Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB ಅಭಿಮಾನಿಗಳಿಂದ ವಿರಾಟ್‌ಗೆ ಬೆಸ್ಟ್‌ ಗಿಫ್ಟ್‌

ಐಪಿಎಲ್‌ ಪುನರಾರಂಭಕ್ಕೆ ಮೂಹುರ್ತ ಫಿಕ್ಸ್ ಆಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆಯಿಂದಾಗಿ ಸ್ಥಗತಿಗೊಂಡಿದ್ದ ಐಪಿಎಲ್‌ ಪಂದ್ಯಗಳು ಇದೇ 17 ರಂದು ಆರಂಭವಾಗಲಿವೆ. ಶನಿವಾರ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್‌ ತಂಡಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇದೇ ವೇಳೆ ಆರ್‌ಸಿಬಿ ಅಭಿಮಾನಿಗಳು ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್‌ ಕೊಹ್ಲಿ ಭರ್ಜರಿ ಗಿಫ್ಟ್‌ ನೀಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಐಪಿಎಲ್‌ ಸ್ಥಗಿತಗೊಂಡ ವೇಳೆ ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿದ್ಧಾರೆ. ಇವರ ಈ ನಿರ್ಧಾರ ಅಭಿಮಾನಿಗಳಿಗೆ ತೀರ ಬೇಸರ ತರಿಸಿದೆ. ಟೀಮ್ ಇಂಡಿಯಾದ ಹಲವು ಜಯದಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸಿದ್ದ ವಿರಾಟ್ ಕೊಹ್ಲಿ, ಅವರಿಗೆ ವಿಶೇಷ ರೀತಿಯಲ್ಲಿ ಉಡುಗೊರೆ ನೀಡಲು ಫ್ಯಾನ್ಸ್‌ ಸಿದ್ಧತೆ ನಡೆಸಿದ್ದಾರೆ. ಹಾಗಿದ್ದರೆ ವಿರಾಟ್‌ಗೆ ಫ್ಯಾನ್ಸ್‌ ನೀಡಲು ಹೊರಟಿರುವ ಗಿಫ್ಟ್ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

RCB Fans Ask Crowd to Wear White for Virat Kohli Tribute vs KKR

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 123 ಟೆಸ್ಟ್‌ ಪಂದ್ಯಗಳ ಬಳಿಕ ನಿವೃತ್ತಿಯನ್ನು ಘೋಷಿಸಿದ್ದಾರೆ. ಇವರ ಈ ಸೇವೆಗೆ ಗೌರವಿಸಲು ಆರ್‌ಸಿಬಿ ಫ್ಯಾನ್ಸ್‌ ವಿಶೇಷ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ಮೇ 17 ರಂದು ಆರ್‌ಸಿಬಿ ಹಾಗೂ ಕೆಕೆಆರ್‌ ನಡುವಣ ಪಂದ್ಯದ ವೇಳೆ ವಿರಾಟ್‌ಗೆ ಸ್ಪೇಷಲ್‌ ಗಿಫ್ಟ್‌ ಸಿಗುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ ಚಿನ್ನಸ್ವಾಮಿ ಮೈದಾನ ಮೇ 17 ರಂದು ಬಿಳಿ ಸಾಗರದಂತೆ ಕಂಗೊಳಿಸಲಿದೆ.

ವಿರಾಟ್‌ ಕೊಹ್ಲಿಗೆ ಫ್ಯಾನ್ಸ್‌ ಗಿಫ್ಟ್‌

ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ನೀಡಿದ ಯೋಗದಾನವನ್ನು ಸ್ಮರಿಸಲು ಆರ್‌ಸಿಬಿ ಫ್ಯಾನ್ಸ್‌ ಒಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅಂದಹಾಗೆ ಐಪಿಎಲ್‌ ಪಂದ್ಯಗಳು ನಡೆಯುವ ವೇಳೆ ಚಿನ್ನಸ್ವಾಮಿ ಮೈದಾನ ಸಾಮಾನ್ಯವಾಗಿ ಕೆಂಪು ಸಾಗರದಂತೆ ಗೋಚರಿಸುತ್ತದೆ. ಆದರೆ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದಕ್ಕಾಗಿ, ಮೇ 17 ರಂದು ನಡೆಯುವ ಪಂದ್ಯದ ವೇಳೆ ಅಭಿಮಾನಿಗಳು ಬಿಳಿ ಜೆರ್ಸಿ ಹಾಕಿಕೊಂಡು ಮೈದಾನಕ್ಕೆ ಬರುವ ಸಿದ್ಧತೆ ನಡೆಸಿದ್ದಾರೆ.

ಅಭಿಮಾನಿಗಳು ವಿರಾಟ್‌ಗೆ ನೀಡಲು ನಿರ್ಧರಿಸುವ ಗೌರವದ ಬಗ್ಗೆ ಚರ್ಚೆಗಳು ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ. ಆರ್‌ಸಿಬಿ ಅಭಿಮಾನಿಗಳು ಮೇ 17 ರಂದು ನಡೆಯುವ ಪಂದ್ಯದಲ್ಲಿ ಬಿಳಿ ಜೆರ್ಸಿ ಹಾಕಿಕೊಂಡು ಮೈದಾನಕ್ಕೆ ಬರುವ ಕರೆ ನೀಡುತ್ತಿದ್ದಾರೆ. ಈ ಮೂಲಕ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ನೀಡಿದ ಕಾಣಿಕೆಗೆ, ಅಭಿಮಾನಿಗಳು ಗೌರವ ಸೂಚಿಸುವುದಾಗಿದೆ. ಈ ಮೂಲಕ ಯುಗ ಪುರಷನ ಬ್ಯಾಟಿಂಗ್ ಸಾಧನೆಯನ್ನು ಸ್ಮರಿಸಲು ಫ್ಯಾನ್ಸ್‌ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳುತ್ತಾರೆ ಎಂದು ಶನಿವಾರವೇ ಸುದ್ದಿ ಆಗಿತ್ತು. ಆದರೆ ಬಿಸಿಸಿಐ ಆಯ್ಕೆ ಸಮಿತಿ ಅವರ ಮನವೊಲಿಸುತ್ತಿದೆ ಎಂಬ ಮಾತುಗಳು ಸಹ ಕೇಳಿ ಬಂದಿತ್ತು. ಆದರೆ ಸೋಮವಾರ ಸೂರ್ಯ ನೆತ್ತಿಯ ಮೇಲೆ ಬರುವ ವೇಳೆಗೆ ವಿರಾಟ್‌ ತಮ್ಮ ದೊಡ್ಡ ನಿರ್ಧಾರವನ್ನು ಪ್ರಕಟಿಸಿ ಆಗಿತ್ತು.

Story first published: Tuesday, May 13, 2025, 17:46 [IST]
Other articles published on May 13, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+