Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ ಟ್ರೋಫಿ ಗೆಲ್ಲದೇ ಇದ್ರೂ, ಸಾಮಾಜಿಕ ತಾಣದಲ್ಲಿ RCB ಕಿಂಗ್‌; 20 ಮಿಲಿಯನ್‌ ದಾಟಿದ ಫಾಲೋವರ್ಸ್‌

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದರೆ, ಇತ್ತ ಸಾಮಾಜಿಕ ತಾಣದಲ್ಲಿ ಆರ್‌ಸಿಬಿ ಹವಾ ದಿನೇ ದಿನೇ ಜೋರಾಗಿದೆ. ಐಪಿಎಲ್‌ ಗೆಲುವಿನ ಸಂಖ್ಯೆಗಳು ಏರಿಕೆ ಆಗುತ್ತಾ ಇದ್ದಂತೆ, ಇತ್ತ ಸಾಮಾಜಿಕ ತಾಣದಲ್ಲಿ ಆರ್‌ಸಿಬಿ ಹಿಂಬಾಲಕರ ಸಂಖ್ಯೆಯಲ್ಲೂ ಸಹ ಭಾರೀ ಏರಿಕೆ ಆಗಿದೆ. ಈ ಮೂಲಕ ಆರ್‌ಸಿಬಿ ನವ ಇತಿಹಾಸವನ್ನು ಸೃಷ್ಟಿಸಿದೆ. ಈಗ ಎಲ್ಲಿ ನೋಡಿದ್ರೂ ಆರ್‌ಸಿಬಿ ಹವಾ ಜೋರಾಗಿದೆ.

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಅಲ್ಲದೆ ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿದೆ. ಈ ಪ್ರದರ್ಶನಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಈಗ ಸಾಮಾಜಿಕ ತಾಣದಲ್ಲಿ ಆರ್‌ಸಿಬಿ ಮತ್ತೊಂದು ಮೈಲುಗಲ್ಲು ತಲುಪಿದೆ ಈ ಮೂಲಕ ಈ ಹಿಂದೆ ಯಾವ ಐಪಿಎಲ್‌ ಫ್ರಾಂಚೈಸಿ ಮಾಡದ ಸಾಧನೆಯನ್ನು ಮಾಡಿ ಬೀಗಿದೆ. ಆರ್‌ಸಿಬಿ ಈ ಸಾಧನೆಯನ್ನು ಹಲವು ತಂಡಗಳು ಬೆನ್ನು ಬೀಳುವುದು ಗ್ಯಾರಂಟಿ. ಹಾಗಿದ್ರೆ ಆರ್‌ಸಿಬಿ ಮಾಡಿರುವ ಸಾಧನೆ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

RCB Creates History on Instagram with 20 Million Followers Amidst Stellar IPL 2025 Performance

ಆರ್‌ಸಿಬಿ ಲೀಗ್‌ ಹಂತದಲ್ಲಿ 13 ಪಂದ್ಯಗಳನ್ನು ಆಡಿದ್ದು 17 ಅಂಕವನ್ನು ಕಲೆ ಹಾಕಿದೆ. ಇನ್ನು ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ಲಕ್ನೋ ಸೂಪರ್‌ ಜೈಂಟ್ಸ್ ತಂಡವನ್ನು ಮೇ 27 ರಂದು ಎದುರಿಸಲಿದೆ. ಆರ್‌ಸಿಬಿ ಈ ಪಂದ್ಯವನ್ನು ಆಡಲು ಮೈದಾನಕ್ಕೆ ಇಳಿಯುವ ಮುನ್ನವೇ ದೊಡ್ಡ ಸುದ್ದಿಯೊಂದು ಬಂದಿದೆ. ಆರ್‌ಸಿಬಿ ಇನ್‌ಸ್ಟಾಗ್ರಾಮ್‌ ಖಾತೆಯನ್ನು ಹಿಂಬಾಲಿಸುವ ಅಭಿಮಾನಿಗಳ ಸಂಖ್ಯೆ 20 ಮಿಲಿಯನ್‌ ತಲುಪಿದೆ.

ಆರ್‌ಸಿಬಿ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. 20 ಮಿಲಿಯನ್‌ ಹಿಂಬಾಲಕರನ್ನು ಹೊಂದಿರುವ ಮೊದಲ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಆರ್‌ಸಿಬಿ ಪಾತ್ರವಾಗಿದೆ. ಆರ್‌ಸಿಬಿ ಇತ್ತಿಚಿಗಷ್ಟೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಹಿಂದಿಕ್ಕಿತ್ತು.

ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಹಿಂಬಾಲಕರು ಹೊಂದಿರುವ ತಂಡ

ಆರ್‌ಸಿಬಿ, 20 ಮಿಲಿಯನ್‌
ಸಿಎಸ್‌ಕೆ, 18.6 ಮಿಲಿಯನ್‌
ಮುಂಬೈ ಇಂಡಿಯನ್ಸ್‌, 18 ಮಿಲಿಯನ್‌
ಕೋಲ್ಕತ್ತಾ ನೈಟ್ ರೈಡರ್ಸ್‌, 7.5 ಮಿಲಿಯನ್‌
ಸನ್‌ರೈಸರ್ಸ್‌ ಹೈದರಾಬಾದ್‌, 5.4 ಮಿಲಿಯನ್‌

RCB Creates History on Instagram with 20 Million Followers Amidst Stellar IPL 2025 Performance

ಅಗ್ರ ಸ್ಥಾನದ ಮೇಲೆ ಕಣ್ಣು

17 ವರ್ಷಗಳಲ್ಲಿ ಬರೀ ಸತಾಯಿಸುತ್ತಾ ಬಂದಿರುವ ಐಪಿಎಲ್‌ ಟ್ರೋಫಿಯನ್ನು ಗೆಲ್ಲಲು ಆರ್‌ಸಿಬಿಗೆ ಈ ಬಾರಿ ದೊಡ್ಡ ಅವಕಾಶ ಸಿಕ್ಕಿದೆ. ಇದಕ್ಕೆ ತಕ್ಕಂತೆ ತಂಡ ಸಹ ಪ್ರದರ್ಶನ ನೀಡುತ್ತಿದೆ. ಆರ್‌ಸಿಬಿ ಸದ್ಯ ಅಗ್ರ ಎರಡು ಸ್ಥಾನದ ಮೇಲೆ ಕಣ್ಣು ನೆಟ್ಟಿದೆ. ಮಂಗಳವಾರ ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಜಯ ಸಾಧಿಸಿದರೆ ಪೂರ್ಣ 2 ಅಂಕವನ್ನು ಕಲೆ ಹಾಕಿ ಸುಲಭವಾಗಿ ಕ್ವಾಲಿಫೈಯರ್‌ಗೆ ಕ್ವಾಲಿಫೈ ಆಗಬಹುದು. ಹೀಗಾಗಿ ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಶತಾಯ ಗತಾಯ ಗೆಲುವು ಸಾಧಿಸಲು ಪ್ಲ್ಯಾನ್ ಮಾಡಿಕೊಂಡಿದೆ.

Story first published: Monday, May 26, 2025, 16:33 [IST]
Other articles published on May 26, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+