For Quick Alerts
ALLOW NOTIFICATIONS  
For Daily Alerts
 

ಟ್ರೆಡ್ ವಿಂಡೋ ಮೂಲಕ 3 ಪ್ಲೇಯರ್‌ ಟಾರ್ಗೆಟ್ ಮಾಡಲಿರುವ RCB

18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಮೂಲಕ 17 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿತು. ಆರ್‌ಸಿಬಿ ತನ್ನ ಗೆಲುವಿನ ಯಾತ್ರೆಯನ್ನು ಮುಂದುವರೆಸಲು ಮಾಸ್ಟರ್ ಪ್ಲ್ಯಾನ್ ಮಾಡಿಕೊಡಿದೆ. ಈ ವೇಳೆ ಆರ್‌ಸಿಬಿ 19ನೇ ಆವೃತ್ತಿಗೆ ಈಗಿನಿಂದಲೇ ತಯಾರಿ ನಡೆಸಿದೆ. ಈ ವೇಳೆ ಆರ್‌ಸಿಬಿ ಮ್ಯಾನೇಜ್ಮೆಂಟ್‌ ಟ್ರೆಡ್ ವಿಂಡೋ ಮೂಲಕ ಹಲವು ಆಟಗಾರರಿಗೆ ಟಾರ್ಗೆಟ್ ಮಾಡಲಿದೆ. ಆರ್‌ಸಿಬಿ ಯಾವೆಲ್ಲಾ ಆಟಗಾರರನ್ನು ಟಾರ್ಗೆಟ್ ಮಾಡಲಿದೆ ಎಂಬ ಬಗ್ಗೆ ವರದಿ ಇಲ್ಲಿದೆ.

ಆರ್‌ಸಿಬಿ ತಂಡದಲ್ಲಿ ಸದ್ಯ ಸ್ಟಾರ್ ಆಟಗಾರರ ದಂಡೇ ಇದೆ. ಆದರೆ ತನ್ನ ಬಳಗವನ್ನು ಮತ್ತಷ್ಟು ಬಲಿಷ್ಠ ಪಡಿಸಿಕೊಳ್ಳಲು ಆರ್‌ಸಿಬಿ ಮ್ಯಾನೇಜ್ಮೆಂಟ‌ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ. ಈ ಮೂಲಕ ವಿದೇಶಿ ಹಾಗೂ ದೇಶೀಯ ಆಟಗಾರರನ್ನು ಟ್ರೆಡ್ ವಿಂಡೋ ಮೂಲಕ ಟಾರ್ಗೆಟ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.

RCB Eyes Key Players for 19th Season After Maiden IPL Title Win

ಗ್ಲೇನ್ ಫಿಲಿಪ್ಸ್‌

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಧಮಾಕೆದಾರ ಪ್ರದರ್ಶನ ನೀಡಿದ ನ್ಯೂಜಿಲೆಂಡ್‌ನ ಗ್ಲೇನ್‌ ಫಿಲಿಪ್ಸ್‌ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಆದರೆ ಇವರಿಗೆ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಂದುಕೊಂಡಷ್ಟು ಆಡುವ ಅವಕಾಶಗಳು ಸಿಗಲಿಲ್ಲ. ಆದರೆ ಟೂರ್ನಿಯ ಮಧ್ಯೆದಲ್ಲಿ ಗಾಯಕ್ಕೆ ತುತ್ತಾದ ಗ್ಲೇನ್‌ ಫಿಲಿಪ್ಸ್‌ ಟೂರ್ನಿಯಿಂದಲೇ ಔಟ್ ಆದರು. ಇವರನ್ನು ಗುಜರಾತ್ ಟೈಟನ್ಸ್‌ ಬೆಂಚ್ ಕಾಯಿಸಿತು. ಹೀಗಾಗಿ ಇವರ ಅನುಭವ ಬಳಸಿಕೊಳ್ಳಲು ಆರ್‌ಸಿಬಿ ಟಾರ್ಗೆಟ್ ಮಾಡಲಿದೆ. ಇವರು ಈಗಾಗಲೇ 8 ಐಪಿಎಲ್‌ ಪಂದ್ಯಗಳನ್ನು ಆಡಿದ್ದು 256 ರನ್‌ ಸಿಡಿಸಿದ್ದಾರೆ. ಸದ್ಯ ಇವರು ಮೇಜರ್ ಲೀಗ್‌ ಕ್ರಿಕೆಟ್‌ನಲ್ಲಿ ಅಬ್ಬರಿಸುತ್ತಿದ್ದು ಎಲ್ಲರ ಗಮನ ಸೆಳೆದಿದ್ದಾರೆ.

ಮುಕೇಶ್ ಕುಮಾರ್

ಆರ್‌ಸಿಬಿ ತನ್ನ ತಂಡದ ಬೌಲಿಂಗ್ ವಿಭಾಗವನ್ನು ಬಲಪಡಿಸಿಕೊಳ್ಳಲು ಮತ್ತೊಬ್ಬ ಪ್ಲೇಯರ್‌ಗೆ ಗಾಳ ಬೀಸುವ ಸಾಧ್ಯತೆ ಇದೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕರಾರುವಕ್ ದಾಳಿ ನಡೆಸಿ ಅಬ್ಬರಿಸಿರುವ ಭರವಸೆಯ ಬೌಲರ್ ಮುಕೇಶ್ ಕುಮಾರ್ ಅವರ ಮೇಲೆ ಆರ್‌ಸಿಬಿ ಕಣ್ಣು ನೆಟ್ಟಿದೆ. ಇವರು ಬೌಲಿಂಗ್ ಆಕ್ಷನ್ ಚಿನ್ನಸ್ವಾಮಿ ಅಂಗಳಕ್ಕೆ ಹೊಂದಿಕೊಳ್ಳುವಂತಿದ್ದು, ಇವರು ತಂಡಕ್ಕೆ ಸೇರಿಸಿಕೊಳ್ಳುವ ಪ್ಲ್ಯಾನ್ ಆರ್‌ಸಿಬಿ ಮಾಡಿದೆ. ಇವರು ಈಗಾಗಲೇ 77 ಟಿ20 ಪಂದ್ಯಗಳನ್ನು ಆಡಿದ್ದು 83 ವಿಕೆಟ್‌ ಪಡೆದಿದ್ದಾರೆ.

ಅಭಿನವ್ ಮನೋಹರ್

ಕರ್ನಾಟಕ ತಂಡದ ಪರ ದೇಶೀಯ ಟೂರ್ನಿಗಳಲ್ಲಿ ಆಡುವ ಅಭಿನವ್ ಮನೋಹರ್ ಅವರನ್ನು ಐಪಿಎಲ್‌ ಮೆಗಾ ಹರಾಜಿನಲ್ಲಿ ಕೊಳ್ಳುವಲ್ಲಿ ಆರ್‌ಸಿಬಿ ವಿಫಲವಾಗಿತ್ತು. ಇವರಿಗೆ ಸನ್‌ ರೈಸರ್ಸ್‌ ಹೈದರಾಬಾದ್ ತಂಡ ಮಣೆ ಹಾಕಿತ್ತು. ಇವರು ಸಿಕ್ಕ ಅವಕಾಶವನ್ನು ಬಳಸಿಕೊಂಡು ಬ್ಯಾಟ್ ಮಾಡಿದ ಅಭಿನವ್ ಅಬ್ಬರಿಸಿದರು. ಇವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ. ಇವರು ತಂಡಕ್ಕೆ ಸೇರಿಕೊಂಡಿದ್ದರಿಂದ ಮಧ್ಯಮ ಕ್ರಮಾಂಕ ಬಲಾಢ್ಯಗೊಳ್ಳಲಿದೆ. ಅಲ್ಲದೆ ಸ್ಥಳೀಯ ಪ್ರತಿಭೆಗೆ ಅವಕಾಶ ನೀಡಿದಂತೆ ಆಗುತ್ತದೆ. ಆರ್‌ಸಿಬಿ ತಂಡದ ಪರ ಯಾರು ಆಡಲಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ.

Story first published: Friday, July 4, 2025, 10:10 [IST]
Other articles published on Jul 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+