ಸತತ ಮೂರನೇ ಟ್ರೋಫಿ ಗೆದ್ದ RCB: ರಾತ್ರಿಯಿಡೀ ಸಂಭ್ರಮಾಚರಣೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಎರಡನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ ಇತಿಹಾಸ ನಿರ್ಮಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡದ ದಾಖಲೆಯನ್ನು ಸರಿಗಟ್ಟಿದೆ. ಅಲ್ಲದೆ ಸತತ ಮೂರನೇ ವರ್ಷ ಟ್ರೋಫಿ ಎತ್ತಿದ ಫ್ರಾಂಚೈಸಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದೆ.
ಆರ್‌ಸಿಬಿ ಕಪ್ ಗೆಲುವಿನ ಅಭಿಯಾನವನ್ನು 2024ರಲ್ಲಿ ಆರಂಭಿಸಿತು. ಆಗಲೂ ಆರ್‌ಸಿಬಿ ಮಹಿಳಾ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ 17 ವರ್ಷಗಳ ಪ್ರಶಸ್ತಿ ಗೆಲುವಿನ ಬರಕ್ಕೆ ಬ್ರೇಕ್ ಹಾಕಿತ್ತು. ಅದಾದ ಬಳಿಕ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷರ ತಂಡ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿ ಇತಿಹಾಸ ನಿರ್ಮಿಸಿತ್ತು. ಈಗ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಅಮೋಘ ಪ್ರದರ್ಶನವನ್ನು ನೀಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಮೂಲಕ ಸತತ ಮೂರು ವರ್ಷವೂ ಪ್ರಶಸ್ತಿ ಗೆದ್ದ ಫ್ರಾಂಚೈಸಿ ಎಂಬ ಹಿರಿಮೆ ಆರ್‌ಸಿಬಿ ತಂಡದ್ದಾಗಿದೆ.

ಆರ್‌ಸಿಬಿ ತಂಡದ ಭರವಸೆಯ ಆಟಗಾರ್ತಿ ರಾಧಾ ಯಾದವ್ ಕೊನೆಯ ಓವರ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಬೌಂಡರಿ ಬಾರಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಆರ್‌ಸಿಬಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಇನ್ನು ಆಟಗಾರ್ತಿಯರು ಸಹ ಸ್ಮರಣೀಯ ಕ್ಷಣವನ್ನು ತಮ್ಮ ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದರು. ಈ ಮೂಲಕ ಆರ್‌ಸಿಬಿ ಡಬಲ್ ಕಪ್ ಸಂಭ್ರಮದ ಜೋಶ್ ಗುರುವಾರ ರಾತ್ರಿ ವಡೋದರಾದಲ್ಲಿ ಮನೆ ಮಾಡಿತ್ತು.
ಆರ್‌ಸಿಬಿ ಮೈದಾನದಿಂದ ಹೋಟೆಲ್‌ಗೆ ಬರುತ್ತಿದ್ದಂತೆ ಚಾಂಪಿಯನ್ ಆಟಗಾರ್ತಿಯರನ್ನು ಡೋಲ್ ಮೂಲಕ ಸ್ವಾಗತಿಸಲಾಯಿತು. ಈ ವೇಳೆ ಆಟಗಾರ್ತಿಯರು ಸಹ ಸ್ಟೆಪ್ಸ್ ಹಾಕಿ ಖುಷಿ ಪಟ್ಟರು. ಇದೇ ವೇಳೆ ಆಟಗಾರ್ತಿಯರು ನೆಚ್ಚಿನ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಟ್ರೋಫಿ ಎತ್ತಿ ಸಂಭ್ರಮಿಸಿದರು.
ಅಭಿಮಾನಿಗಳಿಗೆ ಅರ್ಪಣೆ
ಪ್ರಶಸ್ತಿ ಜಯಿಸಿದ ಬಳಿಕ ಮಾತನಾಡಿದ ಸ್ಮೃತಿ ಮಂಧಾನ,ಈ ಗೆಲುವು ಖುಷಿ ನೀಡಿದೆ. ಆರ್‌ಸಿಬಿ ಅಭಿಮಾನಿಗಳು ವಿಶ್ವದ ಅತ್ಯುತ್ತಮ ಅಭಿಮಾನಿಗಳು ಎಂದು ನನಗೆ ಅನ್ನಿಸುತ್ತದೆ. ವಿಶ್ವದ ಯಾವುದೇ ಕ್ರೀಡಾಂಗಣಗದಲ್ಲಿ ಆಡಿದರೂ ನಮಗೆ ಅಷ್ಟೇ ಬೆಂಬಲವನ್ನು ನೀಡುತ್ತಾರೆ. ನಾವು ಮೈದಾನದಲ್ಲಿ ಏನೇ ಸಾಧನೆ ಮಾಡಿದರೂ ಅದು ಆರ್‌ಸಿಬಿ ಅಭಿಮಾನಿಗಳಿಗೆ ಅರ್ಪಣೆ. ಫ್ರಾಂಚೈಸಿಗೆ ಮೂರು ವರ್ಷಗಳಲ್ಲಿ ಮೂರು ಪ್ರಶಸ್ತಿಗಳು ಸಿಕ್ಕಿರುವುದು ಅದ್ಭುತವಾಗಿದೆ. ಬ್ಯಾಟಿಂಗ್‌ಗೆ ಉತ್ತಮವಾಗಿದ್ದ ಪಿಚ್‌ನಲ್ಲಿ ಜಾರ್ಜಿಯಾ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಪವರ್ ಪ್ಲೇನ ಬಹುಪಾಲು ತಾವೇ ಸ್ಟ್ರೈಕ್ ನಲ್ಲಿದ್ದರು. ಇವರ ರನ್ ವೇಗಕ್ಕೆ ಚುರುಕು ಮುಟ್ಟಿಸುವ ಆಸೆ ಸಾಕಾರಗೊಳಿಸಿದರು. ಫೈನಲ್ ಪಂದ್ಯದಲ್ಲಿ ಜಾರ್ಜಿಯಾ ಬಿಗ್ ಇನಿಂಗ್ಸ್ ಕಟ್ಟಿ ತಾವೊಬ್ಬ ಬಿಗ್ ಮ್ಯಾಚ್ ಪ್ಲೇಯರ್ ಎಂಬುದನ್ನು ಸಾಬೀತು ಪಡಿಸಿದರು. ಕಳೆದ ಕೆಲವು ದಿನಗಳಿಂದ ಅವರ ಸಾಕಷ್ಟು ಬ್ಯಾಟಿಂಗ್ ಅಭ್ಯಾಸವನ್ನು ನಡೆಸಿದ್ದರಿಂದ ಆರ್‌ಸಿಬಿ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಯಿತು ಎಂದು ಸ್ಮೃತಿ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications