RCB vs LSG: ಬೆಂಗಳೂರು ಗೆದ್ದರಷ್ಟೇ ಕ್ವಾಲಿಫೈಯರ್‌ಗೆ ಅರ್ಹತೆ: ಪ್ರತಿಷ್ಠೆಗಾಗಿ ಲಕ್ನೋ ಹೋರಾಟ
ಇಂಡಿಯನ್ ಪ್ರೀಮಿಯರ್ ಲೀಗ್‌ನ ಲೀಗ್ ಹಂತದ ಕೊನೆಯ ಪಂದ್ಯ ಮಂಗಳವಾರ ಲಕ್ನೋನ ಏಕಾನ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕಾದಾಟ ನಡೆಸಲಿದೆ. ಎಲ್‌ಎಸ್‌ಜಿ ಈ ಪಂದ್ಯವನ್ನು ಪ್ರತಿಷ್ಠೆಗಾಗಿ ಆಡಲಿದೆ. ಇನ್ನು ಆರ್‌ಸಿಬಿ ಈ ಪಂದ್ಯದಲ್ಲಿ ಗೆದ್ದು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಡ್ತಿ ಪಡೆಯುವ ಪ್ಲ್ಯಾನ್ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಲಿದೆ.
ಎಲ್‌ಎಸ್‌ಜಿ ಹಾಗೂ ಆರ್‌ಸಿಬಿ ತಂಡದಲ್ಲಿ ಸ್ಟಾರ್ ಆಟಗಾರರು ಇದ್ದಾರೆ. ಮಂಗಳವಾರ ನಡೆಯುವ ಪಂದ್ಯದಲ್ಲಿ ಗೆಲುವು ಸಾಧಿಸಿ ಇತಿಹಾಸ ಬರೆಯುವ ಕನಸಿನಲ್ಲಿ ಆರ್‌ಸಿಬಿ ಇದೆ. ಈ ಮೂಲಕ ಲೀಗ್ ಹಂತದ ಏಳು ಪಂದ್ಯಗಳನ್ನು ತವರಿನಾಚೆ ಗೆದ್ದ ದಾಖಲೆಯನ್ನು ಬರೆಯಲಿದೆ. ಎಲ್‌ಎಸ್‌ಜಿ ಪ್ರತಿಷ್ಠೆಗಾಗಿ ಪಂದ್ಯವನ್ನು ಆಡಲಿದೆ. ಈ ಮೈದಾನದಲ್ಲಿ ಪಿಚ್ ಬ್ಯಾಟರ್‌ಗಳಿಗೆ ಸಹಾಯ ನೀಡಲಿದೆ. ಈ ಪಂದ್ಯದಲ್ಲಿ ಬ್ಯಾಟರ್‌ಗಳು ಅಬ್ಬರಿಸಬಲ್ಲರು. ಆರಂಭದಲ್ಲಿ ಈ ಪಿಚ್‌ನಲ್ಲಿ ಬ್ಯಾಟರ್‌ಗಳು ಸಹ ಆರ್ಭಟಿಸಬಹುದಾಗಿದೆ.

ವಿರಾಟ್ ಆಕರ್ಷಣೆ
ಆರ್‌ಸಿಬಿ ತಂಡದ ಪರ ಆರಂಭಿಕರಾಗಿ ಕಾಣಿಸಿಕೊಳ್ಳುವ ವಿರಾಟ್ ಕೊಹ್ಲಿ ಭರವಸೆ ಮೂಡಿಸಿದ್ದಾರೆ. ಇವರು ಈ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟುವ ವಿಶ್ವಾಸವನ್ನು ಮೂಡಿಸಿದ್ದಾರೆ. ಇವರಿಗೆ ಫಿಲ್ ಸಾಲ್ಟ್ ಉತ್ತಮ ಸಾಥ್ ನೀಡಬಲ್ಲರು. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 24 ರನ್ ಬಾರಿಸಿದ್ದೇ ಆದಲ್ಲಿ ಆರ್‌ಸಿಬಿ ಪರ 9 ಸಾವಿರ ರನ್ ಕಲೆ ಹಾಕಿದ ಸಾಧನೆ ಮಾಡಲಿದ್ದಾರೆ. ಇವರು ಈ ಬಾರಿಯ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ವಿರಾಟ್ ಅಬ್ಬರಿಸಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಮಯಾಂಕ್ ಅಗರ್‌ವಾಲ್, ಜಿತೇಶ್ ಶರ್ಮಾ, ರೊಮಾರಿಯೋ ಶೆಫರ್ಡ್, ರಜತ್ ಪಾಟಿದಾರ್ ತಮ್ಮ ಘನತೆಗೆ ತಕ್ಕ ಆಟವನ್ನು ಆಡಬೇಕಿದೆ. ಅಂದಾಗ ಬಿಗ್ ಇನಿಂಗ್ಸ್ ಕಟ್ಟಬಹುದು.
ಟೀಮ್ ಡೇವಿಡ್ ಆಡುವುದು ಡೌಟ್
ಇನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಗಾಯಕ್ಕೆ ತುತ್ತಾಗಿದ್ದ ಟೀಮ್ ಡೇವಿಡ್ ಆಡುವುದು ಅನುಮಾನವಾಗಿದೆ. ಇವರ ಬದಲಿಗೆ ಜಾಕಬ್ ಬೆತೆಲ್ ಅಥವಾ ಲಿಯಾಮ್ ಲಿವಿಂಗ್‌ಸ್ಟೋನ್ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ಆರ್‌ಸಿಬಿ ತಂಡದ ಗರಿಷ್ಠ ರನ್ ಸಾಧಕರು
ವಿರಾಟ್ ಕೊಹ್ಲಿ, 12 ಪಂದ್ಯ, 548 ರನ್
ಫಿಲ್ ಸಾಲ್ಟ್, 10 ಪಂದ್ಯ, 301 ರನ್
ರಜತ್ ಪಾಟಿದಾರ್, 12 ಪಂದ್ಯ, 257 ರನ್

ಆರ್‌ಸಿಬಿ ತಂಡದ ಬೌಲಿಂಗ್ ಬಲಾಢ್ಯವಾಗಿದೆ. ಟೀಮ್ ಇಂಡಿಯಾದ ಪರ ಜೋಶ್ ಹ್ಯಾಜಲ್‌ವುಡ್ ತಂಡಕ್ಕೆ ಆಗಮಿಸಿರುವುದು ತಂಡಕ್ಕೆ ಬೂಸ್ಟ್ ನೀಡಿದಂತೆ ಆಗಿದೆ. ಭುವನೇಶ್ವರ್ ಕುಮಾರ್, ಯಶ್ ದಯಾಳ್ ಬಿಗುವಿನ ದಾಳಿ ನಡೆಸಿ ತಂಡಕ್ಕೆ ನೆರವಾಗಬೇಕಿದೆ. ಇನ್ನು ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಸುಯೇಶ್ ಶರ್ಮಾ, ಕೃನಾಲ್ ಪಾಂಡ್ಯ ಶಿಸ್ತು ಬದ್ಧ ದಾಳಿ ನಡೆಸಬೇಕಿದೆ.
ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್
ಜೋಶ್ ಹ್ಯಾಜಲ್‌ವುಡ್, 10 ಪಂದ್ಯ, 18 ವಿಕೆಟ್
ಕೃನಾಲ್ ಪಾಂಡ್ಯ, 12 ಪಂದ್ಯ, 15 ವಿಕೆಟ್
ಭುವನೇಶ್ವರ್ ಕುಮಾರ್, 11 ಪಂದ್ಯ, 13 ವಿಕೆಟ್
ಪ್ರತಿಷ್ಠೆಗಾಗಿ ಫೈಟ್
ಲಕ್ನೋ ತಂಡದಲ್ಲಿ ಸ್ಟಾರ್ ಆಟಗಾರರು ಇದ್ದು, ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಐಡೇನ್ ಮಾರ್ಕ್ರಾಮ್, ಮಿಚ್ ಮಾರ್ಷ್, ರಿಷಭ್ ಪಂತ್, ನಿಕೋಲಸ್ ಪೂರನ್ ದೊಡ್ಡ ಇನಿಂಗ್ಸ್ ಕಟ್ಟಬೇಕಿದೆ. ಇನ್ನು ರವಿ ಬಿಷ್ಣೋಯಿ, ದಿಗ್ವೇಶ್ ರಾಠಿ ತಮ್ಮ ಪಿರ್ಕಿ ಜಾದು ನಡೆಸಬೇಕಿದ್ದು, ವೇಗದ ಬೌಲರ್‌ಗಳು ಲಯ ಬದ್ಧ ದಾಳಿ ಸಂಘಟಿಸಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications