Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಂಜಿತ್ ಹೆಗಡೆ ನ್ಯೂ ಸಾಂಗ್‌ ಇನ್ RCB ವರ್ಷನ್‌ ಫುಲ್‌ ಟ್ರೆಂಡಿಂಗ್‌: ಈ ಹಾಡು ಕೇಳಿದ್ರೆ ಫಿದಾ ಗ್ಯಾರಂಟಿ

ಸಾಮಾಜಿಕ ತಾಣವನ್ನು ಓಪನ್ ಮಾಡಿದ್ರೆ ನೀವು ಅಲ್ಲಿ ಕರ್ನಾಟಕದ ಸೂಪರ್ ಸ್ಟಾರ್‌ ಗಾಯಕ ಸಂಜಿತ್ ಹೆಗಡೆ ಹಾಗೂ ಸೋನು ನಿಗಮ್‌ ಅವರ ಹೊಸ ಹಾಡಿನ ವಿಡಿಯೋ ನೋಡಿರ್ತಿರಾ. ಈ ವಿಡಿಯೋ ಸಖತ್‌ ಟ್ರೆಂಡ್‌ ಸೃಷ್ಟಿಸಿದೆ. ಈ ವಿಡಿಯೋವನ್ನೇ ಬೇಸ್ ಆಗಿಟ್ಟುಕೊಂಡು ಉತ್ತರ ಕರ್ನಾಟಕದ ಪ್ರತಿಭಾನ್ವಿಂತ ಕಲಾವಿದರು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದ್ದಾರೆ. ಈ ಹಾಡು ಈಗ ಸಖತ್ ಟ್ರೆಂಡ್‌ ಸೃಷ್ಟಿಸಿದೆ.

ವಿಡಿಯೋವನ್ನು ಪ್ಲೇ ಮಾಡುತ್ತಿದ್ದಂತೆ ನಿಮಗೆ ಆರ್‌ಸಿಬಿ ಜೆರ್ಸಿ ಹಾಕಿಕೊಂಡ ಒಬ್ಬ ಗಾಯಕ ಕಾಣಿಸಿಕೊಳ್ಳುತ್ತಾನೆ. ತನ್ನ ಸುಶ್ರಾವ್ಯ ಕಂಠದಿಂದಲೇ ಅಭಿಮಾನಿಗಳ ಮನ ಗೆಲ್ಲುತ್ತಿರುವ ಪ್ರತಿಭೆ, ಆರ್‌ಸಿಬಿ 17 ವರ್ಷದ ಪಯಣವನ್ನು ಒಂದೇ ಸಾಂಗಿನಲ್ಲಿ ತೆರೆದಿಟ್ಟಿದ್ದಾರೆ. ಈ ಸಾಂಗ್‌ ನಿಜಕ್ಕೂ ಆರ್‌ಸಿಬಿ ಅಭಿಮಾನಿಗಳ ನೋವನ್ನು ಎತ್ತಿ ತೋರಿಸುವಂತೆ ಇದೆ. ಆರ್‌ಸಿಬಿ ಇಷ್ಟು ವರ್ಷಗಳಿಂದ ಕಪ್‌ ಗೆಲ್ಲದೇ ಇದ್ರೂ ಸಹ, ಹುಟ್ಟಿಸಿರುವ ಕ್ರೇಜ್‌ಗೆ ಈ ಹಾಡು ಕೈಗನ್ನಡಿ ಹಿಡಿದಂತಿದೆ.

RCB Fans Song Goes Viral with Heartfelt Song Inspired by Sanjith Hegde and Sonu Nigam s Tune

ಉತ್ತರ ಕರ್ನಾಟಕದ ಸಾಗರ್‌ ಸತ್ತಿಕಾರ್ ಹಾಡಿರುವ ಹಾಗೂ ಮಂಜುನಾಥ್ ಪರಶೆಟ್ಟಿ ಬರೆದಿರುವ ಹಾಡು ಸದ್ಯ ಅಭಿಮಾನಿಗಳ ಮನ ಗೆದ್ದಿದೆ. ಮಾಯಾವಿ ಹಾಡಿನ ಟ್ಯೂನ್‌ ಇಟ್ಟುಕೊಂಡು ಸಖತ್‌ ಅಕ್ಷರ್ ಜೋಡಣೆ ಮಾಡಲಾಗಿದೆ. ಈ ಸಾಂಗ್‌ನಲ್ಲಿ ಆರ್‌ಸಿಬಿ ಮೇಲೆ ಅಭಿಮಾನಿಗಳ ಇಟ್ಟಿರುವ ಪ್ರೀತಿಯನ್ನು ತೋರಿಸುತ್ತದೆ. ಆರ್‌ಸಿಬಿ ಫ್ಯಾನ್ಸ್‌ ನೋವಿನ ಕಥೆಯನ್ನು ಸಾರುವಂತಿದೆ. ಒಂದೇ ಒಂದು ಬಾರಿ ಕಪ್‌ ಗೆಲ್ಲದೇ ಇರುವ ಆರ್‌ಸಿಬಿ ತಂಡದ ನೋವಿನ ಪಯಣವನ್ನು ಈ ಹಾಡಿನಲ್ಲಿ ತೋರಿಸಲಾಗಿದೆ.

ಫುಲ್‌ ಟ್ರೆಂಡಿಂಗ್‌

ಈ ಬಾರಿಯೂ ಕಪ್‌ ನಮ್ದೆ ಮುಂದಿನ ಸಲನೂ ಕಪ್‌ ನಮ್ದೆ ಎಂದು ಹೇಳುತ್ತಾ ಸಿಂಗರ್‌ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಆರ್‌ಸಿಬಿ ಈ ಬಾರಿ ನೀಡುತ್ತಿರುವ ಪ್ರದರ್ಶನ ಹಾಗೂ ಈ ಹಾಡು ಎರಡೂ ಸಿಂಕ್‌ ಆಗುತ್ತಿದ್ದು, ಸಾಮಾಜಿಕ ತಾಣದಲ್ಲಿ ಈ ಹಾಡು ಸಖತ್ ಸಂಚಲನವನ್ನು ಮೂಡಿಸಿದೆ.

18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ಸ್ಥಿರ ಪ್ರದರ್ಶನದಿಂದ ಪಂದ್ಯಗಳನ್ನು ಗೆಲ್ಲುತ್ತಾ ಸಾಗಿದೆ. ತವರಿನಾಚೆ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಅಭಿಮಾನಿಗಳ ಮನ ಗೆದ್ದಿದೆ. 17 ವರ್ಷಗಳ ಬಳಿಕ ಚೆನ್ನೈನಲ್ಲಿ, 10 ವರ್ಷಗಳ ಬಳಿಕ ಮುಂಬೈನಲ್ಲಿ ಗೆಲುವು ದಾಖಲಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ತವರಿನಲ್ಲಿ ಮೊದಲ ಗೆಲುವಿನ ನಗೆ ಬೀರಲು ಪ್ಲ್ಯಾನ್ ಮಾಡಿಕೊಂಡಿದೆ.

ಆರ್‌ಸಿಬಿ ಪ್ರದರ್ಶನ

ಆರ್‌ಸಿಬಿ ಈ ಬಾರಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಬಲಿಷ್ಠವಾಗಿದ್ದು, ಸಖತ್ ಪ್ರದರ್ಶನ ನೀಡುತ್ತಿದೆ. ಆಡಿರುವ 8 ಪಂದ್ಯಗಳಲ್ಲಿ 5 ಜಯ, 3 ಸೋಲು ಕಂಡಿರುವ ಬೆಂಗಳೂರು ತಂಡ 10 ಅಂಕಗಳನ್ನು ಕಲೆ ಹಾಕಿದ್ದು, ಮೂರನೇ ಸ್ಥಾನದಲ್ಲಿದೆ. ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಬೆಂಗಳೂರಿನಲ್ಲಿ ಏಪ್ರಿಲ್‌ 24 ರಂದು ರಾಜಸ್ಥಾನ ವಿರುದ್ಧ ಆಡಲಿದೆ.

Story first published: Tuesday, April 22, 2025, 14:57 [IST]
Other articles published on Apr 22, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+