RCB vs PBKS: ಪವರ್ ಫುಲ್ ಆರಂಭ ಮಾಡಿದ ಆರ್‌ಸಿಬಿ: 101 ರನ್‌ಗೆ ಕಿಂಗ್ಸ್ ಆಲೌಟ್
ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ವಿರುದ್ಧದ ಮುಲ್ಲಾನಪುರ್‌ದಲ್ಲಿ ಮೊದಲನೇ ಕ್ವಾಲಿಫೈಯರ್ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಮೊದಲು ಫೀಲ್ಡಿಂಗ್ ಮಾಡಲು ಮುಂದಾಯಿತು. ಈ ವೇಳೆ ಆರ್‌ಸಿಬಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಆರ್‌ಸಿಬಿ ತಂಡದ ಭರವಸೆಯ ಬೌಲರ್ ಜೋಶ್ ಹ್ಯಾಜಲ್‌ವುಡ್ ತಂಡಕ್ಕೆ ಸೇರಿಕೊಂಡಿದ್ದಾರೆ.
ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರ ತೀರ್ಮಾನವನ್ನು ಸಮರ್ಥಿಸಿಕೊಳ್ಳುವಲ್ಲಿ ಬೌಲರ್‌ಗಳು ಸಫಲರಾದರು. ಸ್ಟಾರ್ ಆರಂಭಿಕ ಆಟಗಾರರು ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಪಂಜಾಬ್ ತಂಡದ ಆರಂಭಿಕರಾದ ಪ್ರಿಯಾಂಶ್ ಆರ್ಯ (7) ಹಾಗೂ ಪ್ರಭಾಸಿಮ್ರಾನ್ ಸಿಂಗ್ (18) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ನಾಯಕ ಶ್ರೇಯಸ್ ಅಯ್ಯರ್ (2) ಅವರಿಗೆ ಭರವಸೆಯ ಬೌಲರ್ ಜೋಶ್ ಹ್ಯಾಜಲ್‌ವುಡ್ ಖೆಡ್ಡಾ ತೋಡುವಲ್ಲಿ ಸಫಲರಾದರು.

ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಜೋಶ್ ಇಂಗ್ಲಿಷ್ (4) ಸಿಂಗಲ್ ಡಿಜಿಟ್‌ನಲ್ಲಿ ಕೆಲಸ ಮುಗಿಸಿದರು. ಪಂಜಾಬ್ ಕಿಂಗ್ಸ್ ತಂಡ ರಿಟೇನ್ ಮಾಡಿಕೊಂಡಿದ್ದ ಆಟಗಾರ ಶಶಾಂಕ್ ಸಿಂಗ್ (3) ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಆರ್‌ಸಿಬಿ ವಿರುದ್ಧದ ಬೆಂಗಳೂರಿನಲ್ಲಿ ಅಬ್ಬರಿಸಿದ್ದ ನೆಹಾಲ್ ವಧೆರಾ (8) ಮಕಾಡೆ ಮಲಗಿದರು.
ಪಂಜಾಬ್ ತಂಡದ ಪರ ಮಾರ್ಕಸ್ ಸ್ಟೋಯ್ನಿಸ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುವ ಸೂಚನೆ ನೀಡಿದರು. ಮಾರ್ಕಸ್ ಸ್ಟೋಯ್ನಿಸ್ 17 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 26 ರನ್ ಸಿಡಿಸಿ ಔಟ್ ಆದರು.
ಸಿಂಗಲ್ ಡಿಜಿಟ್‌ನಲ್ಲಿ ಖೇಲ್ ಖತಮ್..
ಪಂಜಾಬ್ ತಂಡದ ಮೂವರು ಬ್ಯಾಟರ್‌ಗಳು ಮಾತ್ರ ಡಬಲ್ ಡಿಜಿಟ್ ಮುಟ್ಟಿದ್ರು. ಪ್ರಭಾಸಿಮ್ರಾನ್ ಸಿಂಗ್, ಮಾರ್ಕಸ್ ಸ್ಟೋಯ್ನಿಸ್, ಅಜ್ಮತುಲ್ಲಾ ಒಮರಝಾಯಿ ಮಾತ್ರ ಎರಡಂಕಿ ಮುಟ್ಟಿದರು. ಉಳಿದ ಬ್ಯಾಟರ್‌ಗಳು ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು. ಅಜ್ಮತುಲ್ಲಾ 18 ರನ್‌ಗಳಿಗೆ ಆಟ ಮುಗಿಸಿದರು.
ಪಂಜಾಬ್ ತಂಡದ ಮೂವರು ಬ್ಯಾಟರ್‌ಗಳು ಮಾತ್ರ ಡಬಲ್ ಡಿಜಿಟ್ ಮುಟ್ಟಿದ್ರು. ಪ್ರಭಾಸಿಮ್ರಾನ್ ಸಿಂಗ್, ಮಾರ್ಕಸ್ ಸ್ಟೋಯ್ನಿಸ್, ಅಜ್ಮತುಲ್ಲಾ ಒಮರಝಾಯಿ ಮಾತ್ರ ಎರಡಂಕಿ ಮುಟ್ಟಿದರು. ಉಳಿದ ಬ್ಯಾಟರ್‌ಗಳು ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು. ಅಜ್ಮತುಲ್ಲಾ 18 ರನ್‌ಗಳಿಗೆ ಆಟ ಮುಗಿಸಿದರು. ಪಂಜಾಬ್ ಕಿಂಗ್ಸ್ ತಂಡದ ಪರ ಜೊತೆಯಾಟಗಳು ಬಾರದೇ ಇರುವುದರಿಂದ ತಂಡಕ್ಕೆ ಪೆಟ್ಟು ಬಿದ್ದಿತು. ಯಾವೊಬ್ಬ ಬ್ಯಾಟರ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಪಂಜಾಬ್ ತಂಡ 14.1 ಓವರ್‌ಗಳಲ್ಲಿ 101 ರನ್ ಗಳಿಗೆ ಆಲೌಟ್ ಆಯಿತು.
ಜೋಶ್, ಸುಯೇಶ್ ಅಬ್ಬರ
ಆರ್‌ಸಿಬಿ ತಂಡದ ಪರ ಸ್ಟಾರ್ ಬೌಲರ್‌ಗಳು ಅಮೋಘ ಬೌಲಿಂಗ್ ನಡೆಸಿದರು. ಗಾಯದಿಂದ ಮೈದಾನಕ್ಕೆ ಮರಳಿರುವ ಜೋಶ್ ಹ್ಯಾಜಲ್‌ವುಡ್ 21 ರನ್ ನೀಡಿ 3 ವಿಕೆಟ್ ಪಡೆದರೆ, ಸುಯೇಶ್ ಶರ್ಮಾ 17 ರನ್ ನೀಡಿ 3 ವಿಕೆಟ್ ಕಬಳಿಸಿದರು. ಎಡಗೈ ವೇಗದ ಬೌಲರ್ ಯಶ್ ದಯಾಳ್ 26 ರನ್ 2 ವಿಕೆಟ್ ಪಡೆದರು. ಇನ್ನು ಭುವನೇಶ್ವರ್ ಕುಮಾರ್, ರೊಮಾರಿಯಾ ಶೆಫರ್ಡ್ ತಲಾ ಒಂದು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications