Virat Kohli: ಮಹಾಕುಂಭ ಮೇಳದಲ್ಲಿ ವಿರಾಟ್ ಫಾರ್ಮ್ ಹಾಗೂ ಆರ್‌ಸಿಬಿ ಕಪ್ ಗೆಲುವಿಗೆ ಪ್ರಾರ್ಥನೆ
ಇನ್ನೇನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಈ ಟೂರ್ನಿ ಮುಗಿದ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಟೂರ್ನಿಗೂ ಮುನ್ನ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಇರುವ ಪ್ರಶ್ನೆ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳುತ್ತಾರಾ ಎಂದಾಗಿತ್ತು. ಇದಕ್ಕೆ ಉತ್ತರ ಎನ್ನುವಂಬಂತೆ ವಿರಾಟ್ ಅಹಮದಾಬಾದ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ರನ್ ಕಲೆ ಹಾಕಿದ್ದರು. ಆದರೆ ಇದು ಇವರ ಅಭಿಮಾನಿಗಳಿಗೆ ಸಾಕಾಗುತ್ತಿಲ್ಲ. ದೊಡ್ಡ ಆಟಗಾರನಿಂದ ದೊಡ್ಡ ಪ್ರದರ್ಶನವನ್ನು ಆಟಗಾರರು ನಿರೀಕ್ಷೆ ಮಾಡುತ್ತ ಇದ್ದಾರೆ.
ಟೀಮ್ ಇಂಡಿಯಾದ ಅಭಿಮಾನಿಗಳು ಎಲ್ಲಿ ಹೋದರೂ ತಮ್ಮ ಪ್ರಾರ್ಥನೆಯನ್ನು ವಿಶೇಷವಾಗಿ ಕೇಳಿಕೊಳ್ಳುತ್ತಾರೆ. ಇದೇ ರೀತಿ ಮಹಾ ಕುಂಭ ಮೇಳದಲ್ಲೂ ಇಂತಹದ್ದೇ ಒಂದು ಹರಕೆಯನ್ನು ಕೇಳಿದ ಅಭಿಮಾನಿ, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಾನೆ. ಇವರು ಮಿಂದೆದ್ದ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಈ ವಿಡಿಯೋದಲ್ಲಿ ಅಭಿಮಾನಿ ಕೇಳಿಕೊಂಡಿರುವ ಹರಕೆ ಹಲವು ಕ್ರಿಕೆಟ್ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಅದ್ರಲ್ಲೂ ಆರ್‌ಸಿಬಿ ಅಭಿಮಾನಿಗಳು ಈ ವಿಡಿಯೋ ನೋಡಿ ಫುಲ್ ಖುಷ್ ಆಗ್ತಾರೆ.

ಮಹಾ ಕುಂಭ ಮೇಳದಲ್ಲಿ ಆರ್‌ಸಿಬಿ ಫ್ಯಾನ್
ಸದ್ಯ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಕುಂಭ ಮೇಳ ನಡೆಯುತ್ತಿದೆ. ಈ ಕುಂಭ ಮೇಳದಲ್ಲಿ ದಾಖಲೆಯ ಶ್ರದ್ಧಾಳುಗಳು ಭಾಗವಹಿಸಿದ್ದಾರೆ. ಇದೇ ವೇಳೆ ಕ್ರಿಕೆಟ್ ಅಭಿಮಾನಿಗಳು ಸಹ ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತರಾಗಿದ್ದಾರೆ. ಈ ವೇಳೆ ಒಬ್ಬ ವ್ಯಕ್ತಿ ವಿರಾಟ್ ಬಗ್ಗೆ ಮಾಡಿರುವ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ.
ಒಬ್ಬನೇ ವ್ಯಕ್ತಿ ತನ್ನ ಸಾಮಾಜಿಕ ತಾಣದಲ್ಲಿ ಎರಡು ವಿಡಿಯೋಗಳನ್ನು ಹಂಚಿಕೊಂಡಿದ್ದಾನೆ. ಇದರಲ್ಲಿ ಮೊದಲನೆಯದಲ್ಲಿ ಆತ ಚಾಂಪಿಯನ್ಸ್ ಟ್ರೋಫಿಯಲ್ಲಾದ್ರೂ ವಿರಾಟ್ ಕೊಹ್ಲಿ ಅಬ್ಬರಿಸಲಿ ಎಂದು ಪ್ರಾರ್ಥಿಸಿ ನೀರಿನಲ್ಲಿ ಮೂರು ಬಾರಿ ಮುಳುಗುತ್ತಾನೆ. ಇನ್ನೊಂದು ವಿಡಿಯೋದಲ್ಲಿ ಆರ್‌ಸಿಬಿ ಜೆರ್ಸಿ ಹಿಡಿದ ಅದೇ ಅಭಿಮಾನಿ ಆರ್‌ಸಿಬಿ ಕಪ್ ಗೆಲುವಿನ ಬರ ಕೊನೆಯಾಗಲಿ ಎಂದು ಹೇಳಿ ನೀರಿನಲ್ಲಿ ಮುಳಗುತ್ತಾನೆ.
ಈ ವಿಡಿಯೋ ನೋಡಿದ ಆರ್‌ಸಿಬಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಅಭಿಮಾನಿ ಇದೇ ರೀತಿ ಹರಕೆಯನ್ನು ಹೊತ್ತಿದ್ದನ್ನು ನೋಡಬಹುದು. ವಿರಾಟ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ದೊಡ್ಡ ಇನಿಂಗ್ಸ್ ಕಟ್ಟಿ ತಂಡದ ಗೆಲುವಿನ ಮಿಂಚುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಚಾಂಪಿಯನ್ಸ್ ಟ್ರೋಫಿ ಹಾಗೂ ಆರ್‌ಸಿಬಿ ಕ ಪ್ ಗೆಲುವಿನ ಕನಸು ನನಸಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications