Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB IPL 2025: ಇನ್ನೊಂದು ಪಂದ್ಯ ಗೆದ್ದರೆ ಆರ್‌ಸಿಬಿ ಇತಿಹಾಸ

ಪ್ರಸಕ್ತ ವರ್ಷದ ಐಪಿಎಲ್‌ನಲ್ಲಿ ರಜತ್ ಪಟಿದಾರ್ ಮುಂದಾಳತ್ವದ ಆರ್‌ಸಿಬಿ ಸ್ಥಿರ ಪ್ರದರ್ಶನವನ್ನು ನೀಡಿ ಅಭಿಮಾನಿಗಳ ಮನ ಗೆಲ್ಲುತ್ತಿದೆ. ಈ ಲೀಗ್‌ನಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರರು ಭರ್ಜರಿ ಫಾರ್ಮ್‌ಗೆ ಮರಳಿರುವುದು ಖುಷಿಯ ವಿಚಾರ. ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್‌ ನಿಜಕ್ಕೂ ಎದುರಾಳಿಗಳ ಟೆನ್ಷನ್‌ ಹೆಚ್ಚಿಸಿದೆ. ಈ ಬಾರಿ ಆರ್‌ಸಿಬಿ ಎಲ್ಲ ಹಂತದಲ್ಲೂ ಬಲಿಷ್ಠವಾಗಿದೆ. ಸದ್ಯ ಆರ್‌ಸಿಬಿ ಆಡಿರುವ 10 ಪಂದ್ಯಗಳಲ್ಲಿ ಏಳು ಪಂದ್ಯಗಳಲ್ಲಿ ಜಯ ದಾಖಲಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬಹುತೇಕ ತಂಡಗಳು ಲೀಗ್‌ ಹಂತದಲ್ಲಿ ಸ್ಥಿರ ಪ್ರದರ್ಶನ ನೀಡುತ್ತವೆ. ಅದ್ರಲ್ಲೂ ತವರು ಅಂಗಳದಲ್ಲಿ ಎಲ್ಲ ತಂಡಗಳು ಚೇತೊಹಾರಿ ಪ್ರದರ್ಶನ ನೀಡುತ್ತಿವೆ. ಆದರೆ ಆರ್‌ಸಿಬಿ ಮಾತ್ರ ತವರಿನಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ ಗೆಲುವು ದಾಖಲಿಸಿದೆ. ಉಳಿದ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಇನ್ನು ಆರ್‌ಸಿಬಿ ತವರಿನಾಚೆ ಉತ್ತಮ ಅಂಕಿ ಅಂಶಗಳನ್ನು ಹೊಂದಿದ್ದು ಎದುರಾಳಿ ತಂಡಗಳ ಚಿಂತೆಯನ್ನು ಹೆಚ್ಚಿಸಿದೆ. ಈ ವರೆಗೆ ಆರ್‌ಸಿಬಿ ತವರಿನಾಚೆ ಒಟ್ಟು 6 ಪಂದ್ಯಗಳನ್ನು ಆಡಿದ್ದು, ಆಡಿರುವ ಆರೂ ಪಂದ್ಯಗಳಲ್ಲಿ ಜಯ ದಾಖಲಿಸಿದೆ.

RCB Eyes Historic Record with Unbeaten Away Streak in IPL 2025

17ವರ್ಷಗಳ ಬಳಿಕ ಆರ್‌ಸಿಬಿ ಚೆನ್ನೈನಲ್ಲಿ ಸಿಎಸ್‌ಕೆ ತಂಡವನ್ನು, 10 ವರ್ಷಗಳ ಬಳಿಕ ಮುಂಬೈ ನಲ್ಲಿ ಎಂಐ ತಂಡವನ್ನು ಮಣಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಇನ್ನು ಈ ಲೀಗ್‌ನ ಇನ್ನೊಂದು ತವರಿನಾಚೆಯ ಪಂದ್ಯವನ್ನು ಆರ್‌ಸಿಬಿ ಮೇ 9 ರಂದು ಲಕ್ನೋ ಸೂಪರ್‌ ಜೈಂಟ್ಸ್ ವಿರುದ್ಧ ಲಕ್ನೋ ಅಂಗಳದಲ್ಲಿ ಆಡಲಿದೆ. ಈ ಪಂದ್ಯ ಆರ್‌ಸಿಬಿ ಪಾಲಿಗೆ ಮಹತ್ವದಾಗಿದೆ.

