RCB ಮಾಜಿ ವೇಗಿ ಟಿ20 ಕ್ರಿಕೆಟ್‌ಗೆ ವಿದಾಯ
ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಬೌಲಿಂಗ್‌ನಿಂದ ಪ್ರಭಾವ ಬೀರಿದ್ದ ಸ್ಟಾರ್ ಬೌಲರ್ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಮುಂದೆ ಸ್ಟಾರ್ಕ್ ಚುಟುಕು ಫಾರ್ಮೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸುವುದಿಲ್ಲ. ಇವರು ವಿದಾಯ ಹೇಳಿರುವುದು 2026 ಟಿ20 ವಿಶ್ವಕಪ್ ವೇಳೆ ತಂಡಕ್ಕೆ ದೊಡ್ಡ ಹಿನ್ನಡೆ ಆಗಲಿದೆ. ಸ್ಟಾರ್ಕ್ 2021ರಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಾಗ ತಂಡದ ಭಾಗವಾಗಿದ್ದರು. ಇವರು ಕಳೆದ ಬಾರಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ತಂಡದ ಪರ ಬೌಲಿಂಗ್ ಮಾಡಿದ್ದರು.
ಕಳೆದ ಬಾರಿ ನಡೆದ ಟಿ20 ವಿಶ್ವಕಪ್ ಬಳಿಕ ಸ್ಟಾರ್ಕ್ ಒಂದೇ ಒಂದು ಟಿ20 ಪಂದ್ಯವನ್ನು ಸಹ ಆಡಿರಲಿಲ್ಲ. ಇವರು ಇನ್ನು ಮುಂದೆ ಆಸೀಸ್ ಪರ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ದೇಶೀಯ ಟಿ20 ಲೀಗ್‌ನಲ್ಲಿ ಆಡುವುದಾಗಿಯೂ ಸ್ಟಾರ್ಕ್ ತಿಳಿಸಿದ್ದಾರೆ. ಇವರು ಹೇಳಿದ ಈ ಮಾತಿನ ಅರ್ಥ ಐಪಿಎಲ್‌ನಲ್ಲೂ ಇವರ ಬಿಗುವಿನ ದಾಳಿ ಮಾಡುವುದನ್ನು ನೋಡಬಹುದಾಗಿದೆ. ಇನ್ನು ಮುಂದೆ ಸ್ಟಾರ್ಕ್ ಟೆಸ್ಟ್ ಮತ್ತು ಏಕದಿನ ಪಂದ್ಯಗಳ ಮೇಲೆ ಹೆಚ್ಚು ಗಮನಹರಿಸಲು ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಅವರು ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್ ನನ್ನ ಮೊದಲ ಆದ್ಯತೆಯಾಗಿದೆ. ನಾನು ಆಸ್ಟ್ರೇಲಿಯಾಕ್ಕಾಗಿ ಆಡಿದ ಟಿ20 ಪಂದ್ಯದ ಪ್ರತಿ ನಿಮಿಷವೂ ಸಹ ವಿಶೇಷ. ನಾನು 2021ರ ವಿಶ್ವಕಪ್ ಆನಂದಿಸಿದ್ದೇನೆ. ಆ ವಿಶ್ವಕಪ್ ನಾವು ಗೆದ್ದಿದ್ದೇವೆ. ಆಸೀಸ್ ತಂಡ ಬಲಾಢ್ಯವಾಗಿತ್ತು. ನಾವು ಈ ಪಂದ್ಯವಳಿಯನ್ನು ಗೆದ್ದಿದ್ದು, ಇದರ ನೆನಪು ನನ್ನ ಮನಸ್ಸಿನಲ್ಲಿದೆ.
ಏಕದಿನ ವಿಶ್ವಕಪ್‌ಗೆ ತಯಾರಿ
ಮುಂಬರುವ ಭಾರತದ ಪ್ರವಾಸ ಹಾಗೂ ಆಶಸ್ ಟೆಸ್ಟ್ ಸರಣಿಯ ಮೇಲೆ ಚಿತ್ತ ಹರಿಸಲಾಗಿದೆ. 2027 ರಲ್ಲಿ ನಡೆದ ಏಕದಿನ ವಿಶ್ವಕಪ್ ಅನ್ನು ಗಮನಿಸಿದರೆ, ಮುಂದಿನ ಏಕದಿನ ವಿಶ್ವಕಪ್‌ಗೆ ಫಿಟ್ ಆಗಿರಲು ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಇವರ ನಿವೃತ್ತಿ ನಿಜಕ್ಕೂ ಆಸೀಸ್ ಬೌಲಿಂಗ್ ವಿಭಾಗಕ್ಕೆ ಪೆಟ್ಟು ನೀಡಿದೆ.
ಸ್ಟಾರ್ಕ್ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿಯೂ ಸಹ ಮಿಂಚಿದ್ದಾರೆ. ಇವರು 2012ರಲ್ಲಿ ತಮ್ಮ ಟಿ20 ಅಂತಾರಾಷ್ಟ್ರೀಯ ಪದಾರ್ಪಣೆ ಮಾಡಿದ್ದರು. ಇದಕ್ಕೂ ಮೊದಲೇ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಆಡಿದ್ದರು. ಆಸೀಸ್ ಪರ ಸ್ಟಾರ್ಕ್ 65 ಟಿ20 ಪಂದ್ಯಗಳಲ್ಲಿ 23.81 ಸರಾಸರಿಯಲ್ಲಿ 79 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಆಸ್ಟ್ರೇಲಿಯಾ ಪರ ಟಿ20 ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಖ್ಯಾತಿ ಪಡೆದಿದ್ದಾರೆ. ಮಿಚೆಲ್ ಸ್ಟಾರ್ಕ್ ಈ ವರೆಗೆ ಆಡಿದ 52 ಪಂದ್ಯಗಳಲ್ಲಿ 65 ವಿಕೆಟ್ ಪಡೆದಿದ್ದಾರೆ. ಈ ವೇಳೆ 2 ಬಾರಿ 4 ವಿಕೆಟ್, 1 ಬಾರಿ 5 ವಿಕೆಟ್ ಪಡೆದು ಬೀಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications