'ಈ ಸಲ ಕಪ್ ನಮ್ದೆ': ಆರ್‌ಸಿಬಿ ತಂಡಕ್ಕೆ ಅಭಿಮಾನಿ ದಿವ್ಯಶ್ರೀ ಶುಭ ಹಾರೈಕೆ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಆಕರ್ಷಣೀಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಜಗದಗಲ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಐಪಿಎಲ್ ಶುರುವಾಗುತ್ತಲೇ 'ಈ ಸಲ ಕಪ್ ನಮ್ದೇ ಅಂತ ಹುಮ್ಮಸ್ಸಿನಿಂದ ಕೂಗೋರ ಸಂಖ್ಯೆಯೂ ಕಮ್ಮಿಯಿಲ್ಲ. ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಐಪಿಎಲ್‌ಗೆ ಕನ್ನಡದ ಅಭಿಮಾನಿ ದಿವ್ಯಶ್ರೀ ಶುಭ ಹಾರೈಸಿದ್ದಾರೆ.
ಮುಖ್ಯವಾಗಿ, ಕಪ್ ಗೆಲ್ಲುವಂತೆ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದಿವ್ಯಶ್ರೀ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಆರ್‌ಸಿಬಿ ಅಪ್ಪಟ ಅಭಿಮಾನಿ ದಿವ್ಯಶ್ರೀ ಬರೆದಿರುವ ಸಾಲುಗಳು ಕೆಳಗಿದೆ ನೋಡಿ..

ಶುರುವಾಗುತ್ತಿದೆ ಐಪಿಲ್ ಹವಾ, ಈ ಸಲ ಕಪ್ ನಮ್ದೆ, ಆರ್‌ಸಿಬಿ!!!!!
ಕೊರೊನಾ ಕಾರಣದಿಂದ ಮುಂದೂಡಿದ ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನು ಕೆಲವೇ ದಿನದಲ್ಲಿ ಭರ್ಜರಿಯಾಗಿ ಶುರುವಾಗುತ್ತಿದೆ. ಇಡೀ ಭಾರತ ಕಾಯಿತ್ತಿದ್ದ ದಿನ ಇದೀಗ ನಮ್ಮ ಕಣ್ಮುಂದೆ ಬರುತ್ತಿದೆ. ಈಗಾಗಲೇ 2020ರ ಐಪಿಎಲ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಆಗಿದ್ದು, ಸೆಪ್ಟೆಂಬರ್ 19ರಿಂದ ಪಂದ್ಯಗಳು ಶುರುವಾಗಲಿದೆ.

ಐಪಿಲ್ ಅಂದ್ರೆ ಹಬ್ಬದ ವಾತಾವರಣ
ನಮ್ಮ ಕರ್ನಾಟಕದಲ್ಲಿ ಐಪಿಲ್ ಅಂದ್ರೆ ಹಬ್ಬದ ವಾತಾವರಣ. ಅದರಲ್ಲೂ ಆರ್‌ಸಿಬಿ ತಂಡ ಕಪ್ ಗೆದಿಲ್ಲ ಅಂದ್ರೂ ಅದರ ಮೇಲೆ ಪ್ರೀತಿ-ಅಭಿಮಾನ ಎಂದಿಗೂ ಬದಲಾಗುವುದಿಲ್ಲ. ಆರ್‌ಸಿಬಿ ಅಂದ್ರೆ ನಿಯತ್ತು, ನಿಯತ್ತು ಅಂದ್ರೆ ಆರ್‌ಸಿಬಿ ಫ್ಯಾನ್ಸ್ ಅಂದ್ರೆ ತಪ್ಪಲ್ಲ.

ಈ ಸಲ ಕಪ್ ನಮ್ಮದು ಆಗಲೇಬೇಕು
ಆರ್‌ಸಿಬಿ ತಂಡಕ್ಕೆ ಇರೋ ಫ್ಯಾನ್ಸ್ ಕ್ರೇಝ್ ಇನ್ನು ಯಾವ ತಂಡಕ್ಕೂ ಇಲ್ಲ, ಇರೋದಿಕ್ಕೆ ಚಾನ್ಸ್ ಇಲ್ಲ. ಈ ಸಲ ಕಪ್ ನಮ್ಮದು ಆಗಲೇಬೇಕು ಎಂದು ಎಲ್ಲಾ ಕನ್ನಡಿಗರು ಹಾರೈಸೋಣ. ಆರ್‌ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಬಳಗದವರು ಈ ಸಲ ಟ್ರೋಫಿ ಗೆದ್ದುಕೊಂಡು ಬರಲೇಬೇಕು. ಕನ್ನಡಿಗರ ಕನಸನ್ನು ನನಸು ಮಾಡಲೇಬೇಕು.

ನಮ್ಮ ಕನಸು ನನಸಾಗಲಿ
ನಮ್ಮ ಆರ್‌ಸಿಬಿ ತಂಡ ಪಕ್ಕಾ ಈ ಸಲ ಗೆಲುವಿನ ಶಿಖರ ಎರಲೇಬೇಕು. ಇದು ನಮ್ಮ ಇಡೀ ಆರ್‌ಸಿಬಿ ಅಭಿಮಾನಿಗಳ ಬಹುದಿನದ ಕನಸು. ನಮ್ಮ ಕನಸು ನನಸಾಗಲಿ ಎಂದು ಆಶಿಸುತ್ತಾ ಐಪಿಎಲ್‌ಗೆ, ಆರ್‌ಸಿಬಿಗೆ ಶುಭ ಹಾರೈಸುತ್ತಿದ್ದೇವೆ. ಅಲ್ ದ ಬೆಸ್ಟ್.
ದಿವ್ಯಶ್ರೀ ವಿ, ಬೆಂಗಳೂರು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications