ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಸಕ್ತ ವರ್ಷ ಭರ್ಜರಿ ಫಾರ್ಮ್‌ನಲ್ಲಿದೆ. ತವರಿನ ಆಚೆಯ ಎಲ್ಲ ಪಂದ್ಯಗಳನ್ನು ಗೆದ್ದು ಇತಿಹಾಸ ನಿರ್ಮಿಸಿರುವ ಆರ್‌ಸಿಬಿ ಅಬ್ಬರಿಸುತ್ತಿದೆ. ಈಗ ಆರ್‌ಸಿಬಿ ಅಗ್ರ 2 ಸ್ಥಾನದ ಮೇಲೆ ಕಣ್ಣು ನೆಟ್ಟಿದೆ. ಈ ಆಸೆ ನನಸಾಗಬೇಕಾದಲ್ಲಿ ಆರ್‌ಸಿಬಿ ಏನೆಲ್ಲಾ ಮಾಡಬೇಕಾಗುತ್ತದೆ. ಮೊದಲೆರೆಡು ಸ್ಥಾನಗಳಿಗೆ ತಲುಪಿದ್ರೆ ಏನೆಲ್ಲಾ ಲಾಭಗಳು ಆಗುತ್ತವೆ ಎಂಬುದರ ಬಗ್ಗೆ ವರದಿ ಇಲ್ಲಿದೆ.
ಆರ್‌ಸಿಬಿ ಈ ಬಾರಿಯ ಐಪಿಎಲ್‌ನಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆಯುತ್ತಿದೆ. ಆರ್‌ಸಿಬಿ ಸದ್ಯ ಆಡಿರುವ 12 ಪಂದ್ಯಗಳಲ್ಲಿ 8 ಜಯ, 3 ಸೋಲು ಕಂಡಿದ್ದು, 17 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರ್‌ಸಿಬಿ ಈಗಾಗಲೇ ಪ್ಲೇ ಆಫ್ ಪ್ರವೇಶಿಸಿದ್ದು, ಟಾಪ್ 2 ಸ್ಲಾಟ್ ಮೇಲೆ ರಜತ್ ಪಾಟಿದಾರ್ ಪಡೆ ಕಣ್ಣು ನೆಟ್ಟಿದೆ. ಆರ್‌ಸಿಬಿಗೆ ಈ ಚಾನ್ಸ್ ಸಹ ಹೆಚ್ಚಿದೆ. ಆರ್‌ಸಿಬಿ ಇನ್ನು ಲೀಗ್ ಹಂತದಲ್ಲಿ ಎರಡು ಪಂದ್ಯಗಳನ್ನು ಆಡಲಿದೆ.

ಆರ್‌ಸಿಬಿ ಲೀಗ್ ಹಂತದಲ್ಲಿ ಇನ್ನು ಎರಡು ಪಂದ್ಯಗಳನ್ನು ಆಡಲಿದೆ. ಈ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದಿದ್ದೇ ಆದಲ್ಲಿ 21 ಅಂಕಗಳನ್ನು ಕಲೆ ಹಾಕಿ ಸುಲಭವಾಗಿ ಟಾಪ್ 2 ಸ್ಲಾಟ್‌ಗೆ ತಲುಪಬಹುದಾಗಿದೆ. ಆರ್‌ಸಿಬಿ ಮುಂದಿನ ಪಂದ್ಯಗಳಲ್ಲಿ ಈಗಾಗಲೇ ಪ್ಲೇ ಆಫ್‌ರೇಸ್‌ನಿಂದ ಹೊರ ಬಿದ್ದಿರುವ ಎಸ್‌ಆರ್‌ಎಚ್ ಹಾಗೂ ಎಲ್‌ಎಸ್‌ಜಿ ತಂಡಗಳ ವಿರುದ್ಧ ಕಾದಾಟ ನಡೆಸಲಿವೆ. ಈ ಎರಡೂ ಪಂದ್ಯಗಳನ್ನು ಗೆಲ್ಲದೇ ಒಂದೇ ಪಂದ್ಯವನ್ನು ಗೆದ್ದರೆ ಆರ್‌ಸಿಬಿ ಪಂಜಾಬ್ ಫಲಿತಾಂಶವನ್ನು ನೋಡಬೇಕಾಗುತ್ತದೆ.
ಒಂದು ವೇಳೆ ಆರ್‌ಸಿಬಿ ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದು, ಒಂದು ಪಂದ್ಯ ಸೋತರೆ 19 ಅಂಕಗಳನ್ನು ಕಲೆ ಹಾಕಲಿದೆ. ಆದರೆ ಪಂಜಾಬ್ ತನ್ನ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದಲ್ಲಿ ನೇರ ಅಗ್ರ 2ನೇ ಸ್ಥಾನಕ್ಕೆ ಪಡೆಯಬಹುದು. ಇಲ್ಲದೇ ಇದ್ದರೆ ಒಂದು ಪಂದ್ಯ ಗೆದ್ದರೂ ಅಗ್ರ ಎರಡು ಸ್ಥಾನ ಪಡೆಯುವ ಕನಸಿಗೆ ಪೆಟ್ಟು ಬೀಳಲಿದೆ. ಪಂಜಾಬ್ ಒಂದು ಪಂದ್ಯವನ್ನು ಗೆದ್ದು ರನ್ ರೇಟ್ ಸುಧಾರಿಸಿಕೊಂಡಲ್ಲಿ ಟಾಪ್ 2 ಸ್ಥಾನ ಪಡೆಯಬಹುದು.

ಪಂಜಾಬ್ ತನ್ನ ಮುಂದಿನ ಎರಡೂ ಪಂದ್ಯಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಈಗಾಗಲೇ ಮುಂಬೈ ಪ್ಲೇ ಆಫ್‌ಗೆ ಪ್ರವೇಶಿಸಿದೆ. ಹೀಗಾಗಿ ಪಂಜಾಬ್ ವಿರುದ್ಧ ಪಂದ್ಯ ಮುಂಬೈಗೆ ಮಹತ್ವದಾಗಿದೆ. ಈ ಪಂದ್ಯದಲ್ಲಿ ಮುಂಬೈ ಜಯ ಸಾಧಿಸಿದರೆ 18 ಅಂಕಗಳನ್ನು ಕಲೆ ಹಾಕುತ್ತದೆ. ಮತ್ತೆ ಪಂಜಾಬ್ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ದೊಡ್ಡ ಮೊತ್ತದಿಂದ ಗೆಲ್ಲಬೇಕಾಗುತ್ತದೆ.
ಆರ್‌ಸಿಬಿ ತನ್ನ ಲೀಗ್ ಹಂತದ 13ನೇ ಪಂದ್ಯವನ್ನು ಶುಕ್ರವಾರ ಲಕ್ನೋನಲ್ಲಿ ಎಸ್‌ಆರ್‌ಎಚ್ ವಿರುದ್ಧ ಆಡಲಿದೆ. ಆರ್‌ಸಿಬಿ ತವರಿನ ಪಂದ್ಯ ಲಕ್ನೋಗೆ ಶಿಫ್ಟ್ ಆಗಿದೆ. ಇದಕ್ಕೆ ಕಾರಣ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ. ಶುಕ್ರವಾರದ ಪಂದ್ಯಕ್ಕೂ ಮಳೆ ಕಾಟ ನೀಡುವ ಸಾಧ್ಯತೆ ಇದ್ದಿದ್ದರಿಂದ ಪಂದ್ಯದ ಸ್ಥಳವನ್ನೇ ಬದಲಿಸಲಾಗಿದೆ.