Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB: ಸಾಮಾಜಿಕ ತಾಣದಲ್ಲಿ ಆರ್‌ಸಿಬಿ ಹಿಂದಿ ಖಾತೆ ಓಪನ್‌: ಕನ್ನಡಿಗರ ಆಕ್ರೋಶ!

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನದೆಯಾದ ಕ್ರೇಜ್ ಹುಟ್ಟು ಹಾಕಿದೆ. ಐಪಿಎಲ್‌ಲ್ಲಿ ಯಾವುದೇ ತಂಡಕ್ಕೆ ಅಭಿಮಾನಿಗಳಿಂದ ಸಿಗದ ಬೆಂಬಲವನ್ನು ಆರ್‌ಸಿಬಿ ಪಡೆದಿದೆ. ಇದೀಗ ಆರ್‌ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಆರ್‌ಸಿಬಿ ಅಭಿಮಾನಿಗಳ ಪುಟವನ್ನು ಹಿಂದಿ ಭಾಷೆಯಲ್ಲಿ ತೆರೆದಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಅಕ್ಟೋಬರ್ ತಿಂಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಇರುವ ಆರ್‌ಸಿಬಿಯ ಅಧಿಕೃತ ಖಾತೆಯೊಂದಿಗೆ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನೂತನ ಖಾತೆಯನ್ನು ತೆರೆದಿರುವುದು ಅಭಿಮಾನಿಗಳ ಗಮನಕ್ಕೆ ಬಂದಿದೆ. ಆದರೆ, ಹಿಂದಿಯಲ್ಲಿ ಖಾತೆ ತೆರೆಯುವ ಮೂಲಕ ಪೋಸ್ಟ್ ಮಾಡಿರುವುದು ಅಭಿಮಾನಗಳ ಕೋಪಕ್ಕೆ ಕಾರಣವಾಗಿದೆ. ಹಿಂದಿ ‍ಭಾಷೆಯಲ್ಲಿರುವ ಖಾತೆಯನ್ನು ಅಳಿಸಿ ಇಲ್ಲದಿದ್ದರೆ ನಾವು ನಿಮ್ಮನ್ನು ಬೆಂಬಲಿಸುವುದಿಲ್ಲ ಎಂದು ಆರ್‌ಸಿಬಿಗೆ ಅಭಿಮಾನಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

RCB Faces Backlash Over Launching Hindi Social Media Page Amid Bengaluru s Language Debate

ಕಳೆದ ಅಕ್ಟೋಬರ್ ತಿಂಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಇರುವ ಆರ್‌ಸಿಬಿಯ ಅಧಿಕೃತ ಖಾತೆಯೊಂದಿಗೆ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನೂತನ ಖಾತೆಯನ್ನು ತೆರೆದಿರುವುದು ಅಭಿಮಾನಿಗಳ ಗಮನಕ್ಕೆ ಬಂದಿದೆ. ಆದರೆ, ಹಿಂದಿಯಲ್ಲಿ ಖಾತೆ ತೆರೆಯುವ ಮೂಲಕ ಪೋಸ್ಟ್ ಮಾಡಿರುವುದು ಅಭಿಮಾನಗಳ ಕೋಪಕ್ಕೆ ಕಾರಣವಾಗಿದೆ. ಹಿಂದಿ ‍ಭಾಷೆಯಲ್ಲಿರುವ ಖಾತೆಯನ್ನು ಅಳಿಸಿ ಇಲ್ಲದಿದ್ದರೆ ನಾವು ನಿಮ್ಮನ್ನು ಬೆಂಬಲಿಸುವುದಿಲ್ಲ ಎಂದು ಆರ್‌ಸಿಬಿಗೆ ಅಭಿಮಾನಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ತಂಡಕ್ಕೆ ಸಂಬಂಧಪಟ್ಟಂತೆ ಹೊಸದಾಗಿ ಹಿಂದಿ ಭಾಷೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್‌ಗೆ ಕನ್ನಡಿಗರು ಸರಿಯಾಗಿ ತಿರುಗೇಟು ನೀಡಿದ್ದಾರೆ. 'ಹಿಂದಿ ಭಾಷೆಗೂ ಬೆಂಗಳೂರಿಗೂ ಯಾವುದೇ ಸಂಬಂಧವಿಲ್ಲ. ಹಿಂದಿ ಹೇರಿಕೆಯನ್ನು ನಿಲ್ಲಿಸಿ ಎಂದು ಅಭಿಮಾನಿಯೊಬ್ಬ ಕಾಮೆಂಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ. 'ಹಿಂದಿ ಭಾಷಿಕರಿಗೆ ಯಾಕೆ ಬಕೆಟ್ ಹಿಡಿತೀರಾ' ಎಂದು ಮತ್ತೊಬ್ಬರು ಪೋಸ್ಟ್ ಮಾಡಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

Story first published: Thursday, November 28, 2024, 15:18 [IST]
Other articles published on Nov 28, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+