For Quick Alerts
ALLOW NOTIFICATIONS  
For Daily Alerts
 

Mohammed Siraj: ಮೊಹಮ್ಮದ್ ಸಿರಾಜ್‌ಗೆ ಆರ್‌ಟಿಎಂ ಬಳಸದಿರುವುದಕ್ಕೆ ಕಾರಣ ತಿಳಿಸಿದ RCB ನಿರ್ದೇಶಕ

ಇತ್ತೀಚಿಗೆ ಸೌದಿಯಲ್ಲಿ ಎರಡು ದಿನಗಳ ಕಾಲ ಐಪಿಎಲ್ ಮೆಗಾ ಹರಾಜು ನಡೆಯಿತು. ಈ ವೇಳೆ ಆರ್‌ಸಿಬಿ 83 ಕೋಟಿ ರೂಪಾಯಿಗಳೊಂದಿಗೆ ಬಿಡ್ಡಿಂಗ್ ಅಖಾಡಕ್ಕೆ ಇಳಿಯಿತು. ಹಲವು ಸ್ಟಾರ್ ಆಟಗಾರರನ್ನು ಆರ್‌ಸಿಬಿ ತಂಡಕ್ಕೆ ಬರಮಾಡಿಕೊಂಡಿತು. ಆದರೆ ಮಾಜಿ ಆಟಗಾರರಿಗೆ ರೆಡ್ ಕಾರ್ಪೆಟ್‌ ಹಾಕುವಲ್ಲಿ ಹಿಂದೆ ಬಿದ್ದಿತು. ಆರ್‌ಸಿಬಿ ತಂಡದ ಹಲವು ಸ್ಟಾರ್ ಆಟಗಾರರನ್ನು ಬಿಟ್ಟು ಕೈ ಸುಟ್ಟುಕೊಂಡಿತು. ಈ ಪಟ್ಟಿಯಲ್ಲಿ ಭಾರತದ ಮೊಹಮ್ಮದ್‌ ಸಿರಜಾಗೂ ಸ್ಥಾನವಿದೆ.

ಆರ್‌ಸಿಬಿ ಈ ಬಾರಿಯ ಹರಾಜಿನಲ್ಲಿ ಸಿರಾಜ್‌ ಅವರಿಗೆ ಆರ್‌ಟಿಎಂ ಬಳಸುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆರ್‌ಸಿಬಿ ಹೀಗೆ ಮಾಡದೇ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿತ್ತು. ಸ್ಟಾರ್ ಆಟಗಾರರನ್ನು ಬಿಟ್ಟು ಕೊಟ್ಟಿದ್ದು ಏಕೆ ಎಂಬ ಪ್ರಶ್ನೆಗಳನ್ನು ಅಭಿಮಾನಿಗಳು ಪದೇ ಪದೇ ಕೇಳುತ್ತಲೇ ಇದ್ದರು. ಆದರೆ ಫ್ಯಾನ್ಸ್ ಪ್ರಶ್ನೆಗೆ ಕೊನೆಗೂ ಉತ್ತರ ಲಭಿಸಿದೆ. ಸ್ಟಾರ್ ಆಟಗಾರ ಸಿರಾಜ್‌ಗೆ ಆರ್‌ಟಿಎಂ ಬಳಸದೇ ಇರುವ ಕಾರಣವನ್ನು ಆರ್‌ಸಿಬಿ ನಿರ್ದೇಶಕ ಮೊ ಬೊಬಾಟ್ ರಿವೀಲ್‌ ಮಾಡಿದ್ದಾರೆ.

RCB Director Reveals Why RTM Wasn t Used for Mohammed Siraj

ಮೊಹಮ್ಮದ್‌ ಸಿರಾಜ್ ಕಳೆದ ಕೆಲವು ವರ್ಷಗಳಲ್ಲಿ ಆರ್‌ಸಿಬಿ ತಂಡದ ಪರ ಅಮೋಘ ಪ್ರದರ್ಶನ ನೀಡಿದ್ದಾರೆ. ಅವರು ತಂಡದ ಚಾಂಪಿಯನ್ ಆಟಗಾರ. ಅವರನ್ನು ರಿಟೇನ್‌ ಮಾಡದೇ ಇರುವುದು ನಮ್ಮ ತಂಡದ ಹಲವು ಕಠಿಣ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ಆರ್‌ಸಿಬಿ ನಿರ್ದೇಶಕ ಮೊ ಬೊಬಾಟ್ ತಿಳಿಸಿದ್ದಾರೆ.

ಆರ್‌ಟಿಎಂ ಬಳಸದೇ ಇರಲು ಕಾರಣ ಏನು?

ಭುವನೇಶ್ವರ್‌ ಕುಮಾರ್‌ ನಮ್ಮ ಲೀಸ್ಟ್‌ನಲ್ಲಿದ್ದ ಮೊದಲ ಆಯ್ಕೆಯ ಆಟಗಾರ. ಅವರನ್ನು ಕೊಳ್ಳಲು ನಾವು ಪ್ರಯತ್ನಿಸಬೇಕಿತ್ತು. ಹರಾಜಿನಲ್ಲಿ ಭುವನೇಶ್ವರ್‌ ಹೆಸರು ತಡವಾಗಿ ಬಂದಿತು. ನಾವು ನಮಗೆ ಬೇಕಿದ್ದ ಆಟಗಾರನಿಗೆ ಕಾಲಯಲೇ ಬೇಕಾದ ಅನಿವಾರ್ಯತೆ ಇತ್ತು.

ಒಮ್ಮೊಮ್ಮೆ ನೀವು ಸ್ಟಾರ್ ಆಟಗಾರನಿಗೆ ಕಾಯುತ್ತೀರಾ, ಇನ್ನು ಕೆಲವೊಮ್ಮೆ ಕಾಯುವುದಿಲ್ಲ. ದುರ್ಭಾಗ್ಯದಿಂದ ಹರಾಜಿನಲ್ಲಿ ಭುವಿ ಹೆಸರು ತಡವಾಗಿ ಬಂದಿತು. ಹೀಗಾಗಿ ನಾವು ಸಿರಾಜ್‌ರನ್ನು ಖರೀದಿಸಲು ಆಗಲಿಲ್ಲ. ಬರೀ ಸಿರಾಜ್‌ ಅಷ್ಟೇ ಅಲ್ಲ, ಹಲವು ಸ್ಟಾರ್ ಆಟಗಾರರನ್ನು ಖರೀದಿಸುವಲ್ಲಿ ವಿಫಲವಾಗಿದ್ದಕ್ಕೆ ಇಂತಹದೇ ಕಾರಣಗಳಿವೆ ಎಂದು ಆರ್‌ಸಿಬಿ ನಿರ್ದೇಶಕರು ತಿಳಿಸಿದ್ದಾರೆ.

RCB Director Reveals Why RTM Wasn t Used for Mohammed Siraj

ನಿಜಕ್ಕೂ ಹೇಳಬೇಕೆಂದರೆ ನಾನು ವಿಲ್‌ ಜಾಕ್ಸ್ ಅಭಿಮಾನಿ. ಅವರು ಕಳೆದ ವರ್ಷ ತಂಡಕ್ಕೆ ಸೇರಿ ಅಮೋಘ ಬ್ಯಾಟಿಂಗ್ ನಡೆಸಿದ್ದರು. ಇವರಿಗೆ ಆರ್‌ಟಿಎಂ ಬಳಸುವುದು ನಮ್ಮ ಆದ್ಯತೆ ಆಗಿತ್ತು. ಆದರೆ ವಿಲ್‌ ಜಾಕ್ಸ್ ಫಾಫ್‌ ಡುಪ್ಲೇಸಿಸ್‌ ಅವರನ್ನು ಕೊಳ್ಳದೇ ಇರುವುದುಕ್ಕೂ ಕಾರಣವಿದೆ ಎಂದು ತಿಳಿಸಿದ್ದಾರೆ.

ಸಿರಾಜ್‌ಗೆ ಗುಜರಾತ್‌ ಪಾಲು

ಹರಾಜಿನಲ್ಲಿ ಮೊಹಮ್ಮದ್‌ ಸಿರಾಜ್‌ ಅವರ ಮೂಲ ಬೆಲೆ 2 ಕೋಟಿ ರೂಪಾಯಿ ಆಗಿತ್ತು. ನೋಡು ನೋಡುತ್ತಿದ್ದಂತೆ ಇವರ ಬೆಲೆ ಆಗಸದೆತ್ತರಕ್ಕೆ ಸಾಗುತ್ತಲೇ ಹೋಯಿತು. ಸಿರಾಜ್‌ ಕೊನೆಗೆ 12.25 ಕೋಟಿ ರೂಪಾಯಿಗೆ ಗುಜರಾತ್ ಟೈಟಾನ್ಸ್ ಪಾಲಾದರು. ಇವರು ಐಪಿಎಲ್‌ನಲ್ಲಿ 93 ಪಂದ್ಯಗಳನ್ನು ಆಡಿದ್ದು 109 ವಿಕೆಟ್‌ ಕಬಳಿಸಿ ಅಬ್ಬರಿಸಿದ್ದಾರೆ.

Story first published: Friday, December 20, 2024, 9:15 [IST]
Other articles published on Dec 20, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+