For Quick Alerts
ALLOW NOTIFICATIONS  
For Daily Alerts
 

ಪಂತ್‌ ಬೇಡಿಕೆಗೆ ಒಪ್ಪದ ಕ್ಯಾಪಿಟಲ್ಸ್‌: ಆರ್‌ಸಿಬಿಗೆ ಹೊಡೆಯುತ್ತಾ ಜಾಕ್‌ಪಾಟ್‌!

ಐಪಿಎಲ್‌ ಮಾಲೀಕರು ತಾವು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ನೀಡಲು ಇನ್ನೊಂದು ವಾರವೇ ಉಳಿದಿದೆ. ಈ ವೇಳೆ ಮಾಲೀಕರು ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ಕೈ ಬಿಡಬೇಕು ಎಂಬ ಚಿಂತೆ ಆರಂಭವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್‌ ಕ್ಯಾಂಪ್‌ನಲ್ಲೂ ಸಹ ಈ ಬಗ್ಗೆ ಚಟುವಟಿಕೆಗಳು ನಡೆಯುತ್ತಿವೆ.

ಡೆಲ್ಲಿ ಕ್ಯಾಪಿಟಲ್ಸ್‌ ರಿಷಭ್ ಪಂತ್‌ ಅವರನ್ನು ಬರೀ ಆಟಗಾರನಾಗಿ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಅವರಿಗೆ ಕ್ಯಾಪ್ಟನ್ಸಿ ನೀಡಲು ಡೆಲ್ಲಿ ಹಿಂದೇಟು ಹಾಕುತ್ತಿದೆ. ಹೀಗಾಗಿ ರಿಷಭ್‌, ಬಿಡ್ಡಿಂಗ್ ಅಂಗಳವನ್ನು ಪ್ರವೇಶಿಸುವ ಸಾಧ್ಯತೆ ಎದ್ದು ಕಾಣುತ್ತಿದೆ. ಈ ಬಗ್ಗೆ ಪಂತ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರ ನಡುವೆ ಚರ್ಚೆಗಳು ನಡೆದಿವೆ. ಆದರೆ ಮ್ಯಾನೇಜ್ಮೆಂಟ್‌ ಅವರಿಗೆ ನಾಯಕತ್ವ ನೀಡಲು ಹಿಂದೇಟು ಹಾಕುತ್ತಿದೆ. ಇದರಿಂದ ಪಂತ್‌ ಹರಾಜು ಅಂಗಳ ಪ್ರವೇಶಿಸುವ ಸಾಧ್ಯತೆ ದಟ್ಟವಾದಂತೆ ಕಾಣುತ್ತಿದೆ.

RCB Eyes Jackpot as Delhi Capitals Refuse Pant s Captaincy Demand

ಬೇಡಿಕೆಗೆ ಮಣಿಯದ ಡೆಲ್ಲಿ

ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ ಪರ 2016 ರಿಂದ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇವರ ಬೇಡಿಕೆಗೆ ಡೆಲ್ಲಿ ಮಣೆ ಹಾಕುವ ಸಂಭವ ಕಡಿಮೆ ಇದ್ದು, ಇವರು ಬಿಡ್ಡ ಅಖಾಡ ಪ್ರವೇಶಿಸಲಿದ್ದಾರೆ. ಒಂದು ವೇಳೆ ಇದು ನಿಜವೇ ಆದರೆ, ಮಾಲೀಕರ ಎಲ್ಲರ ಚಿತ್ತ ಬಿಡ್ಡಿಂಗ್ ಮೇಲೆ ನಿಂತಿರುತ್ತದೆ. ನಾಯಕನ ಹುಡುಕಾಟದಲ್ಲಿರುವ ಮಾಲೀಕರ ಚಿತ್ತವನ್ನು ಕದಿಯಬಹುದು.

ಪಂತ್‌ ಮೇಲೆ ಆರ್‌ಸಿಬಿ ಕಣ್ಣು

ರಿಷಭ್‌ ಪಂತ್‌ ಹೆಸರು ಬಿಡ್‌ ಅಖಾಡಕ್ಕೆ ಎಂಟ್ರಿ ಕೊಡ್ತಾ ಇದ್ದಂಗೆ ಆರ್‌ಸಿಬಿ ಕಾರ್ಯ ಪ್ರವೃತ್ತವಾಗುತ್ತದೆ. ಇವರ ಮೇಲೆ ಹಣದ ಹೊಳೆಯನ್ನು ಹರಿಸಲು ಆರ್‌ಸಿಬಿ ತಯಾರಿದೆ. ಈ ಮೂಲಕ ಒಂದೇ ಕಲ್ಲಿಗೆ ಮೂರು ಹಕ್ಕಿಗೆ ಆರ್‌ಸಿಬಿ ಕಣ್ಣು ನೆಟ್ಟಿದೆ. ಆರ್‌ಸಿಬಿ ಪ್ರಮುಖವಾಗಿ ಮಿಡ್ಲ್‌ ಆರ್ಡರ್‌ ಬ್ಯಾಟರ್‌, ವಿಕೆಟ್‌ ಕೀಪರ್‌, ಕ್ಯಾಪ್ಟನ್‌ ಹುಡುಕಾಟದಲ್ಲಿದೆ. ಈ ಮೂರು ಗುಣಗಳು ಒಬ್ಬನೇ ಪ್ಲೇಯರ್‌ಲ್ಲಿ ಇದ್ದರೆ ಅದು ಜಾಕ್‌ಪಾಟ್‌ ಆಗಲಿದೆ.

ಒಂದೇ ಕಲ್ಲಿಗೆ ಮೂರು ಹಕ್ಕಿ

ಫಾಫ್‌ ಡುಪ್ಲೇಸಿಸ್‌ಗೆ ಪರ್ಯಾಯ ನಾಯಕನನ್ನು ಆರ್‌ಸಿಬಿ ಹುಡುಕುತ್ತಿದೆ. ಅಲ್ಲದೆ ದಿನೇಶ್‌ ಕಾರ್ತಿಕ್‌ ನಿವೃತ್ತರಾದ ಬಳಿಕ ಅವರ ಸ್ಥಾನವನ್ನು ತುಂಬ ಆಟಗಾರನಿಗೂ ಶೋಧ ಕಾರ್ಯ ನಡೆದಿದೆ. ಹೀಗಾಗಿ ಪಂತ್ ಬಿಡ್ಡಿಂಗ್ ಅಂಗಳಕ್ಕೆ ಬಂದರೆ ನಿಜಕ್ಕೂ ಆರ್‌ಸಿಬಿ ಹಣದ ಹೊಳೆಯನ್ನು ಹರಿಸಲಿದೆ. ಪಂತ್‌ ಯಂಗ್ ಪ್ಲೇಯರ್‌ ಇವರು ತಾವು ಸೇರುವ ಫ್ರಾಂಚೈಸಿ ಪರ ಹೆಚ್ಚು ವರ್ಷ ಆಡಬಹುದಾಗಿದೆ.

ಆರ್‌ಸಿಬಿ ಅಷ್ಟೇ ಅಲ್ಲ, ಲಕ್ನೋ ಸೂಪರ್ ಜೈಂಟ್ಸ್, ಪಂಜಾಬ್‌ ಕಿಂಗ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌ ಸಹ ನಾಯಕನ ಹುಡುಕಾಟದಲ್ಲಿವೆ. ಎಲ್‌ಎಸ್‌ಜಿ ಸಹ ರಾಹುಲ್‌ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಬೇರೆ ನಾಯಕನ ಹುಡುಕಾಟ ನಡೆಸಿದೆ. ಈ ನಿಟ್ಟಿನಲ್ಲಿ ಈ ಎಲ್ಲ ತಂಡಗಳು ಸಹ ಪಂತ್‌ ಮೇಲೆ ಕಣ್ಣು ನೆಟ್ಟಿವೆ. ಕೆಎಲ್‌ ರಾಹುಲ್ ಅವರನ್ನು ಎಲ್‌ಎಸ್‌ಜಿ ಆಟಗಾರನಾಗಿ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಇದಕ್ಕೆ ರಾಹುಲ್‌ ಒಪ್ಪುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Story first published: Wednesday, October 23, 2024, 18:46 [IST]
Other articles published on Oct 23, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+