Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕನ್ನಡ ಕಲಿಯೋ ಒಲವು ತೋರಿದ ಆರ್‌ಸಿಬಿ ಕೋಚ್ ಮೈಕ್ ಹೆಸನ್

RCB Coach Mike Hesson Learning Hindi and Kannada Languages

ಬೆಂಗಳೂರು, ಮಾರ್ಚ್ 28: ಇಡೀ ಭಾರತವೇ ಕೊರೊನಾವೈರಸ್ ಹತ್ತಿಕ್ಕಲು ಲಾಕ್‌ ಡೌನ್ ಮೊರೆ ಹೋಗಿದ್ದರೆ, ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ಕೋಚ್ ಮೈಕ್ ಹೆಸನ್ ಮಾತ್ರ ಬ್ಯುಸಿಯಾಗಿದ್ದಾರೆ. ಬಿಡುವಿನ ವೇಳೆಯಲ್ಲಿ ಹೆಸನ್, ಕನ್ನಡ, ಹಿಂದಿ ಭಾಷೆಗಳನ್ನು ಕಲಿಯುವ ಪ್ರಯತ್ನಕ್ಕಿಳಿದಿದ್ದಾರೆ.

ವಿಶ್ವದಾದ್ಯಂತ ಆತಂಕಕಾರಿಯಾಗಿ ಹಬ್ಬುತ್ತಿರುವ ಕೊರೊನಾವೈರಸ್‌ನಿಂದಾಗಿ ಅಪಾರ ಸಂಖ್ಯೆಯಲ್ಲಿ ಜನ ಕೊನೆಯುಸಿರೆಳೆಯುತ್ತಿದ್ದಾರೆ. ಭಾರತದಲ್ಲೂ ಸುಮಾರು 933 ಮಂದಿಗೆ ಮಾರಕ ಸೋಂಕು ತಗುಲಿದ್ದು, 20 ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿನ ಹತೋಟಿಗಾಗಿ ಭಾರತದಾದ್ಯಂತ ಸುಮಾರು 21 ದಿನಗಳ ಲಾಕ್‌ಡೌನ್ ಜಾರಿಯಲ್ಲಿದೆ.

'ನಾನು ಒಂದಿಷ್ಟ ಭಾಷೆಗಳನ್ನು ಕಲಿಯಲು ಆರಂಭಿಸಿದ್ದೇನೆ. ಬದುಕಿನಲ್ಲಿ ನಾವು ಮುಳುಗಿ ಹೋದಷ್ಟೂ ಅವು ನಮ್ಮನ್ನು ಹಿಂದಕ್ಕೆ ಕೊಂಡೊಯ್ಯುತ್ತದೆ. ನನ್ನನ್ನು ನಾನು ಬದಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಮತ್ತು ಸ್ಥಳೀಯ ಒಂದೆರಡು ಭಾಷೆಗಳನ್ನು ಕಲಿಯಲು ಯತ್ನಿಸುತ್ತಿದ್ದೇನೆ,' ಎಂದು ಸ್ಫೋರ್ಟ್ಸ್ ಸ್ಟಾರ್‌ ಜೊತೆ ಮಾತನಾಡುತ್ತ ಹೆಸನ್ ಹೇಳಿದ್ದಾರೆ.

ನ್ಯೂಜಿಲೆಂಡ್ ಕ್ರಿಕೆಟ್‌ ತಂಡದ ಕೋಚ್‌ ಕೂಡ ಆಗಿರುವ ಮೈಕ್ ಹೆಸನ್ ಸದ್ಯ ಬೆಂಗಳೂರಿನಲ್ಲಿದ್ದಾರೆ. ಎರಡು ಹೊಸ ಭಾಷೆಗಳ ಮೇಲೆ ಹಿಡಿತ ಸಾಧಿಸಲು ಇದೇ ಅವಕಾಶ ಅಂತ ಅರಿತಿರುವ ಮೈಕ್, ಕಲಿಯುವುದಕ್ಕಾಗಿ ಕನ್ನಡ ಮತ್ತು ಹಿಂದಿ ಭಾಷೆಯನ್ನು ಆರಿಸಿಕೊಂಡಿದ್ದಾರೆ.

Story first published: Saturday, March 28, 2020, 16:25 [IST]
Other articles published on Mar 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+