RCB vs LSG IPL 2025: ಪಂದ್ಯ ಗೆದ್ರೆ ಆರ್‌ಸಿಬಿ ಪ್ಲೇ ಆಫ್‌ಗೆ: ಎಲ್‌ಎಸ್‌ಜಿಗೆ ಮಾಡು ಇಲ್ಲವೇ ಮಡಿ ಪಂದ್ಯ
ಲಕ್ನೋನ ಏಕಾನ ಅಂಗಳದಲ್ಲಿ 18ನೇ ಆವೃತ್ತಿಯ ಐಪಿಎಲ್‌ನ 59ನೇ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆಯುವ ಆಸೆಯನ್ನು ಬೆಂಗಳೂರು ಹೊಂದಿದೆ. ಇನ್ನು ಲಕ್ನೋ ಈ ಪಂದ್ಯದಲ್ಲಿ ಜಯ ಸಾಧಿಸಿ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಇರಾದೆಯನ್ನು ಹೊಂದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಮೋಘ ಫಾರ್ಮ್‌ನಲ್ಲಿದೆ. ಈ ವೇಳೆ ಆಡಿದ 11 ಪಂದ್ಯಗಳಲ್ಲಿ 8 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದು, 16 ಅಂಕಗಳನ್ನು ಕಲೆ ಹಾಕಿದೆ. ಗುರುವಾರ ನಡೆಯುವ ಪಂದ್ಯವನ್ನು ಗೆದ್ರೆ ಆರ್‌ಸಿಬಿ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಬಹುದಾಗಿದೆ. ಇನ್ನು ಲಕ್ನೋ ತಂಡ ಆಡಿದ 11 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಸೋಲು ಕಂಡಿದ್ದು, 10 ಅಂಕಗಳನ್ನು ಕಲೆ ಹಾಕಿದೆ. ಎಲ್‌ಎಸ್‌ಜಿ ತಂಡಕ್ಕೆ ಮುಂದಿನ ಮೂರು ಪಂದ್ಯಗಳಲ್ಲಿ ಜಯ ಸಾಧಿಸುವುದು ಅನಿವಾರ್ಯ. ಅಂದಾಗ ಮಾತ್ರ ಪ್ಲೇ ಆಫ್‌ಗೆ ಪ್ರವೇಶ ಪಡೆಯುವ ಕನಸು ನನಸಾಗುತ್ತದೆ.

ಈ ಮೈದಾನದಲ್ಲಿ ಈಗಾಗಲೇ 19 ಐಪಿಎಲ್ ಪಂದ್ಯಗಳು ನಡೆದಿವೆ. ಈ ವೇಳೆ ಮೊದಲ ಬ್ಯಾಟ್ ಮಾಡಿದ ತಂಡ 8 ಬಾರಿ ಹಾಗೂ ಎರಡನೇ ಬಾರಿ ಬ್ಯಾಟ್ ಮಾಡಿದ ತಂಡ 12 ಬಾರಿ ಪಂದ್ಯ ಗೆದಿದೆ. ಆರ್‌ಸಿಬಿ, ಎಲ್‌ಎಸ್‌ಜಿ ವಿರುದ್ಧದ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡ ಎಂದು ಹೇಳಲಾಗುತ್ತಿದೆ.
ಸಂಘಟಿತ ಆಟವೇ ಬಲ
ಈ ಬಾರಿ ಆರ್‌ಸಿಬಿ ಸಂಘಟಿತ ಆಟದ ಮೇಲೆ ನಂಬಿಕೆಯನ್ನು ಇಟ್ಟುಕೊಂಡಿದೆ. ಟಾಪ್ ಆರ್ಡರ್ ಬ್ಯಾಟರ್‌ಗಳು ತಮ್ಮ ಕೆಲಸವನ್ನು ಮಾಡುತ್ತಿದ್ದರೆ, ಬೌಲರ್‌ಗಳು ತಮ್ಮ ಕೆಲಸವನ್ನು ಅರಿತುಕೊಂಡು ಬಿಗುವಿನ ದಾಳಿ ನಡೆಸುತ್ತಿದ್ದಾರೆ. ಈ ಬಾರಿ ಆರ್‌ಸಿಬಿ ಈ ಪ್ರದರ್ಶನಕ್ಕೆ ಸಂಘಟಿತ ಆಟವೇ ಕಾರಣವಾಗಿದೆ. ಫಿಲ್ ಸಾಲ್ಟ್ ಈ ಪಂದ್ಯಕ್ಕೆ ಲಭ್ಯರಿರುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ. ಇನ್ನು ವಿರಾಟ್ ಕೊಹ್ಲಿ, ಉತ್ತಮ ಲಯದಲ್ಲಿದ್ದಾರೆ. ಫಿಲ್ ಸಾಲ್ಟ್ ಅಲಭ್ಯರಾದಲ್ಲಿ ಜಾಕಬ್ ಬೆತೆಲ್ ಇನಿಂಗ್ಸ್ ಆರಂಭಿಸಬಹುದು. ಇವರು ಸಹ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು.

