Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Jacob Bethell: ಟೀಮ್ ಇಂಡಿಯಾಗೆ ನಡುಕ ಹುಟ್ಟಿಸಿದ ಆ ಪ್ಲೇಯರ್ ಬ್ಯಾಟಿಂಗ್ ಕಂಡು RCB ಫ್ಯಾನ್ಸ್‌ ಫುಲ್ ಖುಷ್

ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಸೆಮಿಫೈನಲ್ ಪಂದ್ಯ ಮುಂಬೈನ ವಾಂಖೆಡೆ ಅಂಗಳದಲ್ಲಿ ಗುರುವಾರ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 7 ರನ್‌ಗಳ ಜಯ ಸಾಧಿಸಿ ಫೈನಲ್‌ಗೆ ಅರ್ಹತೆ ಪಡೆದಿದೆ. ಆದರೆ ಟೀಮ್ ಇಂಡಿಯಾಕ್ಕೆ ಭಯ ಹುಟ್ಟಿಸಿದ್ದ ಆ ಇಂಗ್ಲೆಂಡ್‌ ಬ್ಯಾಟರ್‌ ಆಟ ಕಂಡು ಆರ್‌ಸಿಬಿ ಫ್ಯಾನ್ಸ್‌ ಫುಲ್ ಖುಷ್ ಆಗಿದ್ದಾರೆ. ಮುಂಬೈನಲ್ಲಿ ಆ ಪ್ಲೇಯರ್‌ ಹೊಡೆಯುತ್ತಿದ್ದ ಬೌಂಡರಿ, ಸಿಕ್ಸರ್‌ಗಳು ಬೆಂಗಳೂರಿನ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ಟೀಮ್ ಇಂಡಿಯಾ 254 ರನ್‌ಗಳ ಗುರಿಯನ್ನು ನೀಡಿದಾಗ ಈ ಪಂದ್ಯವನ್ನು ಭಾರತ ಸುಲಭವಾಗಿ ಗೆಲ್ಲುತ್ತದೇ ಎಂದೇ ಅಂದುಕೊಂಡಿದ್ದರು. ಆದರೆ ಇಂಗ್ಲೆಂಡ್ ಸಹ ಇಂತಹ ಭರ್ಜರಿ ಫೈಟ್ ನೀಡುತ್ತದೆ ಎಂದು ಯಾರು ಭಾವಿಸಿರಲಿಲ್ಲ. ಇಂಗ್ಲೆಂಡ್‌ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಆರ್ಭಟಿಸಿತು. ಈ ವೇಳೆ ಇಂಗ್ಲೆಂಡ್ ತಂಡಕ್ಕೆ ಆಧಾರವಾಗಿದ್ದು ನಾಲ್ಕನೇ ಕ್ರಮಾಂಕದ ಜಾಕಬ್ ಬೆಥೆಲ್.

Jacob Bethell

ಒಂದು ಬದಿಯಲ್ಲಿ ರನ್‌ ರೇಟ್‌ ಒತ್ತಡ, ಇನ್ನೊಂದು ಬದಿಯಲ್ಲಿ ವಿಕೆಟ್‌ಗಳ ಪತನ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ 22 ವರ್ಷದ ಜಾಕಬ್‌ ಬೆಥೆಲ್‌, ಅಮೋಘ ಬ್ಯಾಟಿಂಗ್ ನಡೆಸಿದರು. ತಮ್ಮ ವಯಸ್ಸಿಗೂ ಮೀರಿದ ಸಾಮರ್ಥ್ಯ ಪ್ರದರ್ಶಿಸಿದ ಜಾಕಬ್‌ ಆರ್ಭಟಿಸಿದರು. ಇಂಗ್ಲೆಂಡ್‌ ಪರ ಸೆಮಿಫೈನಲ್‌ ಹಂತದಲ್ಲಿ ಶತಕ ಬಾರಿಸಿ ಮಿಂಚಿದರು. ಇವರು ಈ ಪಂದ್ಯದಲ್ಲಿ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ಮೂಲಕ ವಿಶ್ವಕಪ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಇಂಗ್ಲೆಂಡ್ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇಂಗ್ಲೆಂಡ್ ಪ್ಲೇಯರ್ ದಾಖಲೆ

ಜಾಕಬ್‌ ಅರ್ಧಶತಕ ಬಾರಿಸಿದ ಬಳಿಕವೂ ಒತ್ತಡಕ್ಕೆ ಒಳಗಾಗದೇ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದರು. ಬೆಥೆಲ್ 45 ಎಸೆತಗಳಲ್ಲಿ ಶತಕ ಬಾರಿಸಿ, ಭಾರತಕ್ಕೆ ಸೋಲಿನ ಭಯ ಹುಟ್ಟಿಸಿದ್ದರು. ಇವರ ಈ ಮನಮೋಹಕ ಇನಿಂಗ್ಸ್‌ನಲ್ಲಿ ಚೆಂಡು 8 ಬಾರಿ ಬೌಂಡರಿ ಗೆರೆಯ ದರ್ಶನ ಮಾಡಿದರೆ, 7 ಬಾರಿ ಪ್ರೇಕ್ಷಕರ ಗ್ಯಾಲರಿ ಸೇರಿದೆ. ಇಂಗ್ಲೆಂಡ್ ಈ ಪಂದ್ಯದಲ್ಲಿ ಸೋಲು ಕಂಡಿದೆ. ಆದರೆ ಜಾಕಬ್ ಬೆಥೆಲ್ ಆಟ ಎಲ್ಲರ ಗಮನ ಸೆಳೆದಿದೆ.

Jacob Bethell

ಆರ್‌ಸಿಬಿ ಫ್ಯಾನ್ಸ್ ಖುಷ್

ಜಾಕಬ್ ಬೆಥೆಲ್ ಆಟ ಕಂಡು ನಿಜಕ್ಕೂ ಆರ್‌ಸಿಬಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇದಕ್ಕೆ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್‌) ಜಾಕಬ್‌ ಬೆಥೆಲ್‌ ಆರ್‌ಸಿಬಿ ತಂಡದ ಪರವೇ ಆಡುತ್ತಾರೆ. 2025ರ ಮೆಗಾ ಹರಾಜಿನಲ್ಲಿ ಇವರಿಗೆ ಉತ್ತಮ ಮೊತ್ತವನ್ನು ನೀಡಿ ಆರ್‌ಸಿಬಿ ಇವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಅಂದಿನಿಂದ ಇವರು ಆರ್‌ಸಿಬಿ ತಂಡದಲ್ಲಿದ್ದಾರೆ. ಈ ಬಾರಿಯೂ ಇವರನ್ನು ತಂಡ ರಿಟೇನ್ ಮಾಡಿಕೊಂಡಿದ್ದು, ಮ್ಯಾನೇಜ್ಮೆಂಟ್ ಮುಖದಲ್ಲಿ ಮಂದಹಾಸ ಮೂಡಿದೆ. ಇವರಿಗೆ ಕಳೆದ ಬಾರಿಯ ಐಪಿಎಲ್‌ನಲ್ಲಿ ಕೇವಲ 2 ಪಂದ್ಯಗಳನ್ನು ಆಡುವ ಅವಕಾಶ ನೀಡಲಾಗಿತ್ತು. ಈ ಅವಕಾಶವನ್ನು ಬಳಸಿಕೊಂಡಿದ್ದ ಬೆಥೆಲ್ ಒಂದು ಅರ್ಧಶತಕ ಬಾರಿಸಿದ್ದರು.

ಟಿ20 ವಿಶ್ವಕಪ್‌ನಲ್ಲಿ ಬೆಥೆಲ್ ಬ್ಯಾಟಿಂಗ್ ಕಂಡು ಆರ್‌ಸಿಬಿ ಟೀಮ್ ಮ್ಯಾನೇಜ್ಮೆಂಟ್‌ ಸಹ ಹೊಸ ಪ್ಲ್ಯಾನ್ ರೆಡಿ ಮಾಡಿಕೊಳ್ಳುತ್ತಿದೆ. ಈ ಬಾರಿಯ ಐಪಿಎಲ್‌ ಪಂದ್ಯಗಳು ಮಾರ್ಚ್‌ ಅಂತ್ಯದಲ್ಲಿ ನಡೆಯಲಿವೆ.

Story first published: Friday, March 6, 2026, 13:16 [IST]
Other articles published on Mar 6, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+