Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB Playoff Scenario: ಇನ್ನು ಎಷ್ಟು ಪಂದ್ಯಗಳನ್ನು ಗೆದ್ದರೆ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುತ್ತದೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗುರುವಾರ ಗುಜರಾತ್‌ ಟೈಟಾನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಸೋಲು ಕಂಡಿದೆ. ಸ್ಪರ್ಧಾತ್ಮಕ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಈ ಸೋಲಿನ ಬಳಿಕವೂ ಆರ್‌ಸಿಬಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಹಾಗಿದ್ದರೆ ಆರ್‌ಸಿಬಿ ಪ್ಲೇ ಆಫ್‌ ಪ್ರವೇಶಿಸಲು ಇನ್ನು ಎಷ್ಟು ಪಂದ್ಯಗಳನ್ನು ಗೆಲ್ಲಬೇಕು? ಮುಂದಿನ ಪಂದ್ಯಗಳು ಯಾವಾಗ ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್‌ ಇಲ್ಲಿದೆ.

ಆರ್‌ಸಿಬಿ ಈ ಬಾರಿ ಹಾಲಿ ಚಾಂಪಿಯನ್‌ ಪಟ್ಟದೊಂದಿಗೆ ಕಣಕ್ಕೆ ಇಳಿದಿದೆ. ಅಲ್ಲದೆ ಈ ಪಟ್ಟವನ್ನು ಉಳಿಸಿಕೊಳ್ಳಲು ಕಾದಾಟ ನಡೆಸುತ್ತಿದೆ. ಈ ಬಾರಿ ಆರ್‌ಸಿಬಿ ತಂಡದ ಪ್ರದರ್ಶನವನ್ನು ನೋಡಿದರೆ ಆರ್‌ಸಿಬಿ ಕಪ್‌ ಗೆಲ್ಲುವ ಹಾದಿಯಲ್ಲೇ ಸಾಗುತ್ತಿದೆ. ಆರ್‌ಸಿಬಿ ಆಡಿರುವ 9 ಪಂದ್ಯಗಳಲ್ಲಿ 6 ಜಯ, 3 ಸೋಲುಗಳನ್ನು ಕಂಡಿದ್ದು, 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಈ ವೇಳೆ ಬೆಂಗಳೂರು ತಂಡದ ರನ್‌ ರೇಟ್‌ (1.420) ಸಹ ಅಮೋಘವಾಗಿದೆ.

RCB

ಈಗಿನ ಪ್ರದರ್ಶನವನ್ನು ನೋಡುವುದಾದರೆ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವುದು ಖಚಿತ ಎಂದು ಹೇಳಬಹುದು. ಆರ್‌ಸಿಬಿ ಈ ಲೀಗ್‌ನಲ್ಲಿ ಇನ್ನು 5 ಪಂದ್ಯಗಳನ್ನು ಆಡಬೇಕಿದೆ. ಈ 5 ಪಂದ್ಯಗಳಲ್ಲಿ ಆರ್‌ಸಿಬಿ ಕನಿಷ್ಠ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 16 ಅಂಕಗಳು ಆಗುತ್ತವೆ. ಆಗ ಆರ್‌ಸಿಬಿ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಬಹುದು. ಆದರೆ ಆರ್‌ಸಿಬಿ ಚಿತ್ತ ಬೇರೆ ಕಡೆಗೆ ನೆಟ್ಟಿದೆ.

ಅಂದಹಾಗೆ ಆರ್‌ಸಿಬಿ ಬರೀ ಪ್ಲೇ ಆಫ್‌ ಮೇಲೆ ಕಣ್ಣು ನೆಟ್ಟಿಲ್ಲ. ಬದಲಿಗೆ ಅಗ್ರ ಎರಡು ಸ್ಥಾನಗಳ ಮೇಲೆ ಕಣ್ಣು ನೆಟ್ಟಿದೆ. ಈಗಿರುವ ಎರಡನೇ ಸ್ಥಾನವನ್ನು ಭದ್ರ ಪಡಿಸಿಕೊಂಡು ಪ್ಲೇ ಆಫ್‌ ಪ್ರವೇಶಿಸುವ ಕನಸು ಕಾಣುತ್ತದೆ. ಅಂದಾಗ ಮಾತ್ರ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ಒಂದು ಚಾನ್ಸ್‌ ಹೆಚ್ಚು ಪಡೆಯಬಹುದು. ಈ ನಿಟ್ಟಿನಲ್ಲೇ ಆರ್‌ಸಿಬಿ ಪ್ರಯತ್ನವನ್ನು ನಡೆಸುತ್ತಿದೆ.

ಕಪ್‌ ಮೇಲೆ ಕಣ್ಣು

ಆರ್‌ಸಿಬಿ ಲೀಗ್‌ ಹಂತದ ಆರಂಭದಲ್ಲಿ ನೀಡಿರುವ ಪ್ರದರ್ಶನವನ್ನೇ ಮುಂದಿನ ದಿನಗಳಲ್ಲೂ ಮುಂದುವರೆಸಿದರೆ, ನಿಶ್ಚಿತವಾಗಿ ಅಗ್ರ 2 ಸ್ಥಾನಗಳಿಂದ ಪ್ಲೇ ಆಫ್‌ ಪ್ರವೇಶಿಸಬಹುದು. ಆದರೆ ಮುಂದಿನ ಹಾದಿ ಆರ್‌ಸಿಬಿಗೆ ತುಂಬ ಕಷ್ಟಕರವಾಗಿದೆ. ಈ ಸವಾಲಿನ ಹಾದಿಯನ್ನು ಮೆಟ್ಟಿನಿಂತಾಗ ಮಾತ್ರ ಆರ್‌ಸಿಬಿ ದೊಡ್ಡ ಕನಸು ನನಸಾಗುತ್ತದೆ. ಅಲ್ಲದೆ ಇತಿಹಾಸ ನಿರ್ಮಿಸಲು ಸಾಧ್ಯವಾಗುತ್ತದೆ. ಆರ್‌ಸಿಬಿ ಇದೇ ಪ್ರದರ್ಶನ ಮುಂದುವರೆಸಲಿ ಎಂಬುದೇ ಆಶಯ.

ಆರ್‌ಸಿಬಿ ತಂಡದ ಮುಂದಿನ ಪಂದ್ಯಗಳು

ಮೇ 7, ಲಕ್ನೋ ಸೂಪರ್ ಜೈಂಟ್ಸ್, ಲಕ್ನೋ, ಸಂಜೆ 7.30ಕ್ಕೆ
ಮೇ 10, ಮುಂಬೈ ಇಂಡಿಯನ್ಸ್‌, ರಾಯ್‌ಪುರ್‌, ಸಂಜೆ 7.30ಕ್ಕೆ
ಮೇ 13, ಕೋಲ್ಕತ್ತ ನೈಟ್ ರೈಡರ್ಸ್‌, ರಾಯ್‌ಪುರ್‌, ಸಂಜೆ 7.30ಕ್ಕೆ
ಮೇ 17, ಪಂಜಾಬ್‌ ಕಿಂಗ್ಸ್‌, ಧರ್ಮಶಾಲಾ, ಮಧ್ಯಾಹ್ನ 3.30ಕ್ಕೆ
ಮೇ 26, ಸನ್‌ರೈಸರ್ಸ್ ಹೈದರಾಬಾದ್, ಹೈದರಾಬಾದ್, ಸಂಜೆ 7.30ಕ್ಕೆ

Story first published: Friday, May 1, 2026, 13:35 [IST]
Other articles published on May 1, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+