ಮಧ್ಯಮ ಕ್ರಮಾಂಕದಲ್ಲಿ ಮಯಾಂಕ್ ಅಗರ್‌ವಾಲ್ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇನ್ನು ರಜತ್ ಪಟಿದಾರ್, ಜೀತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಟೀಮ್ ಡೇವಿಡ್, ರೋಮಾರಿಯಾ ಶೆಫರ್ಡ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ಆರ್‌ಸಿಬಿ ತಂಡದ ವೇಗದ ಬೌಲಿಂಗ್ ನೊಗವನ್ನು ಭುವನೇಶ್ವರ್ ಕುಮಾರ್, ಯಶ್ ದಯಾಳ್ ಹೊತ್ತುಕೊಂಡಿದ್ದಾರೆ. ಇನ್ನು ಜೋಶ್ ಹ್ಯಾಜಲ್‌ವುಡ್ ಫಿಟ್ ಆಗಿದ್ದರೆ, ಈ ಪಂದ್ಯದಲ್ಲಿ ಆಡುತ್ತಾರೆ. ಇಲ್ಲದೇ ಇದ್ದಲ್ಲಿ ಲುಂಗಿ ಎನ್‌ಗಿಡಿ ಮೈದಾನ ಪ್ರವೇಶಿಸಲಿದ್ದಾರೆ. ಸ್ಪಿನ್ ಬೌಲರ್‌ಗಳಾಗಿ ಕೃನಾಲ್ ಹಾಗೂ ಸುಯೇಶ್ ಶರ್ಮಾ ಶಿಸ್ತು ಬದ್ಧ ದಾಳಿ ಸಂಘಟಿಸಬೇಕಿದೆ.
ಗೆಲುವೊಂದೆ ಟಾರ್ಗೆಟ್
ಆರ್‌ಸಿಬಿ ವಿರುದ್ಧ ಲಕ್ನೋ ಗೆಲುವಿನ ಕನಸು ಕಾಣುತ್ತಿದೆ. ಈ ಪಂದ್ಯದಲ್ಲಿ ಎಲ್‌ಎಸ್‌ಜಿ ಜಯ ಸಾಧಿಸ ಬೇಕಾದಲ್ಲಿ ಟಾಪ್ ಆರ್ಡರ್ ಬ್ಯಾಟರ್‌ಗಳಾದ ಐಡೇನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್ ದೊಡ್ಡ ಇನಿಂಗ್ಸ್ ಕಟ್ಟಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಆಯುಷ್ ಬದೋನಿ ಭರವಸೆ ಮೂಡಿಸಿದ್ದಾರೆ. ಇನ್ನು ನಾಯಕ ತಮ್ಮ ಜವಾಬ್ದಾರಿಯನ್ನು ಅರಿತು ಆಟವಾಡಬೇಕಿದೆ. ಇನ್ನು ವೇಗದ ಬೌಲರ್‌ಗಳು ಶಿಸ್ತು ಬದ್ಧ ದಾಳಿ ನಿರ್ವಹಿಸಬೇಕಿದೆ. ಸ್ಪಿನ್ ಬೌಲಿಂಗ್‌ನಲ್ಲಿ ದಿಗ್ವೇಶ್ ರಾಠಿ, ರವಿ ಬಿಷ್ಣೋಯಿ ಪಿರ್ಕಿ ಮ್ಯಾಜಿಕ್ ನಡೆದರೆ ಗೆಲುವಿನ ಕನಸು ನನಸಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications