ಐಪಿಎಲ್‌ನಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ 200 ಸಿಕ್ಸರ್ ದಾಖಲೆ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಐಪಿಎಲ್‌ನಲ್ಲಿ 200 ಸಿಕ್ಸರ್ ದಾಖಲೆ ಸರದಾರರ ಸಾಲಿನಲ್ಲಿ ಕಿಂಗ್ ಕೊಹ್ಲಿ ಕೂಡ ಸೇರಿಕೊಂಡಿದ್ದಾರೆ. ಐಪಿಎಲ್‌ನಲ್ಲಿ 200 ಸಿಕ್ಸರ್ ಬಾರಿಸಿದ ಐದನೇ ಬ್ಯಾಟ್ಸ್‌ಮನ್ ಆಗಿ ಕೊಹ್ಲಿ ಗುರುತಿಸಿಕೊಂಡಿದ್ದಾರೆ.
ಭಾನುವಾರ (ಅಕ್ಟೋಬರ್ 25) ನಡೆದ ಐಪಿಎಲ್ 44ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊಹ್ಲಿ ಈ ದಾಖಲೆ ಪೂರೈಸಿಕೊಂಡಿದ್ದಾರೆ. ಪಂದ್ಯದಲ್ಲಿ 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಕೊಹ್ಲಿ 43 ಎಸೆತಗಳಿಗೆ ಭರ್ತಿ 50 ರನ್ ರನ್ ಬಾರಿಸಿದರು.
ಸಿಎಸ್‌ಕೆ ವಿರುದ್ಧ ಕೊಹ್ಲಿ ಬಾರಿಸಿದ್ದು 39ನೇ ಅರ್ಧ ಶತಕ. ಪಂದ್ಯದಲ್ಲಿ 1 ಫೋರ್, 1 ಸಿಕ್ಸರ್ ಕೂಡ ಕೊಹ್ಲಿ ಬ್ಯಾಟಿಂದ ಸಿಡಿಯಿತು. ಈ ಸಿಕ್ಸ್ ಮೂಲಕ ಕೊಹ್ಲಿ 200 ಸಿಕ್ಸರ್ ಪೂರೈಸಿದರು. ಐಪಿಎಲ್‌ನಲ್ಲಿ 200 ಸಿಕ್ಸರ್ ಬಾರಿಸಿದವರಲ್ಲಿ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ (336), ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ (231), ಭಾರತದ ಎಂಎಸ್ ಧೋನಿ (216), ರೋಹಿತ್ ಶರ್ಮಾ (209) ಇದ್ದಾರೆ.
188 ಐಪಿಎಲ್ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 38.85ರ ಸರಾಸರಿಯಲ್ಲಿ 5827 ರನ್ ಬಾರಿಸಿದ್ದಾರೆ. ಇದರಲ್ಲಿ 5 ಶತಕಗಳೂ ಸೇರಿವೆ. 131.12 ಸ್ಟ್ರೈಕ್‌ರೇಟ್ ಗಳಿಸಿರುವ ಕೊಹ್ಲಿ 501 ಫೋರ್ಸ್, 200 ಸಿಕ್ಸರ್ ಬಾರಿಸಿದಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications