RCB vs PBKS IPL 2025: ಚಿನ್ನದಂತಹ ಗೆಲುವಿನ ಹುಡುಕಾಟದಲ್ಲಿ ಆರ್‌ಸಿಬಿ: ಯಾರೇ ಗೆದ್ದರೂ ಅಂಕ ಪಟ್ಟಿಯಲ್ಲಿ ಬಡ್ತಿ ಗ್ಯಾರಂಟಿ
ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ತವರಿನ ಆಚೆ ಅಬ್ಬರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಮೊದಲ ಗೆಲುವಿನ ಕನಸಿನೊಂದಿಗೆ ಶುಕ್ರವಾರ ಕಣಕ್ಕೆ ಇಳಿಯಲಿದೆ. 18ನೇ ಆವೃತ್ತಿಯ ಐಪಿಎಲ್‌ನ 34ನೇ ಪಂದ್ಯದಲ್ಲಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್‌ಗೆ ಸವಾಲು ಎಸೆಯಲಿದೆ. ರಾಜಸ್ಥಾನ ತಂಡವನ್ನು ಮಣಿಸಿದ ಉತ್ಸಾಹದಲ್ಲಿ ಆರ್‌ಸಿಬಿ ಇದ್ರೆ, ಪಂಜಾಬ್ ಲೋ ಸ್ಕೋರ್ ಡಿಫೆಂಡ್ ಮಾಡಿಕೊಂಡಿರುವ ಹುಮ್ಮಸ್ಸಿನಲ್ಲಿ ಅಂಗಳಕ್ಕೆ ಇಳಿಯಲಿದೆ. ಆರ್‌ಸಿಬಿ ತವರಿನಲ್ಲಿ ಹ್ಯಾಟ್ರಿಕ್ ಸೋಲಿನ ಮುಖಭಂಗವನ್ನು ತಪ್ಪಿಸಿಕೊಳ್ಳಲು ರಣ ತಂತ್ರ ಹೆಣೆದುಕೊಂಡಿದೆ.
ಉಭಯ ತಂಡಗಳು ಈಗಾಗಲೇ ಐಪಿಎಲ್‌ನಲ್ಲಿ 33 ಪಂದ್ಯಗಳಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ತಂಡಗಳು ಮುಖಾಮುಖಿ ಆಗಿವೆ. ಆರ್‌ಸಿಬಿ 16 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಪಂಜಾಬ್ 17 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಉಭಯ ತಂಡಗಳ ನಡುವಿನ ಗರಿಷ್ಠ ಮೊತ್ತ 241 ರನ್ ಆಗಿದೆ. ಎಂ ಚಿನ್ನಸ್ವಾಮಿ ಮೈದಾನದಲ್ಲಿ ಈಗಾಗಲೇ 97 ಐಪಿಎಲ್ ಪಂದ್ಯಗಳು ನಡೆದಿದ್ದು, ಮೊದಲ ಬ್ಯಾಟ್ ಮಾಡಿದ ತಂಡ 41, ಚೇಸ್ ಮಾಡಿದ ತಂಡ 52 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಹೇಗಿದೆ ಪಿಚ್?
ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನವನ್ನು ಬ್ಯಾಟರ್‌ಗಳ ಸ್ವರ್ಗ ಎಂದೇ ಕರೆಯುತ್ತಾರೆ. ಈ ಪಿಚ್ ಬ್ಯಾಟರ್‌ಗಳಿಗೆ ಸಹಾಯಕವಾಗಲಿದೆ. ಆದರೆ ಈ ಮೈದಾನದಲ್ಲಿ ಈಗಾಗಲೇ 2 ಪಂದ್ಯಗಳನ್ನು ಆಡಲಾಗಿದ್ದು, ಒಮ್ಮೆಯೂ 200 ರನ್ ದಾಖಲಾಗಿಲ್ಲ. ಈ ಎರಡೂ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ರನ್ ಕಲೆ ಹಾಕಲು ಪರದಾಟ ನಡೆಸಿತು. ಹೀಗಾಗಿ ಈ ಮೈದಾನದಲ್ಲಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡು ನಿರ್ಧಾರವನ್ನು ಮಾಡುತ್ತದೆ.
ಗೆದ್ದರೆ ಅಂಕ ಪಟ್ಟಿಯಲ್ಲಿ ಬಡ್ತಿ
ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಪ್ರಸಕ್ತ ಐಪಿಎಲ್‌ನಲ್ಲಿ ಆಡಿದ 6 ಪಂದ್ಯಗಳಲ್ಲಿ 4 ಜಯ ಸಾಧಿಸಿದ್ದು, 8 ಅಂಕಗಳನ್ನು ಕಲೆ ಹಾಕಿವೆ. ನೆಟ್ ರನ್ ರೇಟ್ ವಿಚಾರದಲ್ಲಿ ಆರ್‌ಸಿಬಿ ಪಂಜಾಬ್‌ಗಿಂತ ಬಲಿಷ್ಠವಾಗಿದ್ದು, ಮೂರನೇ ಸ್ಥಾನದಲ್ಲಿದೆ. ಪಂಜಾಬ್ ನಾಲ್ಕನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯಲಿದೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಮಾತ್ರ 10 ಅಂಕಗಳನ್ನು ಕಲೆ ಹಾಕಿದೆ. ಇದೇ ಸಾಲಿಗೆ ಸೇರಲು ಆರ್‌ಸಿಬಿ, ಪಂಜಾಬ್ ಫೈಟ್ ನಡೆಸಲಿವೆ.

ಸಂಘಟಿತ ಆಟವೇ ಬಲ
ಆರ್‌ಸಿಬಿ ಇಷ್ಟು ವರ್ಷಗಳ ಕಾಲ ಒಬ್ಬ ಪ್ಲೇಯರ್ ಮೇಲೆ ಹೆಚ್ಚಿನ ಡಿಪೆಂಡೆಟ್ ಆಗಿತ್ತು. ಆದರೆ ಈ ಬಾರಿ ಹಾಗಿಲ್ಲ. ಎಲ್ಲ ಆಟಗಾರರು ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು ಬ್ಯಾಟ್ ಮಾಡುತ್ತಿದ್ದಾರೆ. ತವರಿನ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ. ಆರ್‌ಸಿಬಿ ತಂಡದ ಬ್ಯಾಟಿಂಗ್ ಆಧಾರ ಸ್ಥಂಬ ವಿರಾಟ್ ಕೊಹ್ಲಿ ಭರ್ಜರಿ ಲಯದಲ್ಲಿದ್ದಾರೆ. ಇವರು ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದ್ದರು. ಇನ್ನು ಫಿಲ್ ಸಾಲ್ಟ್ ಸಹ ವೀರಾವೇಶದ ಬ್ಯಾಟಿಂಗ್ ನಡೆಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡುತ್ತಿದ್ದಾರೆ. ಈ ಜೋಡು ಚಿನ್ನಸ್ವಾಮಿ ಅಂಗಳದಲ್ಲೂ ಇಂತಹದ್ದೇ ಬಿಗ್ ಇನಿಂಗ್ಸ್ ಆಡಬೇಕಿದೆ.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ದೇವದತ್ ಪಡಿಕ್ಕಲ್ ತಂಡ ತನ್ನ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಆಡಬೇಕಿದೆ. ತವರಿನ ಅಂಗಳದಲ್ಲಿ ದೇವದತ್ ಅಬ್ಬರಿಸಬೇಕಿದೆ. ಆರಂಭದಲ್ಲಿ ಇವರು ತಾಳ್ಮೆಯಿಂದ ಆಡಿದರೆ ಬೆಸ್ಟ್. ಉಳಿದಂತೆ ರಜತ್ ಪಟಿದಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ ತಂಡ ತಮಗೆ ನೀಡಿದ ಜವಾಬ್ದಾರಿಗೆ ಅನುಸಾರವಾಗಿ ಬ್ಯಾಟ್ ಮಾಡಿದರೆ ಬಿಗ್ ಸ್ಕೋರ್ ಕನಸು ನನಸಾಗುತ್ತದೆ.
ಆರ್‌ಸಿಬಿ ಪರ ಅತಿ ಹೆಚ್ಚು ರನ್ ಸರದಾರು
ವಿರಾಟ್ ಕೊಹ್ಲಿ, 6 ಪಂದ್ಯ, 248 ರನ್
ಫಿಲ್ ಸಾಲ್ಟ್, 6 ಪಂದ್ಯ, 208 ರನ್
ರಜತ್ ಪಟಿದಾರ್, 6 ಪಂದ್ಯ, 186 ರನ್
ಆರ್‌ಸಿಬಿ ತಂಡದ ಬೌಲರ್‌ಗಳು ಸಹ ಉತ್ತಮ ಲಯದಲ್ಲಿದ್ದಾರೆ. ಜೋಶ್ ಹ್ಯಾಜಲ್‌ವುಡ್ ಪವರ್ ಪ್ಲೇನಲ್ಲಿ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್ ಬೇಟೆ ನಡೆಸಬಲ್ಲರು. ಭುವನೇಶ್ವರ್ ಕುಮಾರ್, ಯಶ್ ದಾಯಳ್ ವಿಕೆಟ್ ಬೇಟೆ ನಡೆಸಿ ಎದುರಾಳಿಗಳಿಗೆ ಕಾಡಬೇಕಿದೆ. ಕೃನಾಲ್ ಪಾಂಡ್ಯ ಹಾಗೂ ಸುಯೇಶ್ ಶರ್ಮಾ ಪಿರ್ಕಿ ಮ್ಯಾಜಿಕ್ ನಡೆಸಬೇಕಿದೆ.
ಸಂಭಾವ್ಯ ತಂಡ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಾಜತ್ ಪಟಿದಾರ್ (ನಾಯಕ), ಲಿಯಾಂ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯಾ, ಭುವನೇಶ್ವರ ಕುಮಾರ್, ಜೋಶ್ ಹೇಜಲ್ವುಡ್, ಯಶ್ ದಯಾಲ್, ಸುಯೇಶ್ ಶರ್ಮಾ
ಆರ್‌ಸಿಬಿ ಪರ ಹೆಚ್ಚು ವಿಕೆಟ್ ಸಾಧಕರು
ಜೋಶ್ ಹ್ಯಾಜಲ್‌ವುಡ್, 6 ಪಂದ್ಯ, 9 ವಿಕೆಟ್
ಕೃನಾಲ್ ಪಾಂಡ್ಯ, 6 ಪಂದ್ಯ, 8 ವಿಕೆಟ್
ಯಶ್ ದಯಾಳ್, 6 ಪಂದ್ಯ, 7 ವಿಕೆಟ್
ನವ ಉತ್ಸಾಹದಲ್ಲಿ ಪಂಜಾಬ್
ಈ ಹಿಂದಿನ ಐಪಿಎಲ್‌ಗಳಲ್ಲಿ ಪಂಜಾಬ್ ಕಿಂಗ್ಸ್ ನೀಡರದ ಪ್ರದರ್ಶನವನ್ನು 18ನೇ ಆವೃತ್ತಿಯ ಐಪಿಎಲ್‌ನಲ್ಲಿ ನೀಡುತ್ತಿದೆ. ಈ ತಂಡದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ಕಟ್ಟಿ ಹಾಕುವುದು ಆರ್‌ಸಿಬಿ ಅನಿವಾರ್ಯ. ಸದ್ಯ ಇವರ ಫಾರ್ಮ್ ಭರ್ಜರಿಯಾಗಿದೆ. ಇವರು ಒಮ್ಮೆ ತಳ ಊರಿ ನಿಂತಲ್ಲಿ ಬಿಗ್ ಸ್ಕೊರ್ ಫಿಕ್ಸ್. ಆರಂಭಿಕರಿಗೆ ಆರ್‌ಸಿಬಿ ಬಿಗ್ ಸ್ಕೊರ್ ಮಾಡದಂತೆ ತಡೆಯುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಮೊದಲ ಗೆಲುವಿನ ಕನಸು ನನಸಾಗುತ್ತದೆ. ಪಂಜಾಬ್ ಬ್ಯಾಟಿಂಗ್ ತನ್ನ ಟಾಪ್ ಆರ್ಡರ್ ಮೇಲೆ ಅಲಂಬಿತವಾಗಿದ್ದರಿಂದ ಇದಕ್ಕೆ ಪೆಟ್ಟು ನೀಡಿದರೆ ಉತ್ತಮ.
ಪಂಜಾಬ್ ಪರ ಹೆಚ್ಚು ರನ್ ಬಾರಿಸಿದ ಬ್ಯಾಟ್ಸ್‌ಮನ್ಸ್
ಶ್ರೇಯಸ್ ಅಯ್ಯರ್, 6 ಪಂದ್ಯ, 250 ರನ್
ಪ್ರಿಯಾಂಶ್ ಆರ್ಯ, 6 ಪಂದ್ಯ, 216 ರನ್
ಪ್ರಭಸಿಮ್ರನ್ ಸಿಂಗ್, 6 ಪಂದ್ಯ, 163 ರನ್
ಆರ್‌ಸಿಬಿ ಪವರ್ ಪ್ಲೇನಲ್ಲಿ ಪಂಜಾಬ್ ತಂಡದ ಬೌಲರ್‌ಗಳನ್ನು ಟಾರ್ಗೆಟ್ ಮಾಡಿ ರನ್‌ಗಳನ್ನು ಗುಡ್ಡೆ ಹಾಕಬೇಕಿದೆ. ಏಕೆಂದರೆ ಮಧ್ಯದ ಓವರ್‌ಗಳಲ್ಲಿ ತನ್ನ ಸ್ಪಿನ್ ಮೋಡಿ ಮಾಡಲು ಯುಜುವೇಂದ್ರ ಚಹಾಲ್ ಬರಲಿದ್ದಾರೆ. ಇವರು ಕಳೆದ ಪಂದ್ಯದಲ್ಲಿ ಕೆಕೆಆರ್ ತಂಡಕ್ಕೆ ಬಹುವಾಗಿ ಕಾಡಿದ್ರು. ಸೋಲುವ ಪಂದ್ಯದಲ್ಲಿ ಪಂಜಾಬ್ ಗೆಲುವಿನ ನಗೆ ಬೀರಲು ಚಹಾಲ್ ಮಾಡಿದ ಸ್ಪಿನ್ ಮೋಡಿ ಕಾರಣ. ಹೀಗಾಗಿ ಆರ್‌ಸಿಬಿ ಇವರ ಬೌಲಿಂಗ್‌ನ್ನು ಎಚ್ಚರಿಕೆಯಿಂದ ಆಡಬೇಕಿದೆ.
ಕಿಂಗ್ಸ್ ಪರ ವಿಕೆಟ್ ಸಾಧಕರು
ಅರ್ಷದೀಪ್ ಸಿಂಗ್, 6 ಪಂದ್ಯ, 8 ವಿಕೆಟ್
ಯುಜುವೇಂದ್ರ ಚಹಾಲ್, 6 ಪಂದ್ಯ, 6 ವಿಕೆಟ್
ಮಾರ್ಕೊ ಜಾನ್ಸೆನ್, 6 ಪಂದ್ಯ, 6 ವಿಕೆಟ್
ಪಂಜಾಬ್ ಸಂಭಾವ್ಯ ತಂಡ: ಪ್ರಿಯಾಂಶ್ ಆರ್ಯ, ಪ್ರಭಸಿಮನ್ ಸಿಂಗ್, ಶ್ರೇಯಸ್ ಅಯ್ಯರ್ (ನಾಯಕ), ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ನೆಹಾಲ್ ವಾಧೆರಾ, ಗ್ಲೆನ್ ಮ್ಯಾಕ್ಸ್‌ವೆಲ್/ಮಾರ್ಕಸ್ ಸ್ಟಾಯಿನಿಸ್, ಶಶಾಂಕ್ ಸಿಂಗ್, ಮಾರ್ಕೋ ಜಾನ್ಸನ್, ಯಶವೇಂದ್ರ ಚಾಹಲ್, ಝೇವಿಯರ್ ಬಾರ್ಟ್ಲೆಟ್, ಅರ್ಶದೀಪ್ ಸಿಂಗ್,
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications