RCB vs SRH: ಅಗ್ರ ಸ್ಥಾನದ ಮೇಲೆ ರಜತ್ ಪಡೆ ಕಣ್ಣು
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಕಾದಾಟ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆಯಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ. ರಜತ್ ಪಾಟಿದಾರ್ ಮುಂದಾಳತ್ವದ ತಂಡ ಸುಮಾರು 20 ದಿನಗಳ ಬಳಿಕ ಮೈದಾನವನ್ನು ಪ್ರವೇಶಿಸಲಿದೆ.
ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಆಡಿದ 12 ಪಂದ್ಯಗಳಲ್ಲಿ ಆರ್‌ಸಿಬಿ 8 ಜಯ, 3 ಸೋಲು ಕಂಡಿದ್ದು 17 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದರೆ, 19 ಅಂಕಗಳು ಆಗುತ್ತವೆ. ಈ ಮೂಲಕ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಡ್ತಿ ಪಡೆಯುತ್ತದೆ. ಎಸ್‌ಆರ್‌ಎಚ್ ಇದೇ ಅಂಗಳದಲ್ಲಿ ಮೂರು ದಿನಗಳ ಹಿಂದೆ ಪಂದ್ಯವನ್ನು ಆಡಿದಾಗ ಕಪ್ಪು ಮಣ್ಣಿನ ಪಿಚ್ ಮೇಲೆ ಆಡಿತ್ತು. ಆದರೆ ಶುಕ್ರವಾರ ಕೆಂಪು ಮಣ್ಣಿನ ಪಿಚ್ ಮೇಲೆ ಪಂದ್ಯವನ್ನು ಆಡಲಿದೆ.

ಉಭಯ ತಂಡಗಳು ಈಗಾಗಲೇ 25 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದು ಆರ್‌ಸಿಬಿ 11 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಎಸ್‌ಆರ್‌ಎಚ್ 13 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆದರೆ ಈ ಲೀಗ್‌ನಲ್ಲಿ ಆರ್‌ಸಿಬಿ ಅಮೋಘ ಫಾರ್ಮ್‌ನಲ್ಲಿದ್ದು, ಮತ್ತೊಂದು ಜಯದ ಕನಸಿನಲ್ಲಿದೆ. ಈ ಪಂದ್ಯ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ ಮಳೆಯ ಕಾರಣದಿಂದ 18ನೇ ಆವೃತ್ತಿಯ 65ನೇ ಪಂದ್ಯವನ್ನು ಲಕ್ನೋಗೆ ಶಿಫ್ಟ್ ಮಾಡಲಾಗಿದೆ.
ಜಯದ ಕನವರಿಕೆ
ಆರ್‌ಸಿಬಿ ತಂಡ ಮತ್ತೊಂದು ಜಯದ ಕನಸಿನಲ್ಲಿದೆ. ಈ ವೇಳೆ ಫಿಲ್ ಸಾಲ್ಟ್ ಫಿಟ್ ಆಗಿದ್ದು ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ. ಇವರೊಂದಿಗೆ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಲಿದ್ದಾರೆ. ಈ ಜೋಡಿ ಭರವಸೆ ಮೂಡಿಸಿದ್ದು ಅಬ್ಬರಿಸಬೇಕಿದೆ. ಇನ್ನು ದೇವದತ್ ಪಡಿಕ್ಕಲ್ ಗಾಯದಿಂದ ಲೀಗ್‌ನಿಂದ ಹೊರ ನಡೆದಿದ್ದು, ಇವರ ಸ್ಥಾನದಲ್ಲಿ ಮಯಾಂಕ್ ಅಗರ್‌ವಾಲ್ ಅವರು ತಂಡ ಸೇರಿದ್ದಾರೆ. ಮಯಾಂಕ್ ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು ಆರ್ಭಟಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ನಾಯಕ ರಜತ್ ಪಾಟಿದಾರ್ ಫಾರ್ಮ್‌ನಲ್ಲಿದ್ದಾರೆ. ಉಳಿದಂತೆ ಜಿತೇಶ್ ಶರ್ಮಾ, ರೋಮಾರಿಯೊ ಶೆಫರ್ಡ್, ಡೆತ್ ಓವರ್‌ಗಳಲ್ಲಿ ಟೀಮ್ ಡೇವಿಡ್ ರನ್ ಕಲೆ ಹಾಕಿ ಅಬ್ಬರಿಸಬೇಕಿದೆ.

ಆರ್‌ಸಿಬಿ ತಂಡದ ಬೌಲಿಂಗ್ ಉತ್ತಮವಾಗಿದೆ. ಹೊಸ ಚೆಂಡಿನೊಂದಿಗೆ ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ ಬಿಗುವಿನ ದಾಳಿ ನಡೆಸಬೇಕಿದೆ. ಸ್ಪಿನ್ ಬೌಲಿಂಗ್‌ನಲ್ಲಿ ಸುಯೇಶ್ ಶರ್ಮಾ ಹಾಗೂ ಕೃನಾಲ್ ಪಾಂಡ್ಯ ಪಿರ್ಕಿ ಜಾದು ನಡೆಸಬೇಕಿದೆ. ಅಂದಾಗ ಮಾತ್ರ ಆರ್‌ಸಿಬಿ ಜಯವನ್ನು ಸಾಧಿಸಬಹುದಾಗಿದೆ.
ಆರ್‌ಸಿಬಿ ಸಂಭಾವ್ಯ ತಂಡ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್‌ವಾಲ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ, ರೋಮಾರಿಯಾ ಶೆಫರ್ಡ್, ಟೀಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಲುಂಗಿ ಎನ್‌ಗಿಡಿ, ಸುಯೇಶ್ ಶರ್ಮಾ.
ಲಯಕ್ಕೆ ಮರಳಿರುವ ಸ್ಟಾರ್ಸ್
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರರು ಭರ್ಜರಿ ಫಾರ್ಮ್ ಕಂಡು ಕೊಂಡಿದ್ದು ಭರವಸೆ ಮೂಡಿಸಿದ್ದಾರೆ. ಟ್ರಾವಿಸ್ ಹೆಡ್ ತಂಡವನ್ನು ಸೇರಿಕೊಂಡಿದ್ದು, ಬಿಗ್ ಇನಿಂಗ್ಸ್ ಕಟ್ಟುವ ಸೂಚನೆ ನೀಡಿದ್ದಾರೆ. ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಹೆನ್ರಿಕ್ ಕ್ಲಾಸೇನ್, ಅನಿಕೇತ್ ವರ್ಮಾ, ತಮ್ಮ ಸ್ಥಿರ ಆಟದ ಮೂಲಕ ಎದುರಾಳಿಗಳನ್ನು ಕಾಡಬೇಕಿದೆ. ಬೌಲಿಂಗ್ ವಿಭಾಗದಲ್ಲಿ ಪ್ಯಾಟ್ ಕಮಿನ್ಸ್, ಹರ್ಷಲ್ ಪಟೇಲ್, ಈಶಾನ್ ಮಲಿಂಗ್ ತಮ್ಮ ಬಿಗುವಿನ ದಾಳಿಯ ಮೂಲಕ ಎದುರಾಳಿಗಳನ್ನು ಕಾಡಿದ ಜಯದ ಕನಸು ನನಸಾಗುತ್ತದೆ.

ಎಸ್‌ಆರ್‌ಎಚ್ ಸಂಭಾವ್ಯ ತಂಡ: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ. ಹೆನ್ರಿಕ್ ಕ್ಲಾಸೇನ್, ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮಿನ್ಸ್, ಹರ್ಷಲ್ ಪಟೇಲ್, ಹರ್ಷಾ ದುಬೆ, ಈಶಾನ್ ಮಾಲಿಂಗ್, ಜಯದೇವ್ ಉನದ್ಕಟ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications