Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KL Rahul vs Rishabh Pant: ಈ ಇಬ್ಬರಲ್ಲಿ ಆರ್‌ಸಿಬಿಗೆ ಯಾರು ಹಿತವರು?

ಅಭಿಮಾನಿಗಳು ಯಾವ ಲೆಕ್ಕಾಚಾರವನ್ನು ಹಾಕಿದ್ದರೋ, ಅದೇ ಲೆಕ್ಕಾಚಾರವನ್ನು ಐಪಿಎಲ್‌ ಮಾಲೀಕರು ಹಾಕಿದಂತೆ ಕಾಣುತ್ತಿದೆ. ಈ ಬಾರಿ ಅತಿ ಹೆಚ್ಚು ನಾಯಕರು ಹರಾಜು ಅಂಗಳ ಪ್ರವೇಶಿಸಬಹುದು ಎಂಬ ಲೆಕ್ಕಾಚಾರ ನಿಜವಾಗಿದೆ. ಫ್ಯಾನ್ಸ್‌ ರಿಷಭ್‌ ಪಂತ್ ಡೆಲ್ಲಿ ಬಿಡಬಹುದು ಎಂದು ಮೊದಲೇ ಅಂದಾಜಿಸಿದ್ದರು. ಎಲ್‌ಎಸ್‌ಜಿಯಲ್ಲಿ ಕೆಎಲ್‌ ರಾಹುಲ್‌ ಇರುವುದು ಡೌಟ್‌ ಎಂದೇ ಹೇಳುತ್ತಿದ್ದರು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ಈ ಇಬ್ಬರೂ ಸ್ಟಾರ್‌ಗಳು ಹರಾಜು ಅಂಗಳ ಪ್ರವೇಶಿಸಿದ್ದಾರೆ.

ಸ್ಟಾರ್‌ ಗಿರಿಯನ್ನೇ ಹೊಂದಿರುವ ಇಬ್ಬರೂ ಆಟಗಾರರು ಐಪಿಎಲ್‌ ಹರಾಜು ಅಂಗಳದಲ್ಲಿ ತಮ್ಮದೇ ಛಾಪು ಮೂಡಿಸಲು ಸಜ್ಜಾಗಿದ್ದಾರೆ. ಈ ಇಬ್ಬರೂ ಆಟಗಾರರು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದಾರೆ. ಈ ಇಬ್ಬರು ಆಟಗಾರರು ತಮ್ಮ ತಮ್ಮ ತಂಡದ ಪರ ಐಪಿಎಲ್‌ನಲ್ಲಿ ನಾಯಕತ್ವನ್ನು ಮಾಡಿದವರೇ. ಈ ಇಬ್ಬರೂ ಆಟಗಾರರನ್ನು ಕೊಳ್ಳಲು ಆರ್‌ಸಿಬಿ ಸಹ ಮನಸ್ಸು ಮಾಡಲಿದೆ.

RCB Eyes KL Rahul and Rishabh Pant for Captaincy IPL Auction Anticipates Big Moves

ಆರ್‌ಸಿಬಿ ಸಹ ತನ್ನ ನಾಯಕ ಫಾಫ್‌ ಡುಪ್ಲೇಸಿಸ್‌ ಅವರನ್ನು ಕೈ ಬಿಟ್ಟಿದೆ. ಹೀಗಾಗಿ ಆರ್‌ಸಿಬಿ ಒಬ್ಬ ಬೆಸ್ಟ್‌ ಕ್ಯಾಪ್ಟನ್‌ ಹುಡುಕಾಟದಲ್ಲಿದೆ. ಈ ನಿಟ್ಟಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದೆ ಬರುವ ಎರಡು ಹೆಸರುಗಳು ರಿಷಭ್ ಪಂತ್‌ ಹಾಗೂ ಕೆಎಲ್‌ ರಾಹುಲ್‌..

ರಾಹುಲ್, ಪಂತ್ ಇಬ್ಬರೂ ಆಟಗಾರರು ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿ. ಯಾವುದೇ ಸನ್ನಿವೇಶವಿದ್ದರೂ ಮನಮೋಹಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್ಸ್‌. ಅಂದಹಾಗೆ ಐಪಿಎಲ್‌ ಫ್ರಾಂಚೈಸಿಗಳು ನೋಡುವ ಬ್ರ್ಯಾಂಡ್‌ ವ್ಯಾಲ್ಯೂ ಸಹ ಇವರಿಗಿದೆ. ಈ ಇಬ್ಬರೂ ಆಟಗಾರರು ದೇಶದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.

ದಿನೇಶ್‌ ಕಾರ್ತಿಕ್ ಅವರಿಂದ ತೆರವಾದ ಸ್ಥಾನಕ್ಕೆ ಆರ್‌ಸಿಬಿ ಬೆಸ್ಟ್‌ ವಿಕೆಟ್‌ ಕೀಪರ್‌, ಬ್ಯಾಟರ್‌ ಹುಡುಕಾಟ ನಡೆಸಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಇಬ್ಬರ ಮೇಲೂ ಬಾಜಿ ಕಟ್ಟುವ ಸಾಧ್ಯತೆ ಹೆಚ್ಚಿದೆ. ಈ ಇಬ್ಬರಲ್ಲಿ ಯಾರು ಬಂದರೂ ಆರ್‌ಸಿಬಿ ತಂಡದ ಬಲ ಹೆಚ್ಚಲಿದೆ.

RCB Eyes KL Rahul and Rishabh Pant for Captaincy IPL Auction Anticipates Big Moves

ರಾಹುಲ್‌ ಟಾಪ್‌ ಆರ್ಡರ್‌ಗೆ ಬಲ

ಕೆಎಲ್‌ ರಾಹುಲ್‌ ಟಾಪ್‌ ಆರ್ಡರ್‌ ಬ್ಯಾಟರ್. ವಿರಾಟ್‌ ಕೊಹ್ಲಿ ಹಾಗೂ ಇವರ ಕೆಮೆಸ್ಟ್ರಿ ಸಿಕ್ಕಾಪಟ್ಟಿ ಚೆನ್ನಾಗಿದೆ. ಅಲ್ಲದೆ ಇವರೂ ಸಹ ನಾಯಕತ್ವದ ಗುಣಗಳನ್ನು ಹೊಂದಿರುವ ಪ್ಲೇಯರ್‌. ಕರ್ನಾಟಕ ಮೂಲದ ಆಟಗಾರ ಆಗಿದ್ದರಿಂದ ಅಭಿಮಾನಿಗಳು ರಾಹುಲ್‌ ಆರ್‌ಸಿಬಿಗೆ ಬರಲಿ ಎಂದು ಅಭಿಯಾನ ಆರಂಭಿಸಿದ್ದಾರೆ. ಇವರು ರನ್‌ ವೇಗವನ್ನು ಸ್ಥಿರವಾಗಿ ಇಡಬಲ್ಲ ಪ್ಲೇಯರ್. ವಿಕೆಟ್ ಕೀಪಿಂಗ್ ಮಾಡಿ ಸಹ ಸೈ ಎನಿಸಿಕೊಂಡಿದ್ದಾರೆ. ಹೀಗಾಗಿ ಇವರು ಸಹ ಆರ್‌ಸಿಬಿಯ ಫಸ್ಟ್‌ ಚಾಯ್ಸ್‌ ಪ್ಲೇಯರ್‌.

ರಿಷಭ್‌ ಪಂತ್‌

ದಿನೇಶ್‌ ಕಾರ್ತಿಕ್‌ ಸ್ಥಾನವನ್ನು ತುಂಬ ಬಲ್ಲ ಇನ್ನೊಬ್ಬ ಪ್ಲೇಯರ್‌ ರಿಷಭ್‌ ಪಂತ್. ವಿಕೆಟ್‌ ಕೀಪಿಂಗ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬಲ್ಲ ಕ್ಷಮತೆಯನ್ನು ಹೊಂದಿರುವ ಪ್ಲೇಯರ್‌. ಬಿಗ್‌ ಹಿಟ್‌ಗಳನ್ನು ಸರಾಗವಾಗಿ ಬಾರಿಸುವ ಕ್ಷಮತೆಯನ್ನು ಹೊಂದಿದ್ದಾರೆ. ಒನ್ ಹ್ಯಾಂಡ್‌ ಶಾಟ್‌ ಸಖತ್ ಫೇಮಸ್. ಇವರು ಸಹ ಆರ್‌ಸಿಬಿ ತಂಡಕ್ಕೆ ಬಂದಲ್ಲಿ, ಫಿನಿಷರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಆರ್‌ಸಿಬಿ ಈ ಬಾರಿಯ ಹರಾಜಿನಲ್ಲಿ ಈ ಇಬ್ಬರೂ ಆಟಗಾರರಿಗೆ ಬಾಜಿ ಕಟ್ಟುವುದಂತೂ ಫಿಕ್ಸ್‌. ಮುಂದಿನ ಆವೃತ್ತಿಯಲ್ಲಿ ಆರ್‌ಸಿಬಿ ಯಾರ ನಾಯಕತ್ವದಲ್ಲಿ ಆಡಲಿದೆ ಎಂಬುದು ಇನ್ನೇನು ಕೆಲವೇ ದಿನಗಳಲ್ಲಿ ತಿಳಿಯಲಿದೆ.

Story first published: Saturday, November 2, 2024, 8:45 [IST]
Other articles published on Nov 2, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+