ಲೀಗ್ ಹಂತದಲ್ಲಿ RCB ಕಲೆ ಹಾಕಿದ ಗರಿಷ್ಠ ಮೊತ್ತ ಎಷ್ಟು? ಈ ಬಾರಿ ಇತಿಹಾಸ ನಿರ್ಮಿಸುವ ಅವಕಾಶ
19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರೋಚಕ ಘಟ್ಟದತ್ತ ಬಂದು ನಿಂತಿದೆ. ಈ ಬಾರಿ ಪ್ಲೇ ಆಫ್ ಪ್ರವೇಶಿಸಬಹುದಾದ ತಂಡಗಳು ಯಾವುವು ಎಂಬುದನ್ನು ಲೆಕ್ಕ ಹಾಕುವುದು ಇನ್ನು ಕಷ್ಟವಾಗುತ್ತಿದೆ. ಇದಕ್ಕೆ ಕಾರಣ ಈ ಲೀಗ್‌ನಲ್ಲಿ ಎಲ್ಲ ತಂಡಗಳು ನೀಡುತ್ತಿರುವ ಪ್ರದರ್ಶನ. ಈ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕೆ ಇಳಿದಿದೆ. ಈ ಬಾರಿ ಆರ್‌ಸಿಬಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.
ಈ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಅಲ್ಲದೆ ಈ ಬಾರಿ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಆಡಿದ 12 ಪಂದ್ಯಗಳಲ್ಲಿ ಆರ್‌ಸಿಬಿ ಒಟ್ಟು 8 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, 4 ಪಂದ್ಯಗಳನ್ನು ಸೋತಿದೆ. ಅಲ್ಲದೆ 16 ಅಂಕಗಳೊಂದಿಗೆ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಆರ್‌ಸಿಬಿಗೆ ಎರಡು ಪಂದ್ಯಗಳು ಉಳಿದಿವೆ.

ಒಟ್ಟಾರೆ ಐಪಿಎಲ್ ಇತಿಹಾಸವನ್ನು ಒಮ್ಮೆ ತಿರುವಿ ನೋಡಿದರೆ ಆರ್‌ಸಿಬಿ ಲೀಗ್ ಹಂತದಲ್ಲಿ 19 ಅಂಕಗಳನ್ನು ಗಳಿಸಿದ್ದೇ ಹೆಚ್ಚು. 2011 ಹಾಗೂ 2025 ರಲ್ಲಿ ನಡೆದಿದ್ದ ಐಪಿಎಲ್‌ನಲ್ಲಿ ಆರ್‌ಸಿಬಿ ಆಡಿದ 14 ಪಂದ್ಯಗಳಲ್ಲಿ 9 ಜಯ, 4 ಸೋಲು, 1 ಪಂದ್ಯ ರದ್ದಾಗಿದ್ದರಿಂದ ಒಟ್ಟು 19 ಅಂಕಗಳನ್ನು ಕಲೆ ಹಾಕಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ಇದೇ ಆರ್‌ಸಿಬಿ ಲೀಗ್ ಹಂತದಲ್ಲಿ ಗಳಿಸಿದ ಅತಿ ಹೆಚ್ಚು ಅಂಕವಾಗಿದೆ. ಇನ್ನು 2013, 2021, 2022ರಲ್ಲಿ ಆರ್‌ಸಿಬಿ 18 ಅಂಕಗಳನ್ನು ಕಲೆ ಹಾಕಿದ ಸಾಧನೆ ಮಾಡಿದೆ.
ಲೀಗ್ ಹಂತದಲ್ಲಿ ಕಲೆ ಹಾಕಿದ ಗರಿಷ್ಠ ಅಂಕ ಎಷ್ಟು?
ಒಟ್ಟಾರೆ ಐಪಿಎಲ್ ಇತಿಹಾಸದಲ್ಲಿ ತಂಡವೊಂದು ಲೀಗ್ ಹಂತದಲ್ಲಿ ಗಳಿಸಿದ ಗರಿಷ್ಠ ಅಂಕ 22 ಆಗಿದೆ. ಈ ಸಾಧನೆಯನ್ನು 2008ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಮಾಡಿದೆ. ಈ ಆವೃತ್ತಿಯಲ್ಲಿ ಆರ್‌ಆರ್ ಆಡಿದ 14 ಪಂದ್ಯಗಳಲ್ಲಿ 11 ಜಯ, 3 ಸೋಲು ಕಂಡು 22 ಅಂಕಗಳನ್ನು ಕಲೆ ಹಾಕಿತ್ತು. ಇದೇ ಸಾಧನೆಯನ್ನು ಚೆನ್ನೈ ಸೂಪರ್ ಕಿಂಗ್ಸ್ 2013ರಲ್ಲಿ, ಪಂಜಾಬ್ ಕಿಂಗ್ಸ್ 2014 ರಲ್ಲಿ ಮಾಡಿತ್ತು. 2021ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್, 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, 2023ರಲ್ಲಿ ಗುಜರಾಟ್ ಟೈಟಾನ್ಸ್ ತಂಡಗಳು ಲೀಗ್ ಹಂತದಲ್ಲಿ 20 ಅಂಕಗಳನ್ನು ಕಲೆ ಹಾಕಿದ್ದವು.

ಈ ಬಾರಿ ಆರ್‌ಸಿಬಿ ಲೀಗ್ ಹಂತದಲ್ಲಿ ಇನ್ನು ಎರಡು ಪಂದ್ಯಗಳನ್ನು ಆಡಲಿದ್ದು, 4 ಅಂಕಗಳನ್ನು ಗಳಿಸುವ ಅವಕಾಶ ಇದೆ. ಈ ಮೂಲಕ ಬೆಂಗಳೂರು ತಂಡ ಐಪಿಎಲ್‌ನಲ್ಲಿ ದೊಡ್ಡ ಇತಿಹಾಸವನ್ನು ನಿರ್ಮಿಸುವ ಕನಸಿನಲ್ಲಿದೆ. ಆರ್‌ಸಿಬಿ ಐಪಿಎಲ್ ಇತಿಹಾಸದಲ್ಲಿ ಈ ವರೆಗೆ ಎರಡು ಬಾರಿ 19 ಅಂಕಗಳನ್ನು ಲೀಗ್ ಹಂತದಲ್ಲಿ ಕಲೆ ಹಾಕಿತ್ತು. ಈ ದಾಖಲೆಯನ್ನು ಮೀರಿ ನಿಲ್ಲುವ ಅವಕಾಶ ಬೆಂಗಳೂರು ತಂಡದ್ದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications