For Quick Alerts
ALLOW NOTIFICATIONS  
For Daily Alerts
 

RCB IPL 2025: ರನ್‌ ಇಲ್ಲ, ವಿಕೆಟ್‌ ಇಲ್ಲ ಇನ್ನೇಷ್ಟು ಅವಕಾಶ: ಯುವಕರಿಗೆ ಚಾನ್ಸ್‌ ನೀಡಿ

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಈ ಲೀಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ರಿರುವ ಆಟಗಾರರು ತಮ್ಮ ಸ್ಥಿರ ಪ್ರದರ್ಶನದ ಬಲದಿದ ತಂಡಕ್ಕೆ ನೆರವಾಗುತ್ತಿದ್ದಾರೆ. ಆದರೆ ಇನ್ನು ಹಲವು ಆಟಗಾರರು ಫಾರ್ಮ್‌ ಕಂಡುಕೊಳ್ಳಲು ಹೆಣಗಾಟ ನಡೆಸಿದ್ದಾರೆ. ಈ ಸಾಲಿನಲ್ಲಿ ಕಾಣಿಸಿಕೊಳ್ಳುವ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್.

ಇಂಗ್ಲೆಂಡ್ ಪರ ರಾಷ್ಟ್ರೀಯ ತಂಡದಲ್ಲಿ ಅಮೋಘ ಪ್ರದರ್ಶನ ನೀಡಿದ ಫಲವಾಗಿಯೇ ಲಿವಿಂಗ್‌ಸ್ಟೋನ್‌ ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆದರು. ಇವರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ತಂಡಕ್ಕೆ ನೆರವಾಗುವಲ್ಲಿ ವಿಫಲರಾಗಿದ್ದಾರೆ. ಇವರು ಈ ಹಿಂದೆ ಪಂಜಾಬ್ ಕಿಂಗ್ಸ್‌ ಪರ ಆಡಿದಾಗಲೂ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದರಿಂದ ಇವರನ್ನು ತಂಡದಿಂದ ಕೈ ಬಿಡಲಾಗಿತ್ತು.

RCB Faces Major Setback as Liam Livingstone Fails to Deliver in IPL 2025

ಆರ್‌ಸಿಬಿ ಸೌದಿಯಲ್ಲಿ ನಡೆದ ಐಪಿಎಲ್‌ ಮೆಗಾ ಹರಾಜಿನಲ್ಲಿ ಭಾರೀ ಮೊತ್ತ 8.75 ಕೋಟಿ ರೂ. ನೀಡಿ ಲಿಯಾಮ್‌ ಲಿವಿಂಗ್‌ಸ್ಟೋನ್‌ ತಂಡಕ್ಕೆ ಬರಮಾಡಿಕೊಂಡಿತು. ಇವರು ಬ್ಯಾಟಿಂಗ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗಬಲ್ಲರು ಎಂಬ ಆಸೆ ಆರ್‌ಸಿಬಿಯಲ್ಲಿತ್ತು. ಅಲ್ಲದೆ ಇವರು ಬೌಲಿಂಗ್‌ನಲ್ಲಿ ಲೆಗ್‌ ಸ್ಪಿನ್ ಹಾಗೂ ಆಫ್‌ ಸ್ಪಿನ್ ಎರಡನ್ನೂ ಮಾಡುವ ಕಲೆಯನ್ನು ಹೊಂದಿದ್ದರು. ಆದರೆ ಇವರ ಆಲ್‌ರೌಂಡರ್ ಆಟ ಐಪಿಎಲ್‌ನಲ್ಲಿ ನಡೆಯುತ್ತಿಲ್ಲ. ದುಬಾರಿ ಹಣವನ್ನು ಕೊಟ್ಟು ತಂಡಕ್ಕೆ ಸೇರಿಸಿಕೊಂಡಿರುವ ಮ್ಯಾನೇಜ್ಮೆಂಟ್ ಇವರ ಪ್ರದರ್ಶನ ಕಂಡು, ಟೆನ್ಷನ್ ಮಾಡಿಕೊಂಡಿದೆ.

ದುಬಾರಿ ತಲೆನೋವಾ

ಪಂಜಾಬ್‌ ವಿರುದ್ದದ ಪಂದ್ಯದಲ್ಲೂ ಲಿಯಾಮ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಲಿಯಾಮ್‌ ವಿಫಲರಾಗಿದ್ದಾರೆ. ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಇಳಿದರೆ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ಇವರು ಎಡವಿದರು. ಕೇವಲ ನಾಲ್ಕು ರನ್ ಬಾರಿಸಿ ಬಂದ ದಾರಿಯಲ್ಲಿ ಸಾಗಿದರು. ಲಿಯಾಮ್‌ ಆಡಿದ 7 ಪಂದ್ಯಗಳಲ್ಲಿ 17.40ರ ಸರಾಸರಿಯಲ್ಲಿ 87 ರನ್‌ ಸಿಡಿಸಿ ನಿರಾಸೆಯ ಕಡಲಿನಲ್ಲಿ ಪಯಣ ಆರಂಭಿಸಿದ್ದಾರೆ. ಇವರು ವಿಕೆಟ್‌ ಪಡೆಯುವಲ್ಲೂ ಹಿಂದೆ ಬಿದ್ದಿದ್ದಾರೆ. ಇವರು ಬುಟ್ಟಿಯಲ್ಲಿ ಜಸ್ಟ್‌ 2 ವಿಕೆಟ್‌ಗಳು ಇವೆ. ಭಾರೀ ಮೊತ್ತ ನೀಡಿ ಇವರಿಗೆ ತಂಡಕ್ಕೆ ಸೇರಿಸಿಕೊಂಡ ಆರ್‌ಸಿಬಿ ಬೆಂಚ್‌ ಮೇಲೆ ಕೂರಿಸಲು ಆಗದೆ ಒದ್ದಾಡುತ್ತಿದೆ.

ರಿಪ್ಲೇಸ್‌ ಮೆಂಟ್ ಯಾರು?

ಲಿಯಾಮ್‌ ಲಿವೀಗ್‌ಸ್ಟೋನ್ ಅವರ ಸ್ಥಾನವನ್ನು ತುಂಬಲು ಅವರದ್ದೇ ದೇಶದ ಯುವ ಪ್ರತಿಭೆ ಜಾಕಬ್‌ ಬೇತೆಲೆ ಕಾತುರಾಗಿ ಕಾಯುತ್ತಿದ್ದಾರೆ. ಇವರು ಇತ್ತೀಚಿಗಷ್ಟೆ ಇವರು ಇಂಗ್ಲೆಂಡ್ ಪರ ಮೂರು ಮಾದರಿಯ ಕ್ರಿಕಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಅಲ್ಲದೆ ಸಿಕ್ಕ ಅವಕಾಶದಲ್ಲಿ ಅಬ್ಬರದ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದದೆ. ಇವರೂ ಸಹ ಎಡಗೈ ಬ್ಯಾಟಿಂಗ್ ಹಾಗೂ ಸ್ಪಿನ್ ಬೌಲಿಂಗ್ ಮಾಡುವ ಕ್ಷಮತೆ ಹೊಂದಿದ್ದಾರೆ. ಇವರು ತಂಡಕ್ಕೆ ಸೇರಿಕೊಂಡಲ್ಲಿ ತಂಡದ ರೈಟ್ ಹಾಗೂ ಲೆಫ್ಟ್‌ ಕಾಂಬಿನೇಷ್‌ನ ಸರಿ ಹೋಗಬಹುದು. ಈ ನಿಟ್ಟಿನಲ್ಲಿ ಆರ್‌ಸಿಬಿ ಯೋಚನೆ ಮಾಡುವ ಅವಶ್ಯಕತೆ ಇದೆ. ಅಂದಾಗ ಮಾತ್ರ ತವರಿನಲ್ಲಿ ಪಂದ್ಯಗಳನ್ನು ಗೆಲ್ಲಲು ಸಾಧ್ಯ.

Story first published: Saturday, April 19, 2025, 14:53 [IST]
Other articles published on Apr 19, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+