For Quick Alerts
ALLOW NOTIFICATIONS  
For Daily Alerts
 

ಮಹಾ ಕುಂಭಮೇಳದಲ್ಲೂ RCB ಹವಾ: ಈ ಸಲ ಕಪ್‌ ನಮ್ದೇ: ಇಲ್ಲಿದೆ ವಿಡಿಯೋ

ವಿಶ್ವದ ಶ್ರೀಮಂತ ಕ್ರಿಕೆಟ್‌ ಲಿಗ್‌ ಆರಂಭವಾಗಲು ದಿನಗಣನೆ ಆರಂಭವಾಗಿದೆ. ಇನ್ನೇನು 10 ತಂಡಗಳು ಅಭ್ಯಾಸ ಆರಂಭಿಸಬೇಕಿದೆ. ಈ ನಡುವೆ ಆರ್‌ಸಿಬಿ ಸಹ ಈ ಬಾರಿ ಕಪ್‌ ಗೆಲುವಿನ ಮೇಲೆ ಕಣ್ಣು ನೆಟ್ಟಿದೆ. 18ನೇ ಆವೃತ್ತಿಯನ್ನು ಸ್ಮರಣೀಯವಾಗಿಸಲು ಮ್ಯಾನೇಜ್ಮೆಂಟ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅಂತೆಯೇ ಆರ್‌ಸಿಬಿ ಫ್ಯಾನ್ಸ್‌ ಫುಲ್ ಜೋಶ್‌ನಲ್ಲಿ ಮತ್ತೊಂದು ಆವೃತ್ತಿಯ ಕ್ರಿಕೆಟ್‌ಗೆ ಎದುರು ನೋಡುತ್ತಿದ್ದಾರೆ. ಈ ವೇಳೆ ಒಬ್ಬ ಅಪರೂಪದ ಅಭಿಮಾನಿಯ ವಿಡಿಯೋ ವೈರಲ್‌ ಆಗುತ್ತಿದೆ.

144 ವರ್ಷಗಳಿಗೆ ಒಮ್ಮೆ ಬರುವ ಮಹಾ ಕುಂಭ ಮೇಳೆ ಪ್ರಯಾಗ ರಾಜ್‌ನಲ್ಲಿ ನಡೆಯುತ್ತಿದೆ. ಈ ಕುಂಭ ಮೇಳದಲ್ಲಿ ದೇಶದ ಕೋಟ್ಯಾಂತರ ಭಕ್ತರು ಭಾಗವಹಿಸುತ್ತಿದ್ದಾರೆ. ಈ ವೇಳೆ ದೇಶದ ನಾನಾ ಭಾಗದ ಭಕ್ತರು ತ್ರಿವೇಣಿಯಲ್ಲಿ ಮಿಂದೆದ್ದು ಪಾವನರಾಗುತ್ತಿದ್ದಾರೆ. ಈ ಪುಣ್ಯ ಸಮಯದಲ್ಲಿ ಆರ್‌ಸಿಬಿ ಅಭಿಮಾನಿಯೊಬ್ಬ ತನ್ನ ತಂಡಕ್ಕಾಗಿ ವಿಶೇಷ ರೀತಿಯಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಆ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

RCB Fan Prays for IPL Glory at Maha Kumbh Mela Video Goes Viral

ಆಗಿದ್ದೇನು?

ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ನಡೆಯುತ್ತಿದೆ. ಈ ಕುಂಭ ಮೇಳದಲ್ಲಿ ಒಬ್ಬ ವ್ಯಕ್ತಿ ಸ್ನಾನ ಮಾಡುವಾಗ ತನ್ನೊಂದಿಗೆ ಆರ್‌ಸಿಬಿ ಜೆರ್ಸಿಯನ್ನು ಸಹ ತೆಗೆದುಕೊಂಡು ಹೋಗಿದ್ದಾನೆ. ಈ ವೇಳೆ ಆರ್‌ಸಿಬಿ ಜೆರ್ಸಿಯನ್ನು ಸಹ ತ್ರಿವೇಣಿಯಲ್ಲಿ ಮೂರು ಬಾರಿ ಮುಳಗಿಸಿ ತೆಗೆದಿದ್ದಾರೆ. ಅಲ್ಲದೆ ಬಲಗೈ ಎತ್ತಿ ತೋಳ್ಬಲ ಪ್ರದರ್ಶಿಸಿದ್ದಾರೆ. ಮುಂದಿನ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಇಷ್ಟು ದಿನ ಹಿಡಿದಿದ್ದ ಕಂಟಕ ಎಲ್ಲವೂ ದುರವಾಗಲಿ ಎಂದು ಹರಿಸಿದ್ದಾರೆ. ಅಲ್ಲದೆ ಈ ಬಾರಿ ಕಪ್‌ ನಮ್ಮೇ ಎಂಬ ಘೋಷ ವಾಕ್ಯವನ್ನು ಹೇಳಿ ಖುಷಿ ಪಟ್ಟಿದ್ದಾರೆ.

ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್‌ ಆಗುತ್ತಿದೆ. ಜನ ತರಹೇವಾರಿ ಕಮೆಂಟ್‌ಗಳನ್ನು ನೀಡಿ ಖುಷಿ ಪಡುತ್ತಿದ್ದಾರೆ. 17 ವರ್ಷ ಮಾಯಾಜಿಂಕೆಯಂತೆ ಕಾಡಿದ ಐಪಿಎಲ್‌ ಕಪ್‌ನ್ನು ಈ ಬಾರಿ ಆರ್‌ಸಿಬಿ ಗೆಲ್ಲಲಿ ಎಂಬ ಮಹದಾಸೆ ಅಭಿಮಾನಿಗಳದ್ದಾಗಿದೆ.

Story first published: Tuesday, January 21, 2025, 16:26 [IST]
Other articles published on Jan 21, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+