Fap du Plessis: ಟಿ20 ಕ್ರಿಕೆಟ್‌ನಲ್ಲಿ ಆರ್‌ಸಿಬಿ ನಾಯಕ ಫಾಪ್ ಡು ಪ್ಲೆಸಿಸ್ ಅಪರೂಪದ ಸಾಧನೆ
ಶನಿವಾರ ಮೇ 4ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 52ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ (ಜಿಟಿ) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಭರ್ಜರಿ ಗೆಲುವು ಸಾಧಿಸಿತು.
ಈ ಪಂದ್ಯವನ್ನು ಗೆಲ್ಲುವ ಮೂಲಕ ಆರ್‌ಸಿಬಿ ತಂಡ ಹ್ಯಾಟ್ರಿಕ್ ಜಯ ಕಂಡಿದೆ. ಜೊತೆಗೆ ಪ್ಲೇ ಆಪ್ ರೇಸ್‌ನಲ್ಲಿ ಉಳಿದುಕೊಂಡಿದೆ. ಆದರೆ ಉಳಿದ ತಂಡಗಳ ಫಲಿತಾಂಶದ ಮೇಲೆ ಆರ್‌ಸಿಬಿ ಭವಿಷ್ಯ ನಿಂತಿದೆ.

ಗುಜರಾತ್ ಟೈಟನ್ಸ್ ವಿರುದ್ಧ ಪವರ್ ಪ್ಲೇನಲ್ಲಿ ಆರ್‌ಸಿಬಿ ತಂಡದ ನಾಯಕ ಫಾಪ್ ಡು ಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಈ ಮೂಲಕ ಆರ್‌ಸಿಬಿ ಗೆಲುವಿನ ಸನಿಹಕ್ಕೆ ಹೋಗಲು ಸಾಧ್ಯವಾಯಿತು. ಫಾಪ್ ಡು ಪ್ಲೆಸಿಸ್ ಎದುರಿಸಿ ಕೇವಲ 23 ಎಸೆತಗಳಲ್ಲಿ ಆರ್ಕಷಕ 10 ಬೌಂಡರಿ ಹಾಗು 3 ಸಿಕ್ಸರ್ ನೆರವಿನಿಂದ 64 ರನ್ ಬಾರಿಸಿದರು.
ಇಂತಹ ಅದ್ಭುತ ಇನ್ನಿಂಗ್ಸ್ ಆಡಿದ ಫಾಪ್ ಡು ಪ್ಲೆಸಿಸ್ ಟಿ20 ಕ್ರಿಕೆಟ್‌ನಲ್ಲಿ ಅಪರೂಪದ ಸಾಧನೆ ಮಾಡಿದರು. ಟಿ20 ಕ್ರಿಕೆಟ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಪೂರೈಸಿದ ವಿಶ್ವದ 14ನೇ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಫಾಪ್ ಡು ಪ್ಲೆಸಿಸ್ ಅವರು ಈ ಸಾಧನೆ ಮಾಡಿದರು.
ಟಿ20 ನಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಪೂರೈಸಿದ ಆಟಗಾರು :
ಆಗ್ರಸ್ಥಾನದಲ್ಲಿ ವೆಸ್ಟ್ ಇಂಡೀಸ್ ಮಾಜಿ ಆಟಗಾರ ಕ್ರಿಸ್ ಗೇಲ್ (14,562) ಇದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ (13,360), ಮತ್ತೋರ್ವ ವಿಂಡೀಸ್ ಸ್ಟಾರ್ ಆಲ್ ರೌಂಡರ್ ಕೀರನ್ ಪೋಲಾರ್ಡ್ (12,900), ಭಾರತದ ಸ್ಟಾರ್ ಬ್ಯಾಟರ್ ರನ್ ಮಷಿನ್ ಖ್ಯಾತಿ ವಿರಾಟ್ ಕೊಹ್ಲಿ (12,536), ಇಂಗ್ಲೆಂಡ್ ಆಟಗಾರ ಅಲೆಕ್ಸ್ ಹೇಲ್ಸ್ (12,319), ಆಸ್ಟ್ರೇಲಿಯಾ ಸ್ಪೋಟಲ ಆರಂಭಿಕ ಬ್ಯಾಟರ್ ಡೇವಿಟ್ ವಾರ್ನರ್ (12,232) ಮತ್ತು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (11,482), ನಂತರದ ಸ್ಥಾನದಲ್ಲಿದ್ದಾರೆ.

ಐಪಿಎಲ್‌ನಲ್ಲಿ ಫಾಪ್ ಡು ಪ್ಲೆಸಿಸ್ ಪ್ರದರ್ಶನ:
ಈವರೆಗೆ ಫಾಪ್ ಡು ಪ್ಲೆಸಿಸ್ 134 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. 36.46ರ ಸರಾಸರಿಯಲ್ಲಿ 136.53 ಸ್ಟ್ರೈಕ್ ರೇಟ್‌ನೊಂದಿಗೆ 4485 ರನ್‌ಗಳಿಸಿದ್ದಾರೆ. ಇದರಲ್ಲಿ 36 ಅರ್ಧಶತಕಗಳು ಕೂಡಿವೆ. ಆದರೆ ಫಾಪ್ ಡು ಪ್ಲೆಸಿಸ್ ಅವರ ಬ್ಯಾಟ್‌ನಿಂದ ಇಲ್ಲಿವರೆಗೆ ಐಪಿಎಲ್‌ನಲ್ಲಿ ಶತಕ ಮೂಡಿ ಬಂದಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications