುದು.

ಪಂಜಾಬ್ ಕಿಂಗ್ಸ್ ತೊರೆದು ಆರ್‌ಸಿಬಿ ಸೇರಿಕೊಳ್ಳುತ್ತಾರಾ ಟ್ರೆವರ್ ಬೆಲಿಸ್
ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚ್ ಆಗಿದ್ದ ಆಂಡಿ ಫ್ಲವರ್ ಆ ಫ್ರಾಂಚೈಸಿ ತೊರೆದಿದ್ದಾರೆ. ಕ್ರಿಕ್ ಬಜ್ ವರದಿಯ ಪ್ರಕಾರ ಉತ್ತರ ಭಾರತದ ಮತ್ತೊಂದು ಫ್ರಾಂಚೈಸಿ ಜೊತೆಗೆ ಆಂಡಿ ಫ್ಲವರ್ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾಬಹುದು ಎನ್ನಲಾಗಿದ್ದು ಟ್ರೆವರ್ ಬೆಲಿಸ್ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯನ್ನು ತೊರತೆಯಬೇಕಾಗಬಹುದು. ಇದು ನಿಜವಾದರೆ ಆರ್‌ಸಿಬಿ ಟ್ರೆವರ್ ಬೆಲಿಸ್ ಅವರನ್ನು ಕೂಡ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಸೇರ್ಪಡೆಗೊಳಿಸಬಹುದು. ಬೆಲಿಸ್ 2012 ಮತ್ತು 2014ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಆದಾಗ ಆ ತಮಡದ ಕೋಚ್ ಆಗಿದ್ದರು.

ಮತ್ತೊರ್ವ ಪ್ರಮುಖ ಹೆಸರು ಟಾಮ್ ಮೂಡಿ
2022ರ ಅಂತ್ಯದಲ್ಲಿ ಟಾಮ್ ಮೂಡಿ ಸನ್‌ರೈಸರ್ಸ್ ತಂಡದ ಕೋಚ್ ಸ್ಥಾನದಿಂದ ಹೊರಬಂದ ನಂತರ ಬ್ರಿಯಾನ್ ಲಾರಾ ಕೋಚ್ ಆಗಿ ಮುಂದುವರಿದಿದ್ದಾರೆ. 2016ರಲ್ಲಿ ಸನ್‌ರೈಸರ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿದಾಗ ತಂಡದ ಕೋಚ್ ಆಗಿದ್ದರು. ಬೆಂಗಳೂರು ಮೂಲದ ಫ್ರಾಂಚೈಸಿ ಟಾಮ್ ಮೂಡಿ ಅವರನ್ನು ಮುಂದಿನ ಕೋಚ್ ಆಗಿ ಸೇರ್ಪಡೆಗೊಳಿಸಿದರೆ ಕುತೂಹಲಕಾರಿಯಾಗಿರುವುದರಲ್ಲಿ ಅನುಮಾನವಿಲ್ಲ.

Story first published: Thursday, July 20, 2023, 16:49 [IST]
Other articles published on Jul 20, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+