ಐಪಿಎಲ್: ಆರ್‌ಸಿಬಿ ಬೆನ್ನು ಹತ್ತಿದೆ ಅತಿ ಹೆಚ್ಚು ''ಕ್ಯಾಚ್ ಡ್ರಾಪ್'' ದಾಖಲೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ 6ನೇ ಪಂದ್ಯದಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ಫೀಲ್ಡರ್ಸ್ ಪ್ರದರ್ಶನ ಕಂಡು ಅಭಿಮಾನಿಗಳು ಕಂಗಾಲಾಗಿದ್ದಾರೆ. ಅದರಲ್ಲೂ ನಾಯಕ ವಿರಾಟ್ ಕೊಹ್ಲಿಯೇ ಕಳಪೆ ಫೀಲ್ಡಿಂಗ್ ಮಾಡಿದ್ದು ಆತಂಕ ಹೆಚ್ಚಿದೆ.
ಪಂದ್ಯ ಆರಂಭಕ್ಕೂ ಮುನ್ನ ಆರ್ ಸಿಬಿ ಬೌಲಿಂಗ್ ಹೇಗಿರುತ್ತೋ ಎಂಬ ಆತಂಕವಿತ್ತು. ಕಳೆದ ಪಂದ್ಯದಲ್ಲಿ ಆಡಿದ 11 ಮಂದಿಯನ್ನೇ ಕೊಹ್ಲಿ ಕಣಕ್ಕಿಳಿಸಿದ್ದರು. ಉಮೇಶ್ ಯಾದವ್ ಎಂದಿನಂತೆ ಬಿರುಗಾಳಿ ವೇಗದಲ್ಲಿ ಬಂದು ಚೆಂಡು ಎಸೆದಿದ್ದು ರನ್ ಹೊಡೆಸಿಕೊಂಡಿದ್ದು ಆಯಿತು. ಪುಣ್ಯಕ್ಕೆ ಇತ್ತೀಚೆಗೆ ಉಮೇಶ್ ಯಾದವ್ ಗೆ 16 ರಿಂದ 20 ಓವರ್ ಅವಧಿಯಲ್ಲಿ ಬೌಲಿಂಗ್ ಮಾಡುತ್ತಿಲ್ಲ. ಇವತ್ತು ಉಮೇಶ್ ಬದಲಿಗೆ ಡೇಲ್ ಸ್ಟೈನ್ 57 ರನ್ ಚೆಚ್ಚಿಸಿಕೊಂಡರು. ಕೊನೆ ಎರಡು ಓವರ್ ಗಳಲ್ಲಿ 49 ರನ್ ಬಿಟ್ಟು ಕೊಟ್ಟ ಆರ್ ಸಿಬಿಗೆ ಬೌಲಿಂಗ್ ಜೊತೆಗೆ ಫೀಲ್ಡಿಂಗ್ ಕೂಡಾ ಕೈಕೊಟ್ಟಿತು.
ವಿರಾಟ್ ಕೊಹ್ಲಿ ಸತತವಾಗಿ ಕೈಗೆ ಬಂದ ಎರಡು ಕ್ಯಾಚ್ ಕೈ ಚೆಲ್ಲಿದರು. ಎರಡು ಕೂಡಾ ಎದುರಾಳಿ ನಾಯಕ ಕೆಎಲ್ ರಾಹುಲ್ ಅವರಿಗೆ ನೀಡಿದ ಜೀವದಾನವಾಗಿತ್ತು. ಆರಂಭಿಕನಾಗಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಅಜೇಯರಾಗಿ ಉಳಿದು 69 ಎಸೆತಗಳಲ್ಲಿ 132(14 ಬೌಂಡರಿ, 7ಸಿಕ್ಸರ್ ) ಸಿಡಿಸಿದರು. ಐಪಿಎಲ್ 2020ರಲ್ಲಿ ಮೊದಲ ಶತಕ ಗಳಿಸಿದ ಆಟಗಾರ, ನಾಯಕ ಎನಿಸಿಕೊಂಡರು. ಅತ್ಯಧಿಕ ರನ್ ಗಳಿಸಿದ ಭಾರತೀಯ ಬ್ಯಾಟ್ಸ್ ಮನ್ ಹಾಗೂ ನಾಯಕ ಎಂಬ ದಾಖಲೆಯನ್ನು ಬರೆದರು.
ಇದೆಲ್ಲ ಸಾಧನೆ ಕೊಹ್ಲಿ ಬಿಟ್ಟ ಎರಡು ಕ್ಯಾಚ್ ಸಹಾಯಕವಾಯಿತು. ಈ ಸೀಸನ್ ನ 2 ಪಂದ್ಯಗಳಲ್ಲಿ ಒಟ್ಟು 6 ಕ್ಯಾಚ್ ಗಳನ್ನು ಆರ್ ಸಿಬಿ ಬಿಟ್ಟಿದೆ. ಕಳೆದ ಸೀಸನ್ ನಲ್ಲಿ ಒಟ್ಟು 24 ಕ್ಯಾಚ್ ಕೈಚೆಲ್ಲಿದ್ದ ಆರ್ ಸಿಬಿ ಅತಿ ಹೆಚ್ಚು ಕ್ಯಾಚ್ ಡ್ರಾಪ್ ಮಾಡಿದ ತಂಡ ಎನಿಸಿತ್ತು. ಇದನ್ನು ನೋಡಿದ ಅಭಿಮಾನಿಗಳು ಆರ್ ಸಿಬಿಯ ಫೀಲ್ಡಿಂಗ್ ಕೋಚ್ ಎಂ ರಂಗರಾಜನ್ ಏನು ಮಾಡುತ್ತಿದ್ದಾರೆ ಮೊದಲು ಕೆಳಗಿಳಿಸಿ ಎಂದು ಟ್ವೀಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications