For Quick Alerts
ALLOW NOTIFICATIONS  
For Daily Alerts
 

ಎರಡನೇ ಬಾರಿ ಟ್ರೋಫಿ ಎತ್ತಿದ RCB ಫೈನಲ್‌ನಲ್ಲಿ ನಿರ್ಮಿಸಿದ ಟಾಪ್‌ 9 ದಾಖಲೆ

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ವಡೋದರಾದಲ್ಲಿ ಇತಿಹಾಸ ಸೃಷ್ಟಿಸಿದೆ. ಗುರುವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಅಮೋಘ ಪ್ರದರ್ಶನ ನೀಡಿ 6 ವಿಕೆಟ್‌ ಜಯ ಸಾಧಿಸಿದೆ. ರೋಚಕತೆಯಿಂದ ಕೂಡಿದ್ದ ಫೈನಲ್‌ ಪಂದ್ಯದಲ್ಲಿ ಹಲವು ಮಹತ್ವದ ದಾಖಲೆಗಳು ನಿರ್ಮಾಣವಾಗಿವೆ. ಆ ದಾಖಲೆಗಳ ಪಟ್ಟಿ ಇಲ್ಲಿದೆ.

ಆರ್‌ಸಿಬಿ ಫೈನಲ್‌ನಲ್ಲಿ ಟಾಸ್‌ ಗೆಲ್ಲುತ್ತಿದ್ದಂತೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 203 ರನ್‌ ಸೇರಿಸಿತು. ಈ ವೇಳೆ ನಾಯಕಿ ಜೆಮಿಮಾ ರೊಡ್ರಿಗಸ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಆರಂಭ ಕಳಪೆಯಾಗಿತ್ತು. ಸ್ಫೋಟಕ ಆಟಗಾರ್ತಿ ಗ್ರೇಸ್‌ ಹ್ಯಾರಿಸ್ ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ಎಡವಿದರು. ಆದರೆ ಒತ್ತಡವನ್ನು ಕೊಂಚವೂ ಮೈ ಮೇಲೆ ಎಳೆದುಕೊಳ್ಳದೇ ಬ್ಯಾಟ್ ಮಾಡಿದ ಸ್ಮೃತಿ ಹಾಗೂ ಜಾರ್ಜಿಯಾ ಪಂದ್ಯವನ್ನು ಆರ್‌ಸಿಬಿ ಪರ ವಾಲಿಸಿದರು.

RCB Creates History

ಫೈನಲ್ ಪಂದ್ಯದ ಮಹತ್ವ ಅರಿತು ಬ್ಯಾಟ್ ಮಾಡಿದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಹಾಗೂ ಜಾರ್ಜಿಯಾ ವೋಲ್‌ ಜೋಡಿ ಅಬ್ಬರಿಸಿತು. ಈ ಜೋಡಿ ಎರಡನೇ ವಿಕೆಟ್‌ಗೆ 150ಕ್ಕೂ ಹೆಚ್ಚು ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಪರಿಣಾಮ ಕಠಿಣ ಸವಾಲನ್ನು ಸುಲಭವಾಗಿ ಚೇಸ್‌ ಮಾಡಲು ನೆರವಾಯಿತು. ಈ ಪಂದ್ಯದಲ್ಲಿ ಆರ್‌ಸಿಬಿ 19.4 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 204 ರನ್‌ ಸೇರಿಸಿ ಅಬ್ಬರಿಸಿತು. ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಹಲವು ದಾಖಲೆಗಳನ್ನು ಬರೆಯಿತು. ಈ ಬಗ್ಗೆ ವಿವರ ಇಲ್ಲಿದೆ.

ಆರ್‌ಸಿಬಿ ಬರೆದ ದಾಖಲೆಗಳು

ಸ್ಮೃತಿ ಮಂಧಾನ ಹಾಗೂ ಜಾರ್ಜಿಯಾ ವೋಲ್‌ ಜೋಡಿ ಎರಡನೇ ವಿಕೆಟ್‌ಗೆ 165 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ಮೂಲಕ ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಜೊತೆಯಾಟದ ದಾಖಲೆಯನ್ನು ಬರೆಯಿತು.

ಸ್ಮೃತಿ ಹಾಗೂ ಜಾರ್ಜಿಯಾ ಜೋಡಿ ಎರಡನೇ ಬಾರಿಗೆ ಅತ್ಯುತ್ತಮ ಜೊತೆಯಾಟದ ಕಾಣಿಕೆ ನೀಡಿತು. ಇದಕ್ಕೂ ಮೊದಲು ಇದೇ ಆವೃತ್ತಿಯಲ್ಲಿ 142 ರನ್‌ ಸೇರಿಸಿ ಅಬ್ಬರಿಸಿತ್ತು.

ಡಬ್ಲ್ಯೂಪಿಎಲ್‌ ಫೈನಲ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್‌ಗಳ ದಾಖಲೆಯನ್ನು ಬರೆದ ಹೆಗ್ಗಳಿಕೆ ಸ್ಮೃತಿ ಮಂಧಾನ ಪಾಲಾಯಿತು. ಇವರು ಡೆಲ್ಲಿ ವಿರುದ್ಧ 87 ರನ್‌ಗಳ ಇನಿಂಗ್ಸ್‌ ಕಟ್ಟಿದ್ದರು.

RCB Creates History

ಇದೇ ಪಂದ್ಯದಲ್ಲಿ ಆರ್‍ಸಿಬಿ ಪರ ಮೂರನೇ ಕ್ರಮಾಂಕದಲ್ಲಿ ಆಡಿ ಜಾರ್ಜಿಯಾ ವೋಲ್ 79 ರನ್‌ ಬಾರಿಸಿದರು. ಈ ಮೂಲಕ ಫೈನಲ್‌ನಲ್ಲಿ ಎರಡನೇ ಗರಿಷ್ಠ ಮೊತ್ತ ಕಲೆ ಹಾಕಿದ ಬ್ಯಾಟರ್ ಆದರು.

ಶತಕದ ಜೊತೆಯಾಟ

ಸ್ಮೃತಿ ಮಂಧಾನ ಅವರು ಡಬ್ಲ್ಯೂಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟವನ್ನು ನೀಡಿದ ಆಟಗಾರ್ತಿ ಆಗಿದ್ದಾರೆ. ಈ ಲೀಗ್‌ನಲ್ಲಿ ಇವರು 6 ಬಾರಿ ಈ ಸಾಧನೆ ಮಾಡಿದ್ದಾರೆ.

ಲಿಗ್‌ನಲ್ಲಿ ಆರ್‌ಸಿಬಿ ತಂಡ ಎರಡು ಬಾರಿ 200ಕ್ಕೂ ಹೆಚ್ಚು ರನ್‌ ಚೇಸ್‌ ಮಾಡಿದ ದಾಖಲೆಯನ್ನು ಎರಡು ಬಾರಿ ಮಾಡಿದೆ.

ಇದಕ್ಕೂ ಮೊದಲು ಡಬ್ಲ್ಯೂಪಿಎಲ್‌ ಫೈನಲ್‌ ಇತಿಹಾಸದಲ್ಲಿ 175 ರನ್‌ ಬೆನ್ನಟ್ಟಿದ್ದು ದೊಡ್ಡ ಮೊತ್ತವಾಗಿತ್ತು.

ನಾಡಿನ್‌ ಡಿ ಕ್ಲಾರ್ಕ್‌ ಡಬ್ಲ್ಯೂಪಿಎಲ್‌ ಇತಿಹಾಸದಲ್ಲಿ ಮೊದಲ ಓವರ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ದಾಖಲೆ ಬರೆದರು. ಇವರು ಒಟ್ಟು 7 ಬಾರಿ ಈ ಸಾಧನೆ ಮಾಡಿದ್ದಾರೆ.

ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆ ಆರ್‌ಸಿಬಿ ತಂಡದ ಪಾಲಾಯಿತು.

Story first published: Friday, February 6, 2026, 11:25 [IST]
Other articles published on Feb 6, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+