Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ನೀನೊಬ್ಬ ಜೋಕರ್‌': ರಾಯುಡುಗೆ ಸರಿಯಾಗಿ ಕೊಟ್ಟ RCB ಮಾಜಿ ನಾಯಕ!

ಮೇ 28 ಮಂಗಳವಾರ, ಐಪಿಎಲ್ 2024ರ ನಾಕೌಟ್ ‌ಪಂದ್ಯದಲ್ಲಿ (ಮೇ 18) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್ ಸೋತಿರುವುದಕ್ಕೆ ಸಿಎಸ್‌ಕೆ ಮಾಜಿ ಬ್ಯಾಟರ್‌ ಅಂಬಟಿ ರಾಯುಡು ಹತಾಶರಾಗಿದ್ದಾರೆ.

ಅಂದಿನಿಂದ ಆರ್‌ಸಿಬಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಅಂಬಟಿ ರಾಯುಡು ಸುದ್ದಿಯಾಗುತ್ತಿದ್ದಾರೆ.ಹೀಗಾಗಿ ವಿರಾಟ್‌ ಕೊಹ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರಾಯುಡು ಅವರನ್ನು ಸಾಕಷ್ಟು ಟ್ರೋಲ್‌ ಮಾಡುತ್ತಿದ್ದಾರೆ.

RCB ex-captain sparks against Ambati Rayudu

ಭಾನುವಾರ ಚೆನ್ನೈನಲ್ಲಿ ನಡೆದ ಐಪಿಎಲ್‌ 2024ರ ಫೈನಲ್‌ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್‌ ತಂಡವನ್ನು 8 ವಿಕೆಟ್‌ಗಳಿಂದ ಕೋಲ್ಕತ್ತಾ ನೈಟ್‌ ರೈಡರ್ಸ್‌ ಭರ್ಜರಿಯಾಗಿ ಗೆದ್ದು ಟ್ರೋಫಿ ಎತ್ತಿ ಹಿಡಿದಿತ್ತು. ಈ ಪಂದ್ಯಕ್ಕೆ ಕಾಮೆಂಟೇಟರ್
ಆಗಿದ್ದ ಅಂಬಟಿ ರಾಯುಡು ಮತ್ತೆ ಟ್ರೋಲ್‌ಗೆ ಒಳಗಾಗಿದ್ದಾರೆ.

ಫೈನಲ್‌ ಪಂದ್ಯದ ನಂತರ ಅಂಬಾಟಿ ರಾಯುಡು ವಿರುದ್ಧ ಇಂಗ್ಲೆಂಡ್‌ ಹಾಗು ಆರ್‌ಸಿಬಿ ಮಾಜಿ ನಾಯಕ ಕೆವಿನ್ ಪೀಟರ್ಸನ್ ಮತ್ತು ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟರ್‌ ಮ್ಯಾಥ್ಯೂ ಹೇಡನ್ ಕಿಡಿಕಾರಿದ್ದಾರೆ. ಇಬ್ಬರೂ ತಮ್ಮ ಸಂಭಾಷಣೆಯಲ್ಲಿ ರಾಯುಡು ಅವರನ್ನು ಜೋಕರ್ ಎಂದು ಬಣ್ಣಿಸಿದ್ದಾರೆ.

ಫೈನಲ್‌ ಪಂದ್ಯಕ್ಕೂ ಮೊದಲು ಅಂಬಟಿ ರಾಯುಡು ಎಸ್‌ಆರ್‌ಹೆಚ್‌ ತಂಡದ ಕಿತ್ತಳೆ ಬಣ್ಣ ಕೋಟ್‌ ಧರಿಸಿದ್ದರು. ಆದರೆ, ಕೆಕೆಆರ್‌ ಎದುರು ಎಸ್‌ಆರ್‌ಹೆಚ್‌ ಸೋಲುತ್ತಿದ್ದಂತೆ ರಾಯುಡು ನೀಲಿ ಕೋಟ್‌ ಧರಿಸಿದರು.

ರಾಯುಡು ಈ ನಡೆ ಬಗ್ಗೆ ಅಲ್ಲೇ ಇದ್ದ ನಿರೂಪಕಿ ಮಯಾಂತಿ ಲ್ಯಾಂಗರ್ ಪ್ರತಿಕ್ರಿಯಿಸಿ, ರಾಯುಡು ಆಗ ಕೇಸರಿ ಕೋಟ್‌ ಹಾಕಿದ್ದರು. ಎಸ್‌ಆರ್‌ಹೆಚ್‌ ಸೋತ ಕೂಡಲೇ ಈಗ ಬಣ್ಣ ಬದಲಾಯಿಸಿದ್ದಾರೆ ಅವರಿಗೆ ಧನ್ಯವಾದ ಎಂದು ಹೇಳಿದ್ದಾರೆ.

ಈ ವೇಳೆ ಸುಮ್ಮನಿರದ ರಾಯುಡು, ಯಾರು ಒಳ್ಳೆಯ ಕ್ರಿಕೆಟ್‌ ಆಡುತ್ತಾರೋ ಅವರಿಗೆ ನಾನು ಸಂಪೋರ್ಟ್‌ ಮಾಡುತ್ತೇನೆ ಎಂದು ತಿಳಿಸಿದರು. ಇದಕ್ಕೆ ನೀನೊಬ್ಬ ಜೋಕರ್‌, ಯಾವಾಗಲೂ ಜೋಕರ್‌ ಎಂದು ಕೆವಿನ್‌ ಪೀಟರ್ಸನ್ ಸರಿಯಾಗಿ ತಿರುಗೇಟ ಕೊಟ್ಟಿದ್ದಾರೆ.

ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗಿದ್ದು, ಆರ್‌ಸಿಬಿ ಅಭಿಮಾನಿಗಳು ಕೆವಿನ್‌ ಪೀಟರ್ಸನ್‌ ಅವರನ್ನು ಪ್ರಶಂಸಿದ್ದಾರೆ. ‌
ಈಗಾಗಲೇ ಎಲ್ಲ ಮಾದರಿ ಕ್ರಿಕೆಟ್‌ಗೂ ವಿದಾಯ ಹೇಳಿರುವ ಅಂಬಟಿ ರಾಯುಡು, ಆರ್‌ಸಿಬಿ ಎದುರು ಚೆನ್ನೈ ಸೋಲಿನ ಬಳಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎನ್ನುತ್ತಾರೆ ಅಭಿಮಾನಿಗಳು.

ಐಪಿಎಲ್‌ 2024ರಲ್ಲಿ ವಿರಾಟ್‌ ಕೊಹ್ಲಿ ಅತಿಹೆಚ್ಚು ರನ್‌ ಗಳಿಸಿ ಆಟಗಾರನಾಗಿ ಆರೆಂಜ್‌ ಕ್ಯಾಪ್‌ ಗೆದ್ದಿದ್ದಾರೆ. ಈ ಬಗ್ಗೆ ಕೂಡ ಪ್ರತಿಕ್ರಿಯಿಸಿದ್ದ ರಾಯುಡು, ಕೊಹ್ಲಿಯನ್ನು ಹೀಯಳಿಸಿದ್ದರು. ಇದರಿಂದ ಸಿಟ್ಟಿಗೆದ್ದ ಕೊಹ್ಲಿ ಅಭಿಮಾನಿಗಳು, ಅಂಬಟಿ ರಾಯುಡು ಈವರೆಗೆ ಒಟ್ಟು 55 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಟೀಮ್‌ ಇಂಡಿಯಾ ಪರ ಆಡಿದ್ದಾರೆ.

ಆದರೇ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರು, ಅಂಬಟಿ ರಾಯುಡು ಆಡಿರುವ ಪಂದ್ಯಗಳಿಗಿಂತ ಹೆಚ್ಚು 80 ಶತಕ ಹೊಡೆದಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಬಗ್ಗೆ ರಾಯುಡು ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.

Story first published: Tuesday, May 28, 2024, 12:36 [IST]
Other articles published on May 28, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+