ದೊಡ್ಡ ದಾಖಲೆಯ ಮೇಲೆ ಆರ್‌ಸಿಬಿ ಕಣ್ಣು

ಅಂದಹಾಗೆ ಐಪಿಎಲ್‌ನಲ್ಲಿ ಪ್ರತಿ ತಂಡಗಳು ತವರಿನಲ್ಲಿ ಏಳು ಹಾಗೂ ತವರಿನಾಚೆ ಏಳು ಪಂದ್ಯಗಳನ್ನು ಆಡುತ್ತವೆ. ಎಲ್ಲ ತಂಡಗಳು ತವರಿನ ಪಂದ್ಯಗಳನ್ನು ಕಾನ್ಸ್‌ಟ್ರೆಟ್‌ ಮಾಡಿ ತಂಡವನ್ನು ಕಟ್ಟುತ್ತವೆ. ಆದರೆ ಆರ್‌ಸಿಬಿ ತವರಿನಾಚೆ ಸ್ಥಿರ ಪ್ರದರ್ಶನ ನೀಡುತ್ತಿರುವುದು ಅಭಿಮಾನಿಗಳಲ್ಲಿ ನವ ಉತ್ಸಾಹ ಚಿಮ್ಮಿದೆ. ಈಗ ಆರ್‌ಸಿಬಿ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ದೊಡ್ಡ ದಾಖಲೆಯನ್ನು ನಿರ್ಮಿಸುವ ಅವಕಾಶವನ್ನು ಹೊಂದಿದೆ.

ಮೇ 9ರಂದು ನಡೆಯಲಿರುವ ಲಕ್ನೋ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಜಯ ಸಾಧಿಸಿದ್ದೇ ಆದಲ್ಲಿ, ಲೀಗ್‌ ಹಂತದಲ್ಲಿ ತವರಿನಾಚೆ ಎಲ್ಲ ಪಂದ್ಯಗಳನ್ನು ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದೆ. ಐಪಿಎಲ್‌ 2012ರಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತವರಿನಾಚೆ ಒಟ್ಟು 10 ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಹೊಂದಿತ್ತು. ಇದರದಲ್ಲಿ 2 ಪ್ಲೇ ಆಫ್‌ ಪಂದ್ಯಗಳು ಸಹ ಸೇರಿವೆ. ಆದರೆ ಕೆಕೆಆರ್‌ ಲೀಗ್‌ ಹಂತದಲ್ಲಿ ರಾಜಸ್ಥಾನ ವಿರುದ್ಧ ಜೈಪುರ್‌ದಲ್ಲಿ ಸೋಲು ಕಂಡಿತ್ತು.

ಈ ಬಾರಿ ಆರ್‌ಸಿಬಿ ತಂಡ ಅಮೋಘವಾಗಿದೆ. ಸಂಘಟಿತ ಪ್ರದರ್ಶನ ನೀಡುತ್ತಿದ್ದು ಅಭಿಮಾನಿಗಳಲ್ಲಿ ನವ ಉತ್ಸಾಹ ತುಂಬಿದೆ. ಇದೇ ಪ್ರದರ್ಶನವನ್ನು ಮುಂದುವರೆಸಿದ್ದೇ ಆದಲ್ಲಿ ದಾಖಲೆ ಪುಟಕ್ಕೆ ಸೇರುವುದು ಫಿಕ್ಸ್‌.

Story first published: Monday, April 28, 2025, 18:21 [IST]
Other articles published on Apr 28, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+