RCB ದಾಖಲೆಯ ಗೆಲುವಿನಲ್ಲಿ ಮಿಂಚಿದ ಫಿಲ್ ಸಾಲ್ಟ್ ಹಿಡಿದ ಸೂಪರ್ ಕ್ಯಾಚ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತನ್ನ ಟ್ರೋಫಿ ಉಳಿಸಿಕೊಳ್ಳುವ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ 202 ರನ್‌ಗಳ ಗುರಿಯನ್ನು ಆರ್‌ಸಿಬಿ ಕೇವಲ 15.4 ಓವರ್‌ಗಳಲ್ಲಿ ಮುಟ್ಟಿ ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದೆ. 200ಕ್ಕೂ ಹೆಚ್ಚು ರನ್‌ಗಳನ್ನು ವೇಗವಾಗಿ ಮುಟ್ಟಿದ ಹೆಗ್ಗಳಿಕೆ ಈಗ ಆರ್‌ಸಿಬಿ ತಂಡದ್ದಾಗಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಆರ್‌ಸಿಬಿ ಭರ್ಜರಿ ಪ್ರದರ್ಶನ ನೀಡಿತು. ಈ ವೇಳೆ ವೇಗದ ಬೌಲರ್ ಜೇಕಬ್ ಡಫಿ ಬಿಗುವಿನ ದಾಳಿ ನಡೆಸಿ ಮಿಂಚಿದರು. ಇವರಿಗೆ ರೊಮಾರಿಯೋ ಶೆಫರ್ಡ್ ಉತ್ತಮ ಸಾಥ್ ನೀಡಿದರು. ಆರ್‌ಸಿಬಿ ತಂಡದ ಕ್ಯಾಚಿಂಗ್ ಸಹ ಉತ್ತಮವಾಗಿತ್ತು.

ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಫೀಲ್ಡರ್ ಫಿಲ್ ಸಾಲ್ಟ್ ಮೂರು ಕ್ಯಾಚ್ ಪಡೆದರು. ಮೂರು ಕ್ಯಾಚ್‌ಗಳು ಅಮೋಘವಾಗಿದ್ದವು. ಅದರಲ್ಲೂ ಹೆನ್ರಿಕ್ ಕ್ಲಾಸೇನ್ ಅವರ ಕ್ಯಾಚ್‌ನ್ನು ಬೌಂಡರಿ ಗೆರೆಯ ಬಳಿ ಹಿಡಿದು ಮಿಂಚಿದರು. ಅಭಿಮಾನಿಗಳು ಇದೇ ಬೆಸ್ಟ್ ಕ್ಯಾಚ್ ಎಂದು ಅಂದುಕೊಳ್ಳುತ್ತಿರುವಾಗಲೇ ಸಾಲ್ಟ್ ಮತ್ತೊಂದು ಕ್ಯಾಚ್ ಪಡೆದರು. ಇದು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿತು.
ಸೂಪರ್ ಮ್ಯಾನ್ ಕ್ಯಾಚ್
ಒಂದು ಹಂತದಲ್ಲಿ ಸನ್‌ರೈಸರ್ಸ್ ತಂಡ 29 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ನಾಯಕ ಇಶಾನ್ ಕಿಶನ್ ಹಾಗೂ ಭರವಸೆಯ ಆಟಗಾರ ಹೆನ್ರಿಕ್ ಕ್ಲಾಸೇನ್ ಜೋಡಿ ಭರ್ಜರಿ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಕ್ಲಾಸೇನ್ ಔಟ್ ಆದ ಬಳಿಕವೂ ಇಶಾನ್ ತಮ್ಮ ಬಿರುಸಿನ ಆಟ ಮುಂದುವರಿಸಿದರು. ಇವರ ವಿಕೆಟ್ ಪಡೆಯುವುದು ಆರ್‌ಸಿಬಿಗೆ ಸವಾಲಾಗಿತ್ತು. ಇಶಾನ್ ಕಿಶನ್ ಕ್ರಮೇಣವಾಗಿ ತಮ್ಮ ಶತಕದತ್ತ ಮುನ್ನುಗುತ್ತಿದ್ದರು.
ಇನಿಂಗ್ಸ್‌ನ 16ನೇ ಓವರ್ ಬೌಲ್ ಮಾಡಲು ಅಭಿನಂದನ್ ಸಿಂಗ್ ಮುಂದಾದರು. ಇವರ ಈ ಓವರ್‌ನ ಕೊನೆಯ ಎಸೆತದಲ್ಲಿ ಇಶಾನ್ ಕಿಶನ್ ಪಾಯಿಂಟ್ ಮೇಲಿನಿಂದ ಬೌಂಡರಿ ಬಾರಿಸಲು ಮುಂದಾದರು. ಆದರೆ ಅಲ್ಲಿಯೇ ಫೀಲ್ಡಿಂಗ್ ಮಾಡುತ್ತಿದ್ದ ಫಿಲ್ ಸಾಲ್ಟ್ ತಮ್ಮ ಬಲಕ್ಕೆ ವೇಗವಾಗಿ ಓಡಿ, ಗಾಳಿಯಲ್ಲಿ ಜಿಗಿದು, ಬೌಂಡರಿ ಗೆರೆಯ ಒಳಗೆ ಕ್ಯಾಚ್ ಹಿಡಿದರು. ಈ ಕ್ಯಾಚ್ ನೋಡಿದ ಆರ್‌ಸಿಬಿ ಅಭಿಮಾನಿಗಳು ಫುಲ್ ಖುಷ್. ಈ ಕ್ಯಾಚ್ ನೋಡಿದ ಇಶಾನ್ ಕಿಶನ್ ಸಹ ನಿರಾಸೆಗೊಂಡರು. ಇಶಾನ್ ಕಿಶನ್ 38 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್ ಸಹಾಯದಿಂದ 80 ರನ್ ಸಿಡಿಸಿ ಔಟ್ ಆದರು.
ಪಂದ್ಯದ ಫಲಿತಾಂಶ
ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 201 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆರ್‌ಸಿಬಿ 15.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 203 ರನ್ ಕಲೆ ಹಾಕಿ ಭರ್ಜರಿ ಜಯ ದಾಖಲಿಸಿತು. ಆರ್‌ಸಿಬಿ ಪರ ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications