Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ ಮಾಲೀಕರ ಚಿತ್ತ ಕದ್ದ ಸ್ಟಾರ್ಸ್‌: ಬೈ 1 ಗೆಟ್‌ 2 ಫ್ರೀ...

ಐಪಿಎಲ್‌ ರಿಟೇನ್ಷನ್‌ ಲೀಸ್ಟ್‌ ಅನೌನ್ಸ್‌ ಆಗಿದ್ದೇ ತಡ ಹೊಸ ಉತ್ಸಾಹ ಮನೆ ಮಾಡಿದೆ. ಬೇರೆ ತಂಡಗಳು ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಒಮ್ಮೆ ನೋಡಿ ಬೇರೆ ತಂಡಗಳು ಸಮಾಧಾನದ ನಿಟ್ಟುಸಿರು ಬಿಡುತ್ತಿವೆ. ಕಾರಣ ತಮಗೆ ಬೇಕಿದ್ದ ಆಟಗಾರರನ್ನು ಆ ತಂಡಗಳು ಬಿಟ್ಟಿವೆ ಎಂಬ ಸಮಾಧಾನ. ಅಸಲಿಗೆ ಅನ್‌ಕ್ಯಾಪ್ಡ್‌ ಪ್ಲೇಯರ್‌ಗಳು, ಕೆಲವು ಕ್ಯಾಪ್ಡ್‌ ಪ್ಲೇಯರ್‌ಗಳನ್ನು ಐಪಿಎಲ್ ಮಾಲೀಕರು ಬಿಡುವುದು ಸಹಜ. ಆದರೆ ಇವರನ್ನೇ ಬಿಟ್ಟಿದ್ದಾರೆ ಅಂದರೆ ಹಲವು ಪ್ರಶ್ನೆಗಳು ಮೂಡುತ್ತವೆ.

ಅಸಲಿಗೆ ಈ ಮೂವರಲ್ಲಿ ಇಬ್ಬರು, ಈಗಾಗಲೇ ಐಪಿಎಲ್‌ ಫ್ರಾಂಚೈಸಿ ಪರ ನಾಯಕತ್ವ ಮಾಡಿ ಸೈ ಎನಿಸಿಕೊಂಡಿದ್ದರು. ಇವರ ಬ್ಯಾಟಿಂಗ್ ಹಾಗೂ ವಿಕೆಟ್‌ ಕೀಪಿಂಗ್‌ನಲ್ಲೂ ಅಮೋಘ ಪ್ರದರ್ಶನ ನೀಡಿದವರು. ಇಷ್ಟೇ ಅಲ್ಲ ಒಳ್ಳೆಯ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ಬಂದವರು. ಈ ಪಟ್ಟಿಯಲ್ಲಿರುವ ಇನ್ನೋಬ್ಬ ಪ್ಲೇಯರ್ ಸದ್ಯ ರಣಜಿ ಟೂರ್ನಿಯಲ್ಲಿ ತಾನು ಪ್ರತಿನಿಧಿಸುವ ತಂಡವನ್ನು ಮುನ್ನಡೆಸುತ್ತಿದ್ದಾರೆ.

RCB Eyes KL Rahul Rishabh Pant and Ishan Kishan in IPL Auction for a Wicketkeeping Power Trio

ಬೈ 1 ಗೆಟ್‌ 2 ಫ್ರೀ...

ಅಂದಹಾಗೆ ಈ ಆಟಗಾರರು ಬೇರೆ ಯಾರು ಅಲ್ಲ, ಎಲ್‌ಎಸ್‌ಜಿ ತಂಡದಿಂದ ಕೈ ಬಿಟ್ಟಿರುವ ಕೆಎಲ್ ರಾಹುಲ್, ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕೈ ಬಿಟ್ಟ ರಿಷಭ್ ಪಂತ್, ಮುಂಬೈ ಇಂಡಿಯನ್ಸ್ ಐಪಿಎಲ್ ಹರಾಜು ಅಂಗಳಕ್ಕೆ ದಬ್ಬಿದ ಇಶಾನ್‌ ಕಿಶನ್. ಈ ಮೂವರು ಆಟಗಾರರು ತಮ್ಮಲ್ಲಿರುವ ಕ್ಷಮತೆಯನ್ನು ಈಗಾಗಲೇ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ. ಹೀಗಾಗಿ ಇವರನ್ನು ಕೊಳ್ಳಲು ಐಪಿಎಲ್‌ ಫ್ರಾಂಚೈಸಿಗಳು ತಾಮುಂದು ನಾ ಮುಂದು ಎನ್ನುತ್ತಾರೆ.

ಈ ಮೂವರು ಆಟಗಾರರು ಸ್ಟಾರ್ ಬ್ಯಾಟರ್‌ಗಳೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿದವರೇ. ಮೂವರು ವಿಕೆಟ್‌ ಹಿಂದೆ ಚೆನ್ನಾಗಿ ವಿಕೆಟ್‌ ಕೀಪಿಂಗ್ ಮಾಡುವ ಕಲಾಕಾರರು. ತಂಡದ ಬ್ಯಾಟಿಂಗ್‌ಗೆ ಅನುಗುಣವಾಗಿ ಬ್ಯಾಟ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಪ್ಲೇಯರ್ಸ್‌. ಇದರಲ್ಲಿ ಕಾಣುವ ರಾಹುಲ್‌ ಹಾಗೂ ಇಶಾನ್ ಕಿಶನ್‌ ಟಾಪ್‌ ಆರ್ಡರ್‌ ಬ್ಯಾಟರ್ಸ್‌. ಇವರನ್ನು ಕೊಳ್ಳಲು ಆರ್‌ಸಿಬಿ ಸೇರಿದಂತೆ ಹಲವು ತಂಡಗಳು ಬಾಜಿ ಕಟ್ಟಲಿವೆ. ಇನ್ನು ರಿಷಭ್ ಪಂತ್‌ ಮಿಡ್ಲ್ ಆರ್ಡರ್ ಬ್ಯಾಟರ್ ಆಗಿದ್ದರಿಂದ ಇವರಿಗೂ ಹಣದ ಹೊಳೆ ಹರಿಯಲಿದೆ.

ಈ ಮೂವರು ಆಟಗಾರರನ್ನು ಆರ್‌ಸಿಬಿ ಟಾರ್ಗೆಟ್‌ ಮಾಡಲಿದೆ. ಕಾರಣ ಕಳೆದ ಆವೃತ್ತಿಯ ಐಪಿಎಲ್‌ ದಿನೇಶ್ ಕಾರ್ತಿಕ್ ನಿವೃತ್ತರಾದ ಬಳಿಕ ಆರ್‌ಸಿಬಿ ಸಹ ಉತ್ತಮ ವಿಕೆಟ್‌ ಕೀಪರ್, ಬ್ಯಾಟರ್‌ನ್ನು ನೋಡುತ್ತಿದೆ. ರಾಹುಲ್‌ ಹಾಗೂ ಇಶಾನ್‌ ಟಾಪ್‌ ಆರ್ಡರ್‌ನಲ್ಲಿ ಕಾಣಿಸಿಕೊಂಡರೆ, ರಿಷಭ್‌ ಪಂತ್ ಫಿನಿಷರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆರ್‌ಸಿಬಿ ಈ ಬಾರಿ ಹರಾಜಿನಲ್ಲಿ ಈ ಮೂವರು ಆಟಗಾರರ ಹೆಸರುಗಳು ಬಂದಾಗ ಹಣದ ಹೊಳೆಯನ್ನು ಹರಿಸುವುದು ಫಿಕ್ಸ್ ಎಂದು ಹೇಳಲಾಗುತ್ತಿದೆ.

ಆರ್‌ಸಿಬಿ ತಂಡಕ್ಕೆ ಈಗ ಟಾಪ್‌ ಆರ್ಡರ್‌ ಬ್ಯಾಟರ್‌ ಒಬ್ಬ ಬೇಕೆ ಬೇಕು. ಇನ್ನು ಮಿಡ್ಲ್ ಆರ್ಡರ್‌ಗೂ ಒಬ್ಬ ಸ್ಥಿರವಾಗಿ ಆಡುವ ಆಟಗಾರ ಬೇಕೇ ಬೇಕು. ಹೀಗಾಗಿ ಈ ಮೂವರು ಆಟಗಾರರಲ್ಲಿ ಒಬ್ಬರಿಗೆ ಮಣೆ ಹಾಕುವ ಚಾನ್ಸ್‌ ಹೆಚ್ಚಾಗಿ ಕಾಣುತ್ತಿದೆ. ಇದರಿಂದಲೇ ಆರ್‌ಸಿಬಿ ಸೇರಿದಂತೆ ಹಲವು ತಂಡಗಳು ಒಂದೇ ಕಲ್ಲಿಗೆ ಮೂರು ಹಕ್ಕಿ ಬೀಳಿಸಲು ಪ್ಲ್ಯಾನ್ ಮಾಡಿಕೊಂಡಿವೆ.

Story first published: Friday, November 1, 2024, 8:30 [IST]
Other articles published on Nov 1, